ಮೂಡುಬಿದಿರೆ: ಅಳಿಯೂರು- ವಾಲ್ಪಾಡಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವತಿಯಿಂದ ನಡೆದ ಗಣೇಶೋತ್ಸವದಲ್ಲಿ 28 ವರ್ಷಗಳ ಪತ್ರಿಕಾ ರಂಗದ ಸೇವೆಗಾಗಿ ನಮ್ಮಬೆದ್ರ ಪತ್ರಿಕೆಯ ಸಂಪಾದಕ ಅಶ್ರಫ್ ವಾಲ್ಪಾಡಿ ಅವರನ್ನು ಸನ್ಮಾನಿಸಲಾಯಿತು.
ದರೆಗುಡ್ಡೆ ಶ್ರೀ ಶಂಭುಲಿಂಗೇಶ್ವರ ದೇವಸ್ಥಾನದ ಮೊಕ್ತೇಸರರಾದ ನರಸಿಂಹ ತಂತ್ರಿ, ತಾ.ಪಂ.ಮಾಜಿ ಸದಸ್ಯ ರುಕ್ಕಯ್ಯ ಪೂಜಾರಿ, ಮೂಡುಬಿದಿರೆ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಶೇಖರ್ (ಬೊಳ್ಳಿ), ಶ್ರೀ ಅಮರನಾಥ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ನ ಸ್ಥಾಪಕಿ ಡಾ.ಅಮರಶ್ರೀ, ಕಾಂಗ್ರೆಸ್ ಮುಖಂಡ ಗಣೇಶ್ ಪ್ರಸಾದ್ ಮೂಡುಕೊಣಾಜೆ, ಕೋಟಿ ಚೆನ್ನಯ ಮಹಿಳಾ ಘಟಕದ ಅಧ್ಯಕ್ಷೆ ಶೋಭಾ ಲಕ್ಷ್ಮಣ್, ಶಿಕ್ಷಕಿ ಶ್ವೇತಾ ರಾಜೇಶ್,ಗಣೇಶೋತ್ಸವ ಸಮಿತಿಯ ಸ್ಥಾಪಕಾಧ್ಯಕ್ಷ ವೇದಪ್ರಕಾಶ್ ಪಡಿವಾಳ್, ಅಧ್ಯಕ್ಷ ಹರೀಶ್ ಬಿ.ಪೂಜಾರಿ, ಕಾರ್ಯದರ್ಶಿ ರಾಜೇಶ್ ಆಚಾರ್ಯ, ಉಪಾಧ್ಯಕ್ಷ ರವೀಂದ್ರ ಅಮೀನ್, ಪ್ರದೀಪ್ ಪಣಪಿಲ ಹಾಗೂ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಶಿವಾನಂದ ಪಾಂಡ್ರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

0 Comments