ಮತ್ತೊಂದು ವಿಶ್ವದಾಖಲೆಗೆ ಗಾಯಕ ಯಶವಂತ ಎಂ.ಜಿ. ಸಜ್ಜು:ಪೋಸ್ಟರ್ ಬಿಡುಗಡೆಗೊಳಿಸಿದ ಕಾಂಗ್ರೆಸ್ ಮುಖಂಡ ಮಿಥುನ್ ರೈ
“ಒಂದೇ ಭಾರತ – ಶ್ರೇಷ್ಠವಾದ ಭಾರತ” ಎಂಬ ಮಹತ್ವದ ತತ್ವವನ್ನು ಆಧರಿಸಿ, ಭಾರತದ ಏಕತೆ, ವೈವಿಧ್ಯತೆ ಮತ್ತು ಭಾಷಾ ಸೌಹಾರ್ದತೆಯನ್ನು ವಿಶ್ವದ ಮುಂದೆ ಸಾರುವ ಉದ್ದೇಶದಿಂದ ವಿದ್ವಾನ್ ಯಶವಂತ್ ಎಂ. ಜಿ. ಅವರು ಕೈಗೊಂಡಿರುವ ವಿಶಿಷ್ಟ ವಿಶ್ವದಾಖಲೆ ಪ್ರಯತ್ನಕ್ಕೆ ಕೆ. ಪಿ. ಸಿ. ಸಿ ಕರ್ನಾಟಕ ಕಾರ್ಯದರ್ಶಿ ಮಿಥುನ್ ರೈ ಅವರು ವಿಶ್ವದಾಖಲೆ ಕಾರ್ಯಕ್ರಮದ ಪೋಸ್ಟರ್‌ನ್ನು ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಮಿಥುನ್ ರೈ ಅವರು, ಭಾರತದ ವೈವಿಧ್ಯಮಯ ಭಾಷಾ ಸಂಸ್ಕೃತಿಯನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಈ ವಿಶೇಷ ಪ್ರಯತ್ನ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಮುಂಬರುವ ಅಕ್ಟೋಬರ್ 28 ಮತ್ತು 29ರಂದು, ಭಾರತದ ಇತಿಹಾಸದಲ್ಲೇ ವಿಶಿಷ್ಟವೆನಿಸುವ ರೀತಿಯಲ್ಲಿ 28 ರಾಜ್ಯಗಳ 28 ಭಾಷೆಗಳನ್ನು ಆಧರಿಸಿ, ನಿರಂತರ 28 ಗಂಟೆಗಳ ಕಾಲ ವಿದ್ವಾನ್ ಯಶವಂತ್ ಎಂ. ಜಿ. ಅವರಿಂದ ಗಾಯನ ಕಾರ್ಯಕ್ರಮ ರವೀಂದ್ರ ಕಲಾಕ್ಷೇತ್ರ ಜೆ ಸಿ ರಸ್ತೆ ಬೆಂಗಳೂರಿನಲ್ಲಿ ನಡೆಯಲಿದೆ.
ಭಾರತದ ಏಕತೆ, ಅಖಂಡತೆ ಮತ್ತು ಭಾಷಾ ವೈವಿಧ್ಯತೆಯನ್ನು ಸಂಗೀತದ ಮೂಲಕ ಸಾರುವ ಈ ಐತಿಹಾಸಿಕ ಕಾರ್ಯಕ್ರಮವಾಗಿದೆ.
ಈ ಸಂದರ್ಭದಲ್ಲಿ
ನಿಕಟಪೂರ್ವ ನಗರಸಭಾ ಸದಸ್ಯರಾದ ಶ್ರೀ ಪುರಂದರ ದೇವಾಡಿಗರು ಮೂಡಬಿದಿರೆ.
ಶ್ರೀ ಹರ್ಷವರ್ಧನ್ ಪಡಿವಾಳ್,ಯೋಜನಾ ಪ್ರಾಧಿಕಾರ ಮೂಡಬಿದಿರೆ, ಶ್ರೀ ಚಂದ್ರಹಾಸ ಸನೀಲ್ ಕಂಬಳ ಸಮಿತಿ ಅಧ್ಯಕ್ಷರು,
ಮೂಡಬಿದ್ರೆಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಪ್ರವೀಣ್ ಕುಮಾರ್,
ಶ್ರೀ ಸುರೇಶ್ ಪ್ರಭು, ನಿಕಟಪೂರ್ವ ನಗರಸಭಾ ಸದಸ್ಯರು,
ಶ್ರೀ ನವೀನ್ ಕೋಟ್ಯಾನ್, ಶ್ರೀಮತಿ ಮಲ್ಲಿಕಾ ಸುಕೇಶ್, ಶ್ರೀ ರಾಜೇಶ್ ಶೆಟ್ಟಿ, ಶ್ರೀ ಸಂತೋಷ್ ಶೆಟ್ಟಿ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.

0 Comments