ಕುರಾಲ್ ತಂಡದ ನೂತನ ನಾಟಕ "ಅಪ್ಪೆ" ಪ್ರದಶ೯ನ ಉದ್ಘಾಟನೆ

ಕುರಾಲ್ ತಂಡದ ನೂತನ ನಾಟಕ "ಅಪ್ಪೆ" ಪ್ರದಶ೯ನ ಉದ್ಘಾಟನೆ 

ಮೂಡುಬಿದಿರೆ: ತುಳುನಾಡಿನ ಜನರು ಇಂದು ತುಳು ರಂಗಭೂಮಿಗೆ ಹೆಚ್ಚಿನ ಪ್ರೋತ್ಸಾಹ ನೀಡಿ ಬೆಳೆಸಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಹೇಳಿದರು. 

ಅವರು ಕುರಲ್ ಕಲಾವಿದೆರ್ ಬೆದ್ರ ತಂಡದ ವತಿಯಿಂದ ಬುಧವಾರ ರಾತ್ರಿ ಕನ್ನಡ ಭವನದಲ್ಲಿ ನಡೆದ ನೂತನ ನಾಟಕ `ಅಪ್ಪೆ'  ಇದರ ಉಚಿತ ಪ್ರದರ್ಶನದ ಸಭಾ ಕಾಯ೯ಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. 

ನಾಟಕವು ಹಿಂದೆ ಜನರಿಗೆ ಮನರಂಜನೆ ನೀಡುವ ಮಾಧ್ಯಮವಾಗಿತ್ತು.ನಾನು ಚಿಕ್ಕವನಾಗಿದ್ದಾಗ ನನ್ನ ತಂದೆ ಜತೆ ತುಳು ನಾಟಕಗಳನ್ನು ನೋಡಲು ಬೇರೆ ಬೇರೆ ಕಡೆ ಹೋಗುತ್ತಿದ್ದುದರಿಂದ ಕಲೆ, ಸಾಹಿತ್ಯದ ಬಗ್ಗೆ ನನಗೆ ಅಭಿರುಚಿ ಬೆಳೆಯಲು ಪ್ರೇರಣೆಯಾಗಿದೆ ಎಂದು ಹೇಳಿದರು.
  ಮತ್ತೋರ್ವ ಮುಖ್ಯ ಅತಿಥಿ ಜಿಲ್ಲಾ ಬಿಜೆಪಿ ಮುಖಂಡ ಸುದರ್ಶನ್ ಎಂ. ಮಾತನಾಡಿ ತುಳುನಾಡಿನ ಕಾರಣಿಕ ದೈವ ಮಂತ್ರ ದೇವತೆಯ ಕತೆಯನ್ನಾಧರಿಸಿದ ಅಪ್ಪೆ ನಾಟಕ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡಲಿ ಎಂದರು. 



ಗಣೇಶ್ ನಾರಾಯಣ ಪಂಡಿತ್ ವೇಣೂರು, ಸಾಮಾಜಿಕ ಕಾರ್ಯಕರ್ತ ಅಕ್ಷಯ್ ಜೈನ್, ಮೂಡುಬಿದಿರೆ ಇಲೆವೆನ್ ತಂಡದ ಮುಖ್ಯಸ್ಥ  ಹರೀಶ್ ಕುಮಾರ್, ನಾಗೇಶ್ ಬಂಗೇರ ಅಳಿಯೂರು, ಕುರಾಲ್ ತಂಡದ ಮುಖ್ಯಸ್ಥರಾದ ಪ್ರಸಾದ್ ಆಳ್ವ, ಬಾಲಿಕಾ ಪ್ರಸಾದ್ ಉಪಸ್ಥಿತರಿದ್ದರು.  

ಗಣೇಶ್ ಬಿ.ಅಳಿಯೂರು ನಿರೂಪಿಸಿದರು.

Post a Comment

0 Comments

Advertisement