ಸೆ. 5ರಂದು ಮೂಡುಬಿದಿರೆ ಪೇಟೆಯಲ್ಲಿ ವಾಹನ ಸಂಚಾರ ಮಾಗ೯ ಬದಲಾವಣೆ
ಮೂಡುಬಿದಿರೆ : ಶ್ರೀ ಗೋಪಾಲಕೃಷ್ಣ ದೇವಸ್ಥಾನದ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮೂಡುಬಿದಿರೆ ಪೇಟೆಯಲ್ಲಿ ಮೊಸರುಕುಡಿಕೆ ಉತ್ಸವದ ಶೋಭಾಯಾತ್ರೆ ಮೆರವಣೆಗೆ ಇರುವುದರಿಂದ ಪೇಟೆಯಲ್ಲಿ ವಾಹನಗಳ ಸಂಚಾರದ ಮಾರ್ಗಗಳನ್ನು ಈ ಕೆಳಗಿನಂತೆ ಬದಲಾವಣೆ ಮಾಡಲಾಗಿದೆ.
*ಮಂಗಳೂರಿನಿಂದ ಕಾರ್ಕಳ ಕಡೆಗೆ ಸಂಚರಿಸುವ ವಾಹನಗಳು ಮೂಡುಬಿದಿರೆ ಹೊರವರ್ತುಲ ರಸ್ತೆಯಾದ ಇನ್ನರ್ ವೀಲ್, ರಿಂಗ್ ರೋಡ್ ,ಅಲಂಗಾರ್ ಮಾರ್ಗವಾಗಿ ಕಾರ್ಕಳ ಕಡೆಗೆ ಸಂಚರಿಸುವುದು,
*ಮಂಗಳೂರಿನಿಂದ ಮೂಡುಬಿದಿರೆ ಬೆಳ್ತಂಗಡಿ,ಬಂಟ್ವಾಳ ಕಡೆಗಳಿಗೆ ಸಂಚರಿಸುವ ವಾಹನಗಳು ಮೂಡುಬಿದಿರೆಯ ಹೊರವರ್ತುಲ್ ರಸ್ತೆಯಾದ ವಿದ್ಯಾಗಿರಿ-ಮಾಸ್ತಿಕಟ್ಟೆ ಕ್ರಾಸ್ ರಸ್ತೆ, ಮಾಸ್ತಿಕಟ್ಟೆ, ಪೇಪರ್ ಮಿಲ್ ಕ್ರಾಸ್ ರಸ್ತೆ , ಪೇಪರ್ ಮಿಲ್ಲ್ ಯಾಗಿ ಬಂಟ್ವಾಳ ಕಡೆಗೆ ಕೀರ್ತಿನಗರವಾಗಿ ಬೆಳ್ತಂಗಡಿ ಕಡೆಗೆ ಸಂಚರಿಸುವುದು
* ಮೂಡುಬಿದಿರೆಯಿಂದ ಶಿರ್ತಾಡಿ ಕಡೆಗೆ ಸಂಚರಿಸುವವರು ಮೂಡುಬಿದಿರೆ ಹೊರವರ್ತುಲ ರಸ್ತೆಯಾದ ಇನ್ನರ್ ವೀಲ್, ರಿಂಗ್ ರೋಡ್ ,ಅಲಂಗಾರ, ಜೈನ್ ಪೇಟೆ ಮಾರ್ಗವಾಗಿ ಶಿರ್ತಾಡಿ ಕಡೆಗೆ ಸಂಚರಿಸುವುದು.
*ಬೆಳ್ತಂಗಡಿ ಕಡೆಯಿಂದ ಮಂಗಳೂರು ಕಡೆಗೆ ಸಂಚರಿಸುವ ಘನ ವಾಹನಗಳು ಮೂಡುಬಿದಿರೆ ಹೊರವರ್ತುಲ ರಸ್ತೆಯಾದ ಪೇಪರ್ ಮಿಲ್, ಮಾಸ್ತಿಕಟ್ಟೆ, ವಿದ್ಯಾಗಿರಿ ಮಾರ್ಗವಾಗಿ ಮಂಗಳೂರು ಕಡೆಗೆ ಸಂಚರಿಸುವುದು.
*ಬೆಳ್ತಂಗಡಿ ಕಡೆಯಿಂದ ಮಂಗಳೂರು ಕಡೆಗೆ ಸಂಚರಿಸುವ ಲಘು ವಾಹನಗಳು ಮೂಡುಬಿದಿರೆ ಹೊರವರ್ತುಲ ರಸ್ತೆಯಾದ ಸತ್ಯನಾರಾಯಣ ದೇವಸ್ಥಾನ, ಅಮರಶ್ರೀ ಟಾಕೀಸ್, ಪುರಸಭೆ, ನಿಶ್ಮೀತಾ ಸರ್ಕಲ್ ಮಾರ್ಗವಾಗಿ ಮಂಗಳೂರು ಕಡೆಗೆ ಸಂಚರಿಸುವುದು.
*ಬೆಳ್ತಂಗಡಿ, ಬಂಟ್ವಾಳ ಕಡೆಯಿಂದ ಕಾರ್ಕಳ ಕಡೆಗೆ ಸಂಚರಿಸು ವಾಹನಗಳು ಮೂಡುಬಿದಿರೆ ಹೊರವರ್ತುಲ ರಸ್ತೆಯಾದ ಮಹಾವೀರ ಕಾಲೇಜು ಕೊಡಂಗಲ್ಲು ಕ್ರಾಸ್, ಕೋಟೆಬಾಗಿಲು, ಜೈನ್ ಪೇಟೆ ಮಾರ್ಗವಾಗಿ ಮಂಗಳೂರು ಕಡೆಗೆ ಸಂಚರಿಸುವುದು.
* ಮೊಸರು ಕುಡಿಕೆ ಉತ್ಸವಕ್ಕೆ ಬರುವ ಸಾರ್ವಜನಿಕರು ತಮ್ಮ ವಾಹನವನ್ನು ಪೊಲೀಸ್ ಠಾಣೆ ಬಳಿ ಶಾಲಾ ಮೈದಾನ ,ಕೆಇಬಿ ಬಳಿ, ಕೈಕಂಬ ಜಂಕ್ಷನ್ ಬಳಿ ಇರುವ ಖಾಲಿ ಜಾಗ ಹಾಗೂ ಸ್ವರಾಜ್ಯ ಮೈದಾನ ಬಳಿ ಪಾರ್ಕಿಂಗ್ ಮಾಡುವುದು.
*ಮೂಡುಬಿದಿರೆ ಪೇಟೆ ಬಸ್ ನಿಲ್ದಾಣ ಬಳಿ, ಸಮಾಜ ಮಂದಿರ ಬಳಿ, ಮಾರ್ಕೇಟ್ ಕಟ್ಟಡ ಬಳಿ, ಹನುಮಾನ ದೇವಸ್ಥಾನ ಬಳಿ ಮಸೀದಿ ರಸ್ತೆಯಲ್ಲಿ ,ಆಳ್ವಾಸ್ ಆಸ್ಪತ್ರೆ ರಸ್ತೆಯಲ್ಲಿ , ಪುರಸಭೆಯ ರಸ್ತೆಯಲ್ಲಿ ,ಪಟ್ಟಾಡಿ ರಸ್ತೆಯಲ್ಲಿ ಅಮರಶ್ರೀ ಟಾಕೀಸ್ ರಸ್ತೆಯಲ್ಲಿ ವಾಹನಗಳ ಪಾರ್ಕಿಂಗ್ ನ್ನು ಸಂಪೂರ್ಣವಾಗಿ ನಿಷೇದಿಸಲಾಗಿದೆ, ಸಾರ್ವಜನಿಕರು ಸಹಕರಿಬೇಕೆಂದು ಪೊಲೀಸ್ ಇಲಾಖೆಯು ಮನವಿ ಮಾಡಿದೆ.

0 Comments