ವಿವಿಧ ಇಲಾಖಾಧಿಕಾರಿಗಳ ಗೈರು : ಪುತ್ತಿಗೆ ಗ್ರಾಮಸಭೆ ರದ್ದು
ಮೂಡುಬಿದಿರೆ: ವಿವಿಧ ಇಲಾಖಾಧಿಕಾರಿಗಳು ಸಭೆಗೆ ಗೈರಾದ ಹಿನ್ನೆಲೆಯಲ್ಲಿ ಸೋಮವಾರ ನಡೆಯಲಿದ್ದ ಪುತ್ತಿಗೆ ಗ್ರಾಮ ಪಂಚಾಯತ್ ನ 2026-27ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯನ್ನು ರದ್ದುಗೊಳಿಸಿ ಸೆಪ್ಟೆಂಬರ್ 24ಕ್ಕೆ ಮುಂದೂಡಲಾಗಿದೆ.
ಮುಖ್ಯವಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಮೂಡಾ, ಮೆಸ್ಕಾಂ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಗ್ರಾಮ ಸಭೆಗೆ ಗೈರಾಗಿದ್ದರು.
ಇದನ್ನು ಖಂಡಿಸಿದ ಗ್ರಾಮಸ್ಥರು ಸಭೆಯನ್ನು ರದ್ದುಗೊಳಿಸುವಂತೆ ಆಗ್ರಹಿಸಿದರಿಂದ ಪಿಡಿಓ ಭೀಮ ನಾಯಕ್ ಅವರು ರದ್ದುಗೊಳಿಸಿ ಸೆ. 24ಕ್ಕೆ ಮುಂದೂಡಿಸುವ ಕ್ರಮವನ್ನು ಕೈಗೊಂಡರು.

0 Comments