ಮೂಡುಬಿದಿರೆ : ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕಲ್ಲಬೆಟ್ಟು ಮಾರೂರು, ಕರಿಂಜೆ ಇದರ ರಜತ ಸಂಭ್ರಮದ ಗಣೇಶೋತ್ಸವದ ಅಂಗವಾಗಿ ಕಲ್ಲಬೆಟ್ಟು ಸೇವಾ ಸಹಕಾರಿ ಸಂಘದ ವಠಾರದಲ್ಲಿ ಭಾನುವಾರ ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪಧೆ೯ಗಳು ನಡೆಯಿತು.
ಉದ್ಯಮಿ ಕೋಟೆಬಾಗಿಲಿನ ರಾಜೇಶ್ ಕೋಟೆಕಾರ್ ಕ್ರೀಡಾ ಸ್ಪಧೆ೯ಗಳನ್ನು ಉದ್ಘಾಟಿಸಿದರು.
25ನೇ ವಷ೯ದ ಸಾವ೯ಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ರಾಜೇಶ್ ಬೈಲೂರು, ಶ್ರೀ ಗಣೇಶ ಸೇವಾ ಟ್ರಸ್ಟ್ ಕಲ್ಲಬೆಟ್ಟು ಇದರ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್, ಸ್ವಣ೯ ಗೌರಿ ಮಾತೃ ಮಂಡಳಿಯ ಅಧ್ಯಕ್ಷೆ ಶಕುಂತಳಾ ರಾಮಚಂದ್ರ, ಸಾಂಸ್ಕೃತಿಕ ಸ್ಪಧಾ೯ ನಿವಾ೯ಹಕ ಗೋಪಾಲಕೃಷ್ಣ ಜಿ. ಕೆ. ಬಂಗಾಲಪದವು, ಶಿಕ್ಷಕ ಸುಧಾಕರ, ಸುಧೀರ್ ಪೈ ಹಾಗೂ ಮಾತೃಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.
ಮಕ್ಕಳಿಗೆ, ಮಹಿಳೆಯರಿಗೆ ಮತ್ತು ಪುರುಷರ ವಿಭಾಗದಲ್ಲಿ ವಿವಿಧ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪಧೆ೯ಗಳು ಹಾಗೂ ಮನೋರಂಜನಾ ಆಟಗಳು ನಡೆದವು.

0 Comments