ಮೂಡುಬಿದಿರೆಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುವಿನ 172ನೇ ಜನ್ಮ ದಿನಾಚರಣೆ
ಮೂಡುಬಿದಿರೆ : ಬ್ರಹ್ಮಶ್ರೀ ನಾರಾಯಣ ಗುರುಗಳು ಹಿಂದೂ ಸಮಾಜದ ಉತ್ತಮ ದಾಶ೯ನಿಕ. ಅವರು ಅಸ್ಪ್ರಶ್ಯತೆಯನ್ನು ಹೋಗಲಾಡಿಸಿದ ನಂತರ ಹಿಂದೂ ಸಮಾಜಕ್ಕೆ ಶಿಕ್ಷಣ ಮತ್ತು ಆಥಿ೯ಕ ಸಬಲೀಕರಣದ ಅಗತ್ಯವಿದೆ ಎಂದು ಅರಿತುಕೊಂಡವರು ಆದ್ದರಿಂದ ಈ ಸಮಾಜದಲ್ಲಿ ಯಾರು ಅಶಕ್ತರು, ಅವಕಾಶ ವಂಚಿತರಿದ್ದಾರೋ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವಂತಹ ಕೆಲಸವನ್ನು ನಾವು ಮಾಡಿದರೆ ಗುರುಗಳ ಜನ್ಮದಿನಾಚರಣೆಗೆ ಅಥ೯ ನೀಡಿದಂತ್ತಾಗುತ್ತದೆ ಎಂದು ಮಂಗಳೂರು ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದರು.
ಅವರು ಬ್ರಹ್ಮಶ್ರೀ ನಾರಾಯಣ ಸ್ವಾಮಿ ಸೇವಾ ಸಂಘ, ಶ್ರೀ ನಾರಾಯಣ ಗುರು ಸೇವಾದಳ ಹಾಗೂ ಶ್ರೀ ನಾರಾಯಣ ಗುರು ಮಹಿಳಾ ಘಟಕ ಮೂಡುಬಿದಿರೆ ಇದರ ವತಿಯಿಂದ ಭಾನುವಾರ ಕಾಮಧೇನು ಸಭಾಭವನದಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣ ಗುರುವಿನ 172ನೇ ಜನ್ಮ ದಿನಾಚರಣೆ, ಮೂತಿ೯ ಪ್ರತಿಷ್ಠಾಪನೆಯ 40ನೇ ವಾಷಿ೯ಕೋತ್ಸವ ಸಮಾರಂಭ ಹಾಗೂ ಸತ್ಯನಾರಾಯಣ ಪೂಜೆ, ವಿದ್ಯಾಥಿ೯ ವೇತನ ವಿತರಣೆ ಕಾಯ೯ಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ನಾಲ್ವರಿಗೆ ಗೌರವ ಸನ್ಮಾನ ಮಾಡಿ ಮಾತನಾಡಿದರು.
ನಮ್ಮ ಸಮಾಜ ಇಂದು ಅಸ್ಪ್ರಶ್ಯತೆಯನ್ನು ಕಾನೂನಿನ ರೀತಿಯಲ್ಲಿ ಮಾಡದೆ ಇದ್ದರೂ ಮಾನಸಿಕವಾಗಿ ಬೇರೆ ಬೇರೆ ರೀತಿಯಲ್ಲಿ ಅಸ್ಪ್ರಶ್ಯತೆ ನಮ್ಮಲ್ಲಿ ಇನ್ನೂ ಜೀವಾಂತವಾಗಿದೆ. ನಾವು ಬ್ರಹ್ಮಶ್ರೀ ಗುರುಗಳು ಬದುಕಿದ ರೀತಿ ನೀತಿಯನ್ನು ನಮ್ಮಲ್ಲಿ ಅಳವಡಿಸಿಕೊಂಡರೆ ಇದರಿಂದ ಹೊರ ಬರಬಹುದು ಎಂದರು. ಹಿಂದೂ ಸಮಾಜದ ಪ್ರತಿಯೊಬ್ಬ ವ್ಯಕ್ತಿಯನ್ನು ಆಥಿ೯ಕವಾಗಿ ಸಬಲೀಕರಣಗೊಳಿಸುವ ಪ್ರಯತ್ನ, ಸರಕಾರದ ಯೋಜನೆಗಳನ್ನು ತಲುಪಿಸುವುದು, ಮಾಹಿತಿಯ ಕೊರತೆಯನ್ನು ನೀಗಿಸುವುದು ಅವಕಾಶ ವಂಚಿತರಾಗದಂತೆ ನೋಡಿಕೊಳ್ಳುವಂತಹ ಪ್ರಾಮಾಣಿಕ ಪ್ರಯತ್ನ ಅಗತ್ಯ ಎಂದ ಅವರು ತನಗೆ ಪಕ್ಷ ಹಾಗೂ ಸಮಾಜ ನೀಡಿದ ಜವಾಬ್ದಾರಿಯನ್ನು ಅತ್ಯಂತ ಪ್ರಾಮಾಣಿಕವಾಗಿ ಮಾಡುವುದಾಗಿ ಭರವಸೆ ನೀಡಿದರು.
ಕನಾ೯ಟಕ ಸರಕಾರದ ಹೈಕೋಟ್೯ನ ಹೆಚ್ಚುವರಿ ಎಡ್ವೋಕೇಟ್ ಜನರಲ್ ಇರುವೈಲ್ ತಾರನಾಥ ಪೂಜಾರಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ದೇಶ ಕಂಡ ಶ್ರೇಷ್ಠ ಸಂತ ನಾರಾಯಣ ಗುರುಗಳು. ಮನುಷ್ಯರು ಸೃಷ್ಠಿಸಿದ ಅಸಮಾನತೆ, ಜಾತೀಯತೆ, ವಣ೯ ಬೇಧವನ್ನು ತೊಡೆದು ಹಾಕಲು ಪ್ರಯತ್ನಿಸಿದವರು. ಧಮ೯ಕ್ಕೆ ದಯೆ ಇರಬೇಕು. ಕಂದಕವನ್ನು ಸೃಷ್ಟಿ ಮಾಡುವ ಧಮ೯ ನಮ್ಮದಾಗಬಾರದು. ದೇಶದಲ್ಲಿ ಎಲ್ಲಾ ವಗ೯ದವರಿಗೂ ಸಮಾನಾಂತರ ಶಿಕ್ಷಣ ಸಿಗಬೇಕು, ಸಂಘಟಿತರಾಗಬೇಕು ಮತ್ತು ರಾಜಕೀಯವಾಗಿ ಬೆಳೆಯಬೇಕು ಎಂದ ಅವರು ವಿದ್ಯಾಥಿ೯ಗಳು ಉತ್ತಮ ಜ್ಞಾನ, ಏಕಾಗ್ರತೆ, ಧೈಯ೯, ಕಠಿಣ ಪರಿಶ್ರಮವನ್ನು ಮೈಗೂಡಿಸಿಕೊಂಡರೆ ಜೀವನದಲ್ಲಿ ಯಶಸ್ಸು ಸಾಧ್ಯ ಎಂದರು.
ಶಾಸಕ ಉಮಾನಾಥ ಎ. ಕೋಟ್ಯಾನ್, ಮೂಡುಬಿದಿರೆ ಗಣೇಶೋತ್ಸವ ಟ್ರಸ್ಟ್ ನ ಅಧ್ಯಕ್ಷ ನಾರಾಯಣ ಪಿ. ಎಂ. ಭಾಗವಹಿಸಿ ಶುಭ ಹಾರೈಸಿದರು.
ಕನಾ೯ಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ದಯಾನಂದ ಕತ್ತಲ್ ಸರ್ ಮುಖ್ಯ ಭಾಷಣಗಾರರಾಗಿ ಮಾತನಾಡಿದರು.
ಗೌರವ ಸನ್ಮಾನ : ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ನವೀನ್ ಚಂದ್ರ ಕಕೇ೯ರಾ ಅವರ ಅಧ್ಯಕ್ಷತೆಯಲ್ಲಿ ಮಾಜಿ ಅಧ್ಯಕ್ಷರುಗಳಾದ ಪದ್ಮಯ್ಯ ಬಿ. ಸುವಣ೯, ರವೀಂದ್ರ ಎಂ. ಸುವಣ೯, ಮಾಜಿ ಕಾಯ೯ದಶಿ೯ ಪದ್ಮನಾಭ ಸಾಲ್ಯಾನ್, ಮಾಜಿ ಉಪಾಧ್ಯಕ್ಷ ಪದ್ಮರಾಜ ಪೇರಿ ಅವರನ್ನು ಸನ್ಮಾನಿಸಲಾಯಿತು.
ಬಜ್ಪೆ ಪಟ್ಟಣ ಪಂಚಾಯತ್ ನ ಅಧ್ಯಕ್ಷ ಲೋಕೇಶ್ ಪೂಜಾರಿ, ಉದ್ಯಮಿ ರೋನಿ ಡಿಕುನ್ಹಾ ಮಸ್ಕತ್ ಅತಿಥಿಯಾಗಿ ಭಾಗವಹಿಸಿದ್ದರು.ನಾರಾಯಣಗುರು ಸೇವಾದಳದ ಅಧ್ಯಕ್ಷ ಶಶಿಕಿರಣ್ ಕಲ್ಲಬೆಟ್ಟು, ಮಹಿಳಾ ಘಟಕದ ಅಧ್ಯಕ್ಷೆ ಸವಿತಾ ಜಿತೇಶ್ ಗೌರವ ಉಪಸ್ಥಿತರಿದ್ದರು.
ಉಪಾಧ್ಯಕ್ಷರುಗಳಾದ ಮುರಳೀಧರ್ ಕೋಟ್ಯಾನ್, ಸುಭಾಷ್ ಪೂಜಾರಿ, ಜೊತೆ ಕಾಯ೯ದಶಿ೯ಗಳಾದ ಜಗದೀಶ ಪೂಜಾರಿ, ಭವಿಷ್ಯತ್ ಕೋಟ್ಯಾನ್, ಲೆಕ್ಕ ಪರಿಶೋಧಕ ಪ್ರಭಾಕರ ಕಕೇ೯ರಾ, ಸಂಘಟನಾ ಕಾಯ೯ದಶಿ೯ ಸದಾನಂದ ಬಿ. ಪೂಜಾರಿ, ಸಾಂಸ್ಕೃತಿಕ ಕಾಯ೯ದಶಿ೯ ಉಷಾ ಮಧುಕರ್, ಕ್ರೀಡಾ ಕಾಯ೯ದಶಿ೯ ಶಶಿಧರ ಎಸ್. ಅಂಚನ್ ಎನಿಕ್ರಿಪಲ್ಲ, ಪ್ರಮುಖರಾದ ರವೀಂದ್ರ ಎಂ. ಸುವಣ೯ ಪ್ರಕಾಶ್ ಅಮೀನ್ ಉಪಸ್ಥಿತರಿದ್ದರು.
ಪೂಣಿ೯ಮಾ ಕೋಟ್ಯಾನ್ ಮತ್ತು ಪ್ರಜ್ವಲ್ ಪೂಜಾರಿ ಮಾನಾ೯ಡ್ ಕಾಯ೯ಕ್ರಮ ನಿರೂಪಿಸಿದರು.

0 Comments