ಕಲ್ಲಬೆಟ್ಟು ಗಣೇಶೋತ್ಸವಕ್ಕೆ ಬೆಳ್ಳಿ ಹಬ್ಬದ ಸಂಭ್ರಮ *ಸೆ. 13ರಂದು 'ಶ್ರೀ ಗಣೇಶ ಸೇವಾ ಧಾಮ'ಕ್ಕೆ ಶಿಲಾನ್ಯಾಸ

ಕಲ್ಲಬೆಟ್ಟು ಗಣೇಶೋತ್ಸವಕ್ಕೆ ಬೆಳ್ಳಿ ಹಬ್ಬದ ಸಂಭ್ರಮ 

*ಸೆ. 13ರಂದು 'ಶ್ರೀ ಗಣೇಶ ಸೇವಾ ಧಾಮ'ಕ್ಕೆ ಶಿಲಾನ್ಯಾಸ

ಮೂಡುಬಿದಿರೆ: ಸಾವ೯ಜನಿಕ ಶ್ರೀ ಗಣೇಶೋತ್ಸವ ಸಮಿತಿ ಕಲ್ಲಬೆಟ್ಟು-ಕರಿಂಜೆ- ಮಾರೂರು ಇದರ ವತಿಯಿಂದ ಕಲ್ಲಬೆಟ್ಟುವಿನಲ್ಲಿ ನಡೆಯುವ ಗಣೇಶೋತ್ಸವು ಬೆಳ್ಳಿ ಹಬ್ಬದ ಸಂಭ್ರಮದಲ್ಲಿದ್ದು ಆ ಪ್ರಯುಕ್ತ ಕಲ್ಲಬೆಟ್ಟುವಿನಲ್ಲಿ ಸ್ವಂತ ಕಟ್ಟಡ "ಶ್ರೀ ಗಣೇಶ ಸೇವಾಧಾಮ" ವನ್ನು ನಿಮಿ೯ಸುವ ಯೋಜನೆಯನ್ನು ಹಾಕಿಕೊಂಡಿದ್ದು ಇದರ ಶಿಲಾನ್ಯಾಸ ಕಾಯ೯ಕ್ರಮವು ಸೆ. 13ರಂದು ಬೆಳಿಗ್ಗೆ 10.10ಕ್ಕೆ ನಡೆಯಲಿದೆ ಎಂದು ಶ್ರೀ ಗಣೇಶ ಸೇವಾ ಟ್ರಸ್ಟ್ ನ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್ ತಿಳಿಸಿದ್ದಾರೆ. 

 ಅವರು ಮಂಗಳವಾರ ಮೂಡುಬಿದಿರೆ ಪ್ರೆಸ್ ಕ್ಲಬ್ ನಲ್ಲಿ  ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಸೋಲೂರು ಆಯ೯ ಈಡಿಗ ಮಹಾಸಂಸ್ಥಾನದ ಶ್ರೀ ವಿಖ್ಯಾತನಂದ ಸ್ವಾಮೀಜಿ ಶಿಲಾನ್ಯಾಸ ನೆರವೇರಿಸಿ ಆಶೀವ೯ಚನ ನೀಡಲಿದ್ದಾರೆ. 

   ಜಿ. ಕೆ. ಭಟ್ ವೇದಿಕೆಯಲ್ಲಿ ನಡೆಯುವ ರಜತ ಸಂಭ್ರಮ ಸಭಾ ಕಾಯ೯ಕ್ರಮವನ್ನು ಮಂಗಳೂರು ಎಸ್. ಡಿ. ಸಿ. ಸಿ ಬ್ಯಾಂಕ್ ನ ಅಧ್ಯಕ್ಷ ಎಂ. ಎನ್. ರಾಜೇಂದ್ರ ಕುಮಾರ್ ಉದ್ಘಾಟಿಸಲಿದ್ದಾರೆ.
 ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಂತ ಸಹಕಾಯ೯ವಾಹ ಪಿ. ಎಸ್. ಪ್ರಕಾಶ್ ಶುಭಾಂಶಸನೆಗೈಯ್ಯಲಿದ್ದು ಶ್ರೀ ಕ್ಷೇತ್ರ ಕಟೀಲಿನ ಅನುವಂಶಿಕ ಅಚ೯ಕ ಶ್ರೀ ಹರಿನಾರಾಯಣದಾಸ ಅಸ್ರಣ್ಣ ಶುಭನುಡಿಯನ್ನಾಡಲಿದ್ದಾರೆ.

 ಶ್ರೀ ಗಣೇಶ ಸೇವಾ ಟ್ರಸ್ಟ್ ನ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾಯ೯ಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವರಿಗೆ ಗೌರವ ಸಮ್ಮಾನ ನಡೆಯಲಿದ್ದು, ಮುಖ್ಯ ಅಭ್ಯಾಗತರಾಗಿ ದ. ಕ ಸಂಸದ ಕ್ಯಾ. ಬ್ರಿಜೇಶ್ ಚೌಟ, ಶಾಸಕ ಉಮಾನಾಥ ಎ. ಕೋಟ್ಯಾನ್, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಕೆಪಿಸಿಸಿ ಪ್ರಧಾನ ಕಾಯ೯ದಶಿ೯ ಮಿಥುನ್ ರೈ,  ಶ್ರೀ ಕ್ಷೇತ್ರ ಪಡ್ಯಾರಬೆಟ್ಟುವಿನ ಅನುವಂಶಿಕ ಆಡಳಿತಗಾರರಾದ ಜೀವಂದರ್ ಕುಮಾರ್,ಹೊಸಂಗಡಿ ಅರಮನೆಯ ಸುಕುಮಾರ್ ಶೆಟ್ಟಿ, ಚೌಟರ ಅರಮನೆಯ ಕುಲದೀಪ ಎಂ., ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್, ನ್ಯೂ ವೈಬ್ರೆಂಟ್ ಕಾಲೇಜಿನ ಟ್ರಸ್ಟಿ ಚಂದ್ರಶೇಖರ್ ರಾಜೇ ಅರಸ್, ಉದ್ಯಮಿ ತಿಮ್ಮಯ್ಯ ಬಿ. ಶೆಟ್ಟಿ, ಮೂಡುಬಿದಿರೆ ಸಾವ೯ಜನಿಕ ಶ್ರೀ ಗಣೇಶೋತ್ಸವ ಟ್ರಸ್ಟ್ ನ ಅಧ್ಯಕ್ಷ ನಾರಾಯಣ ಪಿ. ಎಂ., ಶ್ರೀ ಗಣೇಶ ಸೇವಾ ಟ್ರಸ್ಟ್ ನ ಟ್ರಸ್ಟಿಗಳಾದ ಕೆ. ಶ್ರೀಪತಿ ಭಟ್, ಪದ್ಮಯ್ಯ ಬಿ. ಸುವಣ೯ ಭಾಗವಹಿಸಲಿದ್ದಾರೆ ಎಂದು ಹೇಳಿದರು. 


2008ನೇ ಇಸವಿಯಲ್ಲಿ ಶ್ರೀ ಗಣೇಶ ಸೇವಾ ಟ್ರಸ್ಟ್ (ರಿ.) ಕಲ್ಲಬೆಟ್ಟು ಪ್ರಾರಂಭಿಸಿ, ವಿವಿಧ ಸಾಮಾಜಿಕ ಚಟುವಟಿಕೆಗಳಾದ ಅಶಕ್ತರಿಗೆ ಸಹಾಯಧನ, ಮನೆನಿರ್ಮಾಣ, ಆರ್ಥಿಕ ದುರ್ಬಲ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಆರೋಗ್ಯ ಶಿಬಿರಗಳು, ರಕ್ತದಾನ ಶಿಬಿರಗಳು, ಯೋಗಶಿಬಿರಗಳು, ಸರಕಾರಿ ಸೌಲಭ್ಯಗಳ ಮಾಹಿತಿ ಶಿಬಿರಗಳು, ಜಲಸಂರಕ್ಷಣೆ. ವನಮಹೋತ್ಸವದಂತಹ ಪರಿಸರ ಜಾಗೃತಿ ಕಾರ್ಯಕ್ರಮಗಳು. ಸ್ವಚ್ಛತಾ ಕಾರ್ಯಕ್ರಮಗಳು ಇತ್ಯಾದಿ ಸೇವಾ ಚಟುವಟಿಕೆಗಳನ್ನು ಮಾಡುತ್ತಾ ಬಂದಿದ್ದೇವೆ ಎಂದು ತಿಳಿಸಿದರು.

ಸಾಮಾಜಿಕ ಸೇವಾ ಚಟುವಟಿಕೆಗಳನ್ನು ನಡೆಸಲು ಕಟ್ಟಡದ ಅವಶ್ಯಕತೆ ಇರುವುದರಿಂದ ಟ್ರಸ್ಟ್ ನ ಸ್ಥಳದಲ್ಲಿ ಸುಮಾರು 1.5 ಕೋಟಿ ವೆಚ್ಚದಲ್ಲಿ 'ಶ್ರೀ ಗಣೇಶ ಸೇವಾ ಧಾಮ' ಕಟ್ಟಡ ನಿಮಿ೯ಸಲು ನೀಲ ನಕಾಶೆ ತಯಾರಿಸಲಾಗಿದೆ ಎಂದು ಬಾಹುಬಲಿ ಪ್ರಸಾದ್ ತಿಳಿಸಿದರು. 
 ಟ್ರಸ್ಟ್ ನ ಕಾಯ೯ದಶಿ೯ ಸುಧೀರ್ ಪೈ, ಖಜಾಂಜಿ ರೋಹನ್ ಬಂಗೇರ, ಕಲ್ಲಬೆಟ್ಟು ಸಾವ೯ಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ರಾಜೇಶ್ ಬೈಲೂರು, ದಿನೇಶ್ ಆಚಾಯ೯ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Post a Comment

0 Comments

Advertisement