ಮೂಡುಬಿದಿರೆ ತಾಲೂಕು ಅಡಳಿತ ಸೌಧದಲ್ಲಿ ಸ್ವಾತಂತ್ರ್ಯ ದಿನಾಚರಣೆ*ಜೆಎನ್ ಜೆಗಳು ದೇಶಕ್ಕೆ ಪೂರಕವಾದ ಅಭಿವೃದ್ಧಿ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು : ಶ್ರೀಧರ ಮುಂದಲಮನಿ

ಮೂಡುಬಿದಿರೆ ತಾಲೂಕು ಅಡಳಿತ ಸೌಧದಲ್ಲಿ  ಸ್ವಾತಂತ್ರ್ಯ ದಿನಾಚರಣೆ

*ಜೆಎನ್ ಜೆಗಳು ದೇಶಕ್ಕೆ ಪೂರಕವಾದ ಅಭಿವೃದ್ಧಿ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು : ಶ್ರೀಧರ ಮುಂದಲಮನಿ

 ಮೂಡುಬಿದಿರೆ : ನಮಗೆ ಸ್ವಾತಂತ್ರ್ಯ ಸಿಕ್ಕಿದ 80 ವಷ೯ಗಳಿಂದ ನಮ್ಮ ದೇಶದಲ್ಲಿ ಸುಭದ್ರವಾಗಿದ್ದೇವೆ, ಮುನ್ನಡೆದಿದ್ದೇವೆ ಮತ್ತು ಅಭಿವೃದ್ಧಿಯನ್ನು ಹೊಂದುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಅಭಿವೃದ್ಧಿ ಹೊಂದಿದ ದೇಶವಾಗಿ ಬದಲಾವಣೆ ಹೊಂದಿ ಪ್ರಪಂಚದ ಇತರ ದೇಶಗಳು ಹೊಗಳುವಂತ್ತಾಗಬೇಕು ಇದಕ್ಕೆ ಜೆಎನ್‌ಜೆ ಗಳು ದೇಶದ  ಅಭಿವೃದ್ದಿಗೆ ಪೂರಕವಾದ  ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ತಾಲೂಕು ತಹಶೀಲ್ದಾರ್ ಶ್ರೀಧರ್ ಎಸ್ ಮುಂದಲಮನಿ ಹೇಳಿದರು. 

ಮೂಡುಬಿದಿರೆ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯಿಂದ  ತಾಲೂಕು ಆಡಳಿತ ಸೌಧದಲ್ಲಿ ನಡೆದ  80ನೇ ಸ್ವಾತಂತ್ರೋತ್ಸವದಲ್ಲಿ ಧ್ವಜರೋಹಣಗೈದು ಮಾತನಾಡಿದರು. 
  
2047ರಲ್ಲಿ ನಾವು ಅಭಿವೃದ್ಧಿ ಹೊಂದಿದ ದೇಶವಾಗಿ ಕಾಣಲು ಭ್ರಷ್ಟಾಚಾರ ಮುಕ್ತವಾಗಿ ಉತ್ತಮ ಆಡಳಿತ ನೀಡಬೇಕು. ಆಡಳಿತದ ಧುರೀಣರನ್ನು ಆಯ್ಕೆ ಮಾಡಬೇಕು. ನಮ್ಮಲ್ಲಿ ನಾವು ಬದಲಾವಣೆ ತಂದುಕೊಂಡು ದೇಶದ ಯಾವುದೇ ಭಾಗದಲ್ಲಿ ಕೆಲಸ ನಿವ೯ಹಿಸಿದರೆ ಶ್ರದ್ಧೆಯಿಂದ ಮಾಡಬೇಕೆಂದು ಸಲಹೆ ನೀಡಿದರು. 

 ಕ್ಷೇತ್ರದ ಶಾಸಕ  ಉಮನಾಥ ಎ. ಕೋಟ್ಯಾನ್ ಅಧ್ಯಕ್ಷತೆಯನ್ನು ವಹಿಸಿ ಗೌರವ ರಕ್ಷೆಯನ್ನು ಸ್ವೀಕರಿಸಿ ಮಾತನಾಡಿ ಮೂಡುಬಿದಿರೆಯಲ್ಲಿ 4.50 ಕೋಟಿ ವೆಚ್ಚದಲ್ಲಿ ಪ್ರವಾಸಿ ಮಂದಿರವನ್ನು  ನಿರ್ಮಿಸುತಿದ್ದು ತಾಲೂಕು ಪಂಚಾಯತ್ ಕಟ್ಟಡದ ನಿರ್ಮಾಣವು ಪ್ರಗತಿಯಲ್ಲಿ ಇದೆ .77 ಕೋಟಿ ವೆಚ್ಚದಲ್ಲಿ
ಅಮೃತಯೋಜನಡಿಯಲ್ಲಿ  ಮನೆ ಮನೆಗೆ  ಕುಡಿಯುವ ನೀರು ಒದಗಿಸುವ ಕಾಮಗಾರಿ ಅಂತಿಮ  ಹಂತದಲ್ಲಿ ಇದೆ. ಮೂಡುಬಿದಿರೆಯನ್ನು  ಜಿಲ್ಲೆಯಲ್ಲಿ ಮಾದರಿ ತಾಲೂಕಾಗಿ  ರೂಪಿಸಲಾಗುವುದು ಎಂದು  ಹೇಳಿದರು.


ಇದೇ ಸಂದರ್ಭದಲ್ಲಿ ಮೂಡುಬಿದಿರೆ  ವಲಯದಲ್ಲಿ  ಸರ್ಕಾರಿ ಮತ್ತು ಅನುದಾನಿತ ಪ್ರೌಡಶಾಲೆಗಳಲ್ಲಿ ಎಸ್ ಎಸ್ ಎಲ್ ಸಿ  ಹಾಗು ಪಿಯುಸಿಯಲ್ಲಿ ಪ್ರಥಮ ಮತ್ತು ದ್ವೀತಿಯ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. 

ಭೂಮಿ ನಮ್ಮ ನೀರು  ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೇಯಲ್ಲಿ  ವಿಜೇತರಾದ ಬೆಳುವಾಯಿ ಮರಿಯಂ ನಿಕೇತನ್ ನ ನಿಲೀಮಾ ಜೆನ್ ವಿನ್ ಫೆನಾ೯ಂಡಿಸ್, ಸಿಮ್ರಾ ಫಾತಿಮಾ ಹಾಗೂ ಮೂಡುಬಿದಿರೆ ಜೈನ ಪ್ರೌಢಶಾಲೆಯ ಸಮಥ್೯ ಆರ್. ಆಚಾಯ೯ ಅವರಿಗೆ ಬಹುಮಾನ ವಿತರಿಸಲಾಯಿತು.

ವೇದಿಕೆಯಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ್ ಪಿ., ಪೋಲಿಸ್  ನಿರೀಕ್ಷಕ ರಾಜೇಂದ್ರ ಬಿ., ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಕ್ಷಪ್ಪ,ವಲಯ ಆರಣ್ಯಾಧಿಕಾರಿ ಕಿರಣ್ ಕುಮಾರ್,ಪುರಸಭಾ ಮುಖ್ಯಾಧಿಕಾರಿ ಇಂದು ಎಂ, ತಾಲೂಕು ಗ್ಯಾರಂಟಿ ಅನುಷ್ಟಾನ ಸಮಿತಿಯ  ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ, ಕನ್ನಡ ಜಾಗೃತಿ ಸಮಿತಿಯ ಜಿಲ್ಲಾ ಸದಸ್ಯ ರಾಜೇಶ್ ಕಡಲಕೆರೆ, ಮೂಡುಬಿದಿರೆ ಸಮುದಾಯ ಅರೋಗ್ಯ ಕೇಂದ್ರದ ಪ್ರಭಾರ ವೈದ್ಯಾಧಿಕಾರಿ ಡಾ/ ಅಕ್ಷತಾ ನಾಯಕ್,  ಸರಕಾರಿ ನೌಕರರ ಸಂಘದ ಅಧ್ಯಕ್ಷ ದೊರೆ ಸ್ವಾಮಿ ಹಾಗು ನಿವೃತ್ತ ಸೈನಿಕರು ಉಪಸ್ಥಿತರಿದ್ದರು.

ಕಾಯ೯ಕ್ರಮಕ್ಕೂ ಮುನ್ನ ಪೋಲಿಸ್ ಗೃಹರಕ್ಷಕ ,ಎನ್‌ಸಿಸಿ, ಎನ್ ಎಸ್ ಎಸ್ ಹಾಗು, ವಿವಿಧ ಶಾಲಾ ಕಾಲೇಜು ತಂಡಗಳಿಂದ  ಆಕರ್ಷಕ ಪಥ ಸಂಚಲನ ನಡೆಯಿತು. ಉಪತಹಸಿಲ್ದಾರ್  ಕೆ .ರಾಮ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಮಾಧಿಕಾರಿ ಅಜು೯ನ್ ಸಜ್ಜನ್ ಕಾಯ೯ಕ್ರಮ ನಿರೂಪಿಸಿದರು.

Post a Comment

0 Comments