ಮೂಡುಬಿದಿರೆ ಪುರಸಭೆಯಲ್ಲಿ 80ನೇ ಸ್ವಾತಂತ್ರ್ಯೋತ್ಸವ ಆಚರಣೆ*ಸ್ವಾತಂತ್ರ್ಯ ದೇಶದ ಸ್ವಾಭಿಮಾನ : ಶಾಸಕ ಕೋಟ್ಯಾನ್

ಮೂಡುಬಿದಿರೆ ಪುರಸಭೆಯಲ್ಲಿ 80ನೇ ಸ್ವಾತಂತ್ರ್ಯೋತ್ಸವ ಆಚರಣೆ

*ಸ್ವಾತಂತ್ರ್ಯ ದೇಶದ ಸ್ವಾಭಿಮಾನ : ಶಾಸಕ ಕೋಟ್ಯಾನ್ 
ಮೂಡುಬಿದಿರೆ : ಇಲ್ಲಿನ ಪುರಸಭೆಯಲ್ಲಿ 80ನೇ ಸ್ವಾತಂತ್ರ್ಯೋತ್ಸವನ್ನು ಕ್ಷೇತ್ರದ ಶಾಸಕ ಉಮಾನಾಥ ಎ ಕೋಟ್ಯಾನ್ ಅವರು ಧ್ವಜವನ್ನರಳಿಸುವ ಮೂಲಕ ಆಚರಿಸಲಾಯಿತು. 

 ನಂತರ ಮಾತನಾಡಿದ ಅವರು ಸ್ವಾತಂತ್ರ್ಯ ದೇಶದ ಸ್ವಾಭಿಮಾನ. ಹಲವಾರು ನೇತಾರರ ಬಲಿದಾನದ ಮೂಲಕ ಬ್ರಿಟಿಷರ ಆಳ್ವಿಕೆಯಿಂದ ಮುಕ್ತಗೊಂಡಿರುವ ಈ ದಿನವನ್ನು ನಮ್ಮ ದೇಶದಲ್ಲಿ ಜಾತಿ-ಮತ-ಪಕ್ಷ-ಬೇಧ ಮರೆತು ಹಬ್ಬದ ರೀತಿಯಲ್ಲಿ ಆಚರಿಸುತ್ತಿದ್ದೇವೆ. ಸ್ವಾತಂತ್ರ್ಯ ಸಿಗಲು ಕಾರಣೀಕತ೯ರಾದ ಗಾಂಧೀಜಿ ಹಾಗೂ ದೇಶದ ಜನರು ಯಾವ ದಾರಿಯಲ್ಲಿ ಹೋಗಬೇಕೆಂದು ದಾರಿ ತೋರಿಸಿಕೊಟ್ಟು ಸಂವಿಧಿನ ರಚಿಸಿರುವ ಬಾಬಾ ಸಾಹೇಬ್ ಅಂಬೇಡ್ಕರ್  ಅವರನ್ನು ಸದಾ  ಸ್ಮರಿಸಬೇಕಾಗಿದೆ ಎಂದರು.
 ಪುರಸಭೆಯ ಮಾಜಿ ಉಪಾಧ್ಯಕ್ಷ ನಾಗರಾಜ ಪೂಜಾರಿ, ಸದಸ್ಯ ಕೊರಗಪ್ಪ, ಮುಖ್ಯಾಧಿಕಾರಿ ಇಂದು ಎಂ, ಪರಿಸರ ಅಭಿಯಂತರೆ ಶಿಲ್ಪಾ, ಆರೋಗ್ಯ ನಿರೀಕ್ಷಕಿ ಶಶಿರೇಖಾ ಸಹಿತ ಸಿಬಂದಿಗಳು ಮತ್ತು ಪೌರ ಕಾಮಿ೯ಕರು ಈಸಂದಭ೯ದಲ್ಲಿ ಭಾಗವಹಿಸಿದ್ದರು.

Post a Comment

0 Comments