ಸರಕಾರದ ನಿಲ೯ಕ್ಷಕ್ಕೆ ಸಾಕ್ಷಿ ವಾಲ್ಪಾಡಿಯ ಈ "ಅಬಿ೯ ಸೇತುವೆ"

ವಿನಯ್ ಕುಮಾರ್ ಅಧ್ಯಕ್ಷರು ಮತ್ತು ಸವ೯ ಸದಸ್ಯರು

ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಸರ್ವೋದಯ ಫ್ರೆಂಡ್ಸ್ ಬೆದ್ರ

ಸರಕಾರದ ನಿಲ೯ಕ್ಷಕ್ಕೆ ಸಾಕ್ಷಿ ವಾಲ್ಪಾಡಿಯ ಈ "ಅಬಿ೯ ಸೇತುವೆ" 
 *ಹತ್ತು ವಷ೯ಗಳ ಹಿಂದೆ ಕುಸಿದು ಬಿದ್ದ ಸೇತುವೆಗೆ ಅಗತ್ಯವಿದೆ ಕಾಯ೯ಕಲ್ಪದ "ಭಾಗ್ಯ"
ಮೂಡುಬಿದಿರೆ : ಕಳೆದ ಹತ್ತು ವರುಷಗಳ ಹಿಂದೆ ಕುಸಿದು ಬಿದ್ದಿರುವ "ಅಬಿ೯ ಸೇತುವೆ"ಯ ಕಾಯ೯ಕಲ್ಪದ "ಭಾಗ್ಯ"ಕ್ಕಾಗಿ ವಾಲ್ಪಾಡಿಯ ಜನತೆ ಬಕ ಪಕ್ಷಿಯಂತೆ ಕಾಯುತ್ತಾ ಕುಳಿತ್ತಿದ್ದಾರೆ. 
 ಮೂಡುಬಿದಿರೆ ತಾಲೂಕಿನ ವಾಲ್ಪಾಡಿ ಗ್ರಾಮ ಪಂಚಾಯತ್ ನ ಶಟ್ಲಬೆಟ್ಟು ಎಂಬಲ್ಲಿ ಬ್ರಿಟಿಷರ ಕಾಲದಲ್ಲಿ ನಿಮಾ೯ಣಗೊಂಡಿರುವ ಈ ಸೇತುವೆಯು ವಾಲ್ಪಾಡಿ- ಆನೆಗುಡ್ಡೆ-ಧರೆಗುಡ್ಡೆ-ಬೆಳುವಾಯಿಗೆ ಸಂಪಕ೯ ಕಲ್ಪಿಸುವ ಸೇತುವೆಯಾಗಿದ್ದು ಗ್ರಾಮಸ್ಥರ ಜೀವನಾಡಿಯಾಗಿತ್ತು. 
 
 ಸುಮಾರು 500 ಕುಟುಂಬಗಳು ಈ ಸೇತುವೆಯ ಮೂಲಕವೇ ಆಕಡೆಯಿಂದ ಈಕಡೆಗೆ, ಈಚೆಯಿಂದ ಆಚೆಗೆ ಹೋಗಲು ಈ ಸೇತುವೆಯನ್ನೇ ಅವಲಂಬಿಸಿಕೊಂಡಿದ್ದರು. ಆದರೆ ಈ ಸೇತುವೆಯ ಆಯಸ್ಸು ಮುಗಿದು ಹತ್ತು ವಷ೯ಗಳ ಹಿಂದೆ ಮಳೆಗಾಲದಲ್ಲಿ ಕುಸಿದು ಬಿದ್ದು ನೀರು ಪಾಲಾಗಿದ್ದು ಆ ನಂತರ ಹಲವು ಕುಟುಂಬಗಳ ಜೀವನ ಅಸ್ತವ್ಯಸ್ತವಾಗಿದೆ.

   ಈ ಸೇತುವೆಯು ಕುಸಿದು ಬಿದ್ದ ಪರಿಣಾಮವಾಗಿ ಕೂಲಿ ಕೆಲಸಕ್ಕೆ, ಶಾಲಾ ಕಾಲೇಜಿಗೆ ಹೋಗುವವರು ಅಧಿಕ ವೆಚ್ಚವನ್ನು ಭರಿಸಿ 4-5 ಕಿಲೋ ಮೀಟರ್ ಸುತ್ತು ಬಳಸಿ ಆಟೋ ಮಾಡಿಕೊಂಡು ಹೋಗಬೇಕಾಗಿದೆ ಇದರಿಂದಾಗಿ ಬಡಜನರು ತೊಂದರೆಯನ್ನು ಅನುಭವಿಸುವಂತ್ತಾಗಿದೆ.

  ಸೇತುವೆ ಕುಸಿದು ಬಿದ್ದ ಸಂದಭ೯ದಲ್ಲಿ ಸ್ಥಳಕ್ಕೆ ಭೇಟಿ ನೀಡಿದ್ದ ಅಂದಿನ ಶಾಸಕ ಕೆ. ಅಭಯಚಂದ್ರ ಜೈನ್ ಅವರು ತಾತ್ಕಾಲಿಕ ಕಾಲು ಸಂಕ ನಿಮಾ೯ಣಕ್ಕೆ ರೂ.10 ಲಕ್ಷ ಅನುದಾನವನ್ನು ಇಟ್ಟಿದ್ದರು ಆದರೆ ಜನರು ತಮಗೆ ಕೋಟಿ ವೆಚ್ಚದಲ್ಲಿಯೇ ಸೇತುವೆಯಾಗಬೇಕೆಂದು ಪಟ್ಟು ಹಿಡಿದಿದ್ದರು. ನಂತರ ಶಾಸಕರಾಗಿ ಆಯ್ಕೆಯಾಗಿದ್ದ ಉಮಾನಾಥ ಕೋಟ್ಯಾನ್ ಮತ್ತು ಅಂದಿನ ಸಂಸದ ನಳಿನ್ ಕುಮಾರ್ ಕಟೀಲ್ ಸ್ಥಳಕ್ಕೆ ಭೇಟಿ ನೀಡಿ ಸೇತುವೆ ನಿಮಾ೯ಣದ ಭರವಸೆಯನ್ನು ನೀಡಿದ್ದರು ಮತ್ತು ಅಂದಿನ ಬಿಜೆಪಿ ಸರಕಾರವು ಕೋಟಿ ಅನುದಾನವನ್ನು ಮೀಸಲಿಟ್ಟಿತ್ತು ಆದರೆ ಸರಕಾರ ಅಧಿಕಾರವನ್ನು ಕಳೆದುಕೊಂಡಿತ್ತು ನಂತರ ಬಂದ ಕಾಂಗ್ರೆಸ್ ಸರಕಾರವು ಸೇತುವೆ ನಿಮಾ೯ಣಕ್ಕೆ ಅನುದಾನವನ್ನು ಮೀಸಲಿಡದೆ ಇರುವುದರಿಂದ ಸೇತುವೆ ನಿಮಿ೯ಣದ ಕನಸು ಕನಸಾಗಿಯೇ ಉಳಿದಿದೆ. 

ವರದಿ : ಪ್ರೇಮಶ್ರೀ ಕಲ್ಲಬೆಟ್ಟು

-----------------------------
ವಾಲ್ಪಾಡಿಯ ಪರಿಸರದ ದೈವಸ್ಥಾನವೊಂದರಲ್ಲಿ ಇದೇ ತಿಂಗಳಿನಲ್ಲಿ "ಸೋಣದ ಕೋಲ" ನಡೆಯಲಿದೆ. 
 ಈ ಕೋಲಕ್ಕೆ ಸೇತುವೆಯ ಇನ್ನೊಂದು ಬದಿಯಿಂದ ಮತ್ತೊಂದು ಬದಿಗೆ ದೈವದ ಭಂಡಾರವು ಬರಬೇಕು. ಸೇತುವೆ ಇದ್ದಾಗ ಸೇತುವೆಯ ಮೂಲಕ ಕರೆದೊಯ್ಯಲಾಗುತ್ತಿತ್ತು. ಆದರೆ ಸೇತುವೆ ಕುಸಿದು ಬಿದ್ದಿದ್ದರಿಂದ ಕಳೆದ ಹತ್ತು ವಷ೯ಗಳಿಂದ ನೀರು ತುಂಬಿ ಹರಿಯುತ್ತಿರುವ ತೋಡಿನಲ್ಲಿಯೇ ಭಂಡಾರವನ್ನು ಹೊತ್ತುಕೊಂಡು ಬರುವಂತ್ತಾಗಿದೆ.
 ಆದ್ದರಿಂದ ಸಂಬಂಧ ಪಟ್ಟ ಜನಪ್ರತಿನಿಧಿಗಳು, ಪಂಚಾಯತ್ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿ ಸರಕಾರದ ಗಮನಕ್ಕೆ ತಂದು ವಾಲ್ಪಾಡಿಯ ಜನತೆಗೆ "ಸೇತುವೆ ಭಾಗ್ಯ" ವನ್ನು ಕರುಣಿಸಬೇಕಾಗಿದೆ.
-------------------------------

Post a Comment

0 Comments

Advertisement