ಪಡುಮಾರ್ನಾಡ್ ನಲ್ಲಿ ತಾಲೂಕು ಮಟ್ಟದ ಭಜಕೆರೆ ಗೊಬ್ಬು -2026. ಶ್ರೀ ಕುಂಭ ಕಂಠಿಣಿ ಟ್ರೋಫಿ ಮತ್ತು ಸಸಿ ವಿತರಣಾ ಸಮಾರಂಭ ಮತ್ತು ಸಾಂಸ್ಕೃತಿಕ ವೈಭವ.

ಪಡುಮಾರ್ನಾಡ್ ನಲ್ಲಿ ತಾಲೂಕು ಮಟ್ಟದ ಭಜಕೆರೆ ಗೊಬ್ಬು -2026. ಶ್ರೀ ಕುಂಭ ಕಂಠಿಣಿ ಟ್ರೋಫಿ ಮತ್ತು ಸಸಿ ವಿತರಣಾ ಸಮಾರಂಭ ಮತ್ತು ಸಾಂಸ್ಕೃತಿಕ ವೈಭವ.ಮೂಡಬಿದ್ರಿ :ಶ್ರೀ  ಮಂಜುನಾಥೇಶ್ವರ  ಭಜನಾ   ಪರಿಷತ್   ಶ್ರೀ  ಕ್ಷೇತ್ರ  ಧರ್ಮಸ್ಥಳ    ಮೂಡಬಿದ್ರಿ  ತಾಲೂಕು  ಭಜನಾ ಪರಿಷತ್ ನ  ಶ್ರೀ ಕುಂಭ ಕಂಠಿಣಿ  ಭಜನಾ  ಮಂಡಳಿ   ಅಚ್ಚರಕಟ್ಟೆ  ಪಡುಮಾರ್ನಾಡ್     ಆಯೋಜನೆಯಲ್ಲಿ    ನಡೆದ  ತಾಲೂಕು  ಮಟ್ಟದ  ಭಜಕೆರೆ ಗೊಬ್ಬು   ಕೆಸರ್ದ  ಕ್ರೀಡಾಕೂಟ   ಮತ್ತು   ಬೃಹತ್   ಸಸಿವಿತರಣಾ  ಸಮಾರಂಭ  ಮತ್ತು   ಪಡುಮಾರ್ನಾಡ್  ಯುವ  ಪ್ರತಿಭೆಗಳಿಂದ  ಸಂಸ್ಕೃತಿಕ  ವೈಭವ   ವಿಜೃಂಭಣೆಯಿಂದ      ನೆರವೇರಿತು.  ಮೂಲ್ಕಿ - ಮೂಡಬಿದ್ರಿ  ಕ್ಷೇತ್ರದ  ಶಾಸಕರು  ಶ್ರೀ  ಉಮಾನಾಥ್  ಎ   ಕೋಟ್ಯಾನ್    ಭತ್ತದ  ಕಳಸ ದೊಂದಿಗೆ  ಕಲ್ಪವೃಕ್ಷದ  ಮೊಗ್ಗನ್ನು   ಅರಳಿಸಿ,  ಕೊಡಪಟ್ಯ  ತಿಮಾರು  ಗದ್ದೆಯ ಭೂಮಿ ತಾಯಿಗೆ ತನು    ಅರ್ಪಿಸಿ   ಕ್ರೀಡಾ ಕೂಟಕ್ಕೆ  ಚಾಲನೆ  ನೀಡಿ   ಸೇರಿದ   ತಾಲೂಕಿನ 500ಕ್ಕೂ  ಹೆಚ್ಚು   ಭಜಕ  ಭಂದುಗಳಿಗೆ    ಶುಭ   ಹಾರೈಸಿದರು..
  ಶ್ರೀ  ಪದ್ಮಪ್ರಸಾದ್  ಜೈನ್   ಉಪಾಧ್ಯಕ್ಷರು   JCI   ಇಂಟರ್ನ್ಯಾಷನಲ್   ಸ್ಕೂಲ್    ಕಾರ್ಕಳ      ಸಸಿವಿತರಣಾ   ಸಮಾರಂಭಕ್ಕೆ   ಸಂಕೇತಿಕವಾಗಿ  ಚಾಲನೆ  ನೀಡಿದರು.

ಶ್ರೀ  ಕಿರಣ್ ಕುಮಾರ್  ಎಸ್. ಪವಮಾನ,ಸುಚೇತನ್ ಜೈನ್, ಮುಂತಾದ  ಅತಿಥಿ  ಗಣ್ಯರು   ದ್ವೀಪ  ಪ್ರಜ್ವಲಿಸಿದರು.
 ಸೂರಜ್  ಜೈನ್  ಮಾರ್ನಾಡ್, ದಯಾನಂದ್  ಪೈ    ಭಾಸ್ಕರ್  ಕುಲಾಲ್, ಮುಂತಾದ  ಗಣ್ಯರು  ಅತಿಥಿಗಳಾಗಿ  ಭಾಗವಹಿಸಿದರು.

ಸಭಾ ಕಾರ್ಯಕ್ರಮ ದಲ್ಲಿ   ಭಜನಾ ಪರಿಷತ್ ನ  ರಾಜ್ಯಾಧ್ಯಕ್ಷರಾದ  ಚಂದ್ರ ಶೇಖರ್  ಸಾಲ್ಯಾನ್   ಭಾಗವಹಿಸಿ    ಧರ್ಮಸ್ಥಳ  ಭಜನಾ  ಕಮ್ಮಟದಲ್ಲಿ  ತರಬೇತಿ  ಪಡೆದು    ಗುರುಗಳಾಗಿ  ಸೇವೆ ಸಲ್ಲಿಸುತ್ತಿರುವ    ಅಶೋಕ್ ನಾಯ್ಕ್  ಕಳಸ ಬೈಲ್, ಶ್ರೀ  ಗಣೇಶ್  ನೀರ್ಕೆರೆ  ಮತ್ತು   ಬೆಳ್ವಾಯಿ  ವಲಯದ  ನಿವೃತ್ತ  ಆಶಾ  ಕಾರ್ಯಕರ್ತೆ   ಶ್ರೀಮತಿ  ಅನಸೂಯ  ಆಚಾರ್ಯ  ಇವರಿಗೆ  ಗೌರವ ಸನ್ಮಾನ   ನೆರವೇರಿಸಿದರು.
ಮುಖ್ಯ  ಅತಿಥಿಗಳಾಗಿ  ಶಾಂತಿ ಪ್ರಸಾದ್ ಹೆಗ್ಡೆ,ಸೋಮನಾಥ್  ಕೋಟ್ಯಾನ್, ಕುಮಾರ್  ಪ್ರಸಾದ್  ಕೊಟ್ಟಾರಿ,  ಪ್ರಭಾಕರ್  ಪಳಕಳ, ಸುಕೇಶ್. ಜಿ. ಅಂಚನ್ ತೋಡಾರ್,ಪಾಪಣ್ಣ ಪೂಜಾರಿ ಗುಮಡಬೆಟ್ಟು, ಶ್ರೀಮತಿ  ಪದ್ಮಶ್ರೀ ಭಟ್  ನಿಡ್ಡೋಡಿ  ಉಪಸ್ಥಿತರಿದ್ದರು.

ನಂತರ   ಮಾರ್ನಾಡಿನ   ಪ್ರಬುದ್ಧ   ಯುವ  ಪ್ರತಿಭೆಗಳಿಂದ  ನಡೆದ    ಸಾಂಸ್ಕೃತಿಕ   ಕಾರ್ಯಕ್ರಮ   ಜನರ   ಪ್ರಶಂಸೆಗೆ  ಪಾತ್ರವಾಯಿತು.  ಸುನೀಕ್ಷಾ ಮಾರ್ನಾಡ್   ನಿರೂಪಣೆ  ಮಾಡಿದರು..

ಸಮಾರೋಪ  ಸಮಾರಂಭದ  ಪ್ರಶಸ್ತಿ  ವಿತರಣಾ  ಸಮಾರಂಭ ದಲ್ಲಿ, ಶ್ರೀ  ವಿಜಯ್  ನೀರ್ಕೆರೆ  ಇವರನ್ನು  ಸನ್ಮಾನಿಸಲಾಯಿತು.  ಮುಖ್ಯ  ಅತಿಥಿಗಳಾಗಿ   ರಮೇಶ್. ಎಸ್. ಶೆಟ್ಟಿ, ಭರತ್ ಶೆಟ್ಟಿ ಬೆಳ್ವಾಯಿ,ಸಂತೋಷ್  ಶೆಟ್ಟಿ ಏರಾಡಿ   ಅಶ್ವಥ್. ಕೆ. ಪಣಪಿಲ,  ಮುನಿರಾಜ್ ಹೆಗ್ಡೆ, ಸಂಪತ್ ಪೂಜಾರಿ  ನೆತೋಡಿ,ನೀಲಯ ಭಂಡಾರಿ, ಕೇಶವ್  ಬನ್ನಡ್ಕ,ಅನಿಲ್ ಅಂಚನ್ ವಿಗ್ನೇಶ್ವರ,ಪ್ರಮೋದ್  ಪೆರ್ನಡ್ಕ, ವಿಶ್ವನಾಥ್ ಸೇಡಿಪಲ್ಲ,ರಮೇಶ್  ಶಾಂತಿನಗರ,  ಮುಂತಾದ   ಅತಿಥಿಗಣ್ಯರು   ಪ್ರಶಸ್ತಿ ವಿತರಿಸಿದರು.   ಅಶೋಕ್ ನಾಯ್ಕ್   ಕಳಸ ಬೈಲ್  ಮತ್ತು  ಮಂಜುನಾಥ್  ಬೆಳ್ವಾಯಿ   ಪ್ರಶಸ್ತಿ  ವಿವರ   ಮಂಡಿಸಿದರು..
      ಕಾರ್ಯಕ್ರಮದ    ಸಂಪೂರ್ಣ  ನಿರ್ವಹಣೆಯನ್ನು   ಶ್ರೀ  ಕುಂಭಕಂಠಿಣಿ  ಭಜನಾ  ಮಂಡಳಿಯ  ಸ್ಥಾಪಕಧ್ಯಕ್ಷ  ಮತ್ತು  ಸಂಚಾಲಕರು   ಶ್ರೀ ಪ್ರವೀಣ್  ಕೋಟ್ಯಾನ್    ನಿರ್ವಹಿಸಿ   ಮುಂದೆಯೂ    ತಾಲೂಕಿನ  ಎಲ್ಲಾ  ಭಜಕ ಬಂದುಗಳು  ಮತ್ತು   ಭಜನಾ  ಮಂಡಳಿಗಳ  ಮತ್ತು  ಸಮಸ್ತ   ಸಾರ್ವಜನಿಕರ  ಸಹಕಾರ   ಬೇಡಿದರು.   ಈ ಕ್ರೀಡಾ ಕೂಟದಲ್ಲಿ   800ರಿಂದ  1000ಜನರು  ಬೆಂಬಲ  ನೀಡಿ  ಕ್ರೀಡಾಕೂಟದ   ಅಮೋಘ  ಯಶಸ್ಸಿಗೆ,    ಸಾಕ್ಷಿಯಾದರು. 
    ವಿಶೇಷವಾಗಿ   ಪಡುಮಾರ್ನಾಡ್ ಗ್ರಾಮದ   ಸಮಸ್ತ  ನಾಗರಿಕರಿಗೆ  ಮತ್ತು ಕ್ರೀಡಾ ಕೂಟದಲ್ಲಿ ಭಾಗಿಯಾದ  ತಾಲೂಕಿನ ಎಲ್ಲಾ  ಭಜನಾ  ಮಂಡಳಿ ಧನ್ಯವಾದ  ಸಲ್ಲಿಸಿದರು.  ವಿಶೇಷವಾಗಿ ಮುಖ್ಯ ತೀರ್ಪುಗಾರರಾಗಿ  ಭಾಗವಹಿಸಿದ   ಅಜಯ್  ಪೂಜಾರಿ  ಕೇಮಾರ್,ಶಿವರಾಜ್  ಸಾಲ್ಯಾನ್  ಕೆಲ್ಲ ಪುತ್ತಿಗೆ,  ಅಣ್ಣಿ ಆಚಾರ್ಯ  ಕೊಡಪಠ್ಯ,  ಸ್ಥಳವಕಾಶಕ್ಕಾಗಿ  ಗದ್ದೆಯನ್ನು  ನೀಡಿ  ಸಹಕರಿಸಿದ  ಗಣೇಶ್  ಆಚಾರ್ಯ  ಕೊಡಪಠ್ಯ  ಇವರಿಗೂ ಹೃದಯ ತುಂಬಿದ  ಧನ್ಯವಾದಗಳೊಂದಿಗೆ    ಕ್ರೀಡಾಕೂಟಕ್ಕೆ   ಅಂತಿಮ ತೆರೆ ಎಳೆದರು..

Post a Comment

0 Comments

Advertisement