ಆ. 18 ರಂದು 14 ಮೊಹಲ್ಲಾಗಳ ಖಾಝಿ ಅಧಿಕಾರ ಸ್ವೀಕಾರ

ಆ. 18 ರಂದು 14 ಮೊಹಲ್ಲಾಗಳ ಖಾಝಿ ಅಧಿಕಾರ ಸ್ವೀಕಾರ

ಮೂಡುಬಿದಿರೆ : ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಅಧ್ಯಕ್ಷರಾಗಿರುವ ಸಯ್ಯಿದುಲ್ ಉಲಮಾ ಸಯ್ಯಿದ್  ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್   ಅವರು ಮೂಡುಬಿದಿರೆ ವಲಯ ಸಂಯುಕ್ತ ಜಮಾತ್ ವ್ಯಾಪ್ತಿಯ 14 ಮೊಹಲ್ಲಾಗಳ ಖಾಝಿಯಾಗಿ ಆಯ್ಕೆಯಾಗಿದ್ದು ಅವರ ಖಾಝಿ ಸ್ವೀಕಾರ ಸಮಾರಂಭವು    ಗಂಟಾಲ್ಕಟ್ಟೆಯ ಬದ್ರಿಯಾ ಜುಮ್ಮಾ ಮಸೀದಿಯಲ್ಲಿ  ಆ. 18ರಂದು (ಮಂಗಳವಾರ) ನಡೆಯಲಿದೆ ಎಂದು ಮೂಡುಬಿದಿರೆ ವಲಯ ಸಂಯುಕ್ತ ಜಮಾತ್ ಅಧ್ಯಕ್ಷ ಎಂ.ಅಬ್ದುಲ್ ರಹ್ಮಾನ್ (ಅಬ್ಬುವಾಕ) ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
 ಸಂಯುಕ್ತ ಜಮಾತ್ ವ್ಯಾಪ್ತಿಯಲ್ಲಿ 21 ಮೊಹಲ್ಲಾಗಳಿದ್ದು ಈಗಾಗಲೇ14 ಮೊಹಲ್ಲಾಗಳು ನಾಳೆಯ ಸಮಾರಂಭದಲ್ಲಿ ತಂಙಳ್ ಅವರನ್ನು ಖಾಝಿಯನ್ನಾಗಿ ಸ್ವೀಕರಿಸಲಿದ್ದಾರೆಂದು ಅವರು ಮಾಹಿತಿ ನೀಡಿದರು.


ಕಾರ್ಯದರ್ಶಿ ಅಶ್ರಫ್ ಮರೋಡಿ ಅವರು ಮಾಹಿತಿ ನೀಡಿ ಸಯ್ಯಿದ್ ಆಲಿ ತಂಙಳ್ ಕುಂಬೋಳ್ ಅವರು ದುವಾ ಆಶೀರ್ವಚನ ನಡೆಸಲಿದ್ದು ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಶೈಖುನಾ ವಿ.ವಿ.ಅಬ್ದುರ್ರಹ್ಮಾನ್ ಮುಸ್ಲಿಯಾರ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಅಬ್ದುಲ್ ರಹ್ಮಾನ್ (ಅಬ್ಬುವಾಕ) ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಶೈಖುನಾ ಅಬ್ದುಲ್ ಖಾದಿರ್ ಅಲ್ ಖಾಸಿಮಿ ಬಂಬ್ರಾಣ ಹಾಗೂ ಶೈಖುನಾ ಉಸ್ಮಾನ್ ಫೈಝಿ ತೋಡಾರ್ ಅವರು ಅನುಗ್ರಹ ಪ್ರಭಾಷಣ ನಡೆಸಲಿದ್ದು ಅಬ್ದುಲ್ ಸತ್ತಾರ್ ಪಂದಲ್ಲೂರ್ ಅವರು ಮುಖ್ಯ ಪ್ರಭಾಷಣ ಮಾಡಲಿದ್ದಾರೆ,ಸಯ್ಯಿದ್ ಝೈನುಲ್ ಆಬಿದೀನ್ ತಂಙಳ್ ಬೆಳ್ತಂಗಡಿ, ರಫೀಕ್ ಅಹ್ಮದ್ ಹುದವಿ ಕೋಲಾರ ಅವರು ಆಶಯ ಭಾಷಣ ಮಾಡಲಿದ್ದಾರೆಂದು ಅವರು ತಿಳಿಸಿದರು.
ಅಮೀರ್ ತಂಙಳ್ ಕಿನ್ಯ,ಹುಸೈನ್ ಬಾಅಲವಿ ತಂಙಳ್ ಕುಕ್ಕಾಜೆ,ಅಕ್ರಮ್ ಅಲೀ ತಂಙಳ್ , ಶರೀಫ್ ದಾರಿಮಿ ಮೂಡುಬಿದಿರೆ ಹಾಗೂ ಇನ್ನೂ ಅನೇಕ ಧಾರ್ಮಿಕ ನೇತಾರರು ಈ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆಂದವರು ಮಾಹಿತಿ ನೀಡಿದರು.
ಪತ್ರಿಕಾ ಕಾರ್ಯದರ್ಶಿ ಮುಹಮ್ಮದ್ ಶಾಫಿ ಕಿರೋಡಿ, ಲಿಯಾಖತ್ ಆಲಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Post a Comment

0 Comments