ಆಳ್ವಾಸ್ ಆಯುರ್ವೇದದಿಂದ - ಆಟಿ ಅಮಾವಾಸ್ಯೆ

ವಿನಯ್ ಕುಮಾರ್ ಅಧ್ಯಕ್ಷರು ಮತ್ತು ಸವ೯ ಸದಸ್ಯರು

ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಸರ್ವೋದಯ ಫ್ರೆಂಡ್ಸ್ ಬೆದ್ರ

ಆಳ್ವಾಸ್ ಆಯುರ್ವೇದದಿಂದ - ಆಟಿ ಅಮಾವಾಸ್ಯೆ  
*3 ಸಾವಿರಕ್ಕೂ ಅಧಿಕ ಮಂದಿಗೆ ಕಷಾಯ ವಿತರಣೆ

ಮೂಡುಬಿದಿರೆ : ಆಟಿ ಅಮಾವಾಸ್ಯೆ ಅಂಗವಾಗಿ ವಿದ್ಯಾಗಿರಿಯ ಆಳ್ವಾಸ್ ಆಯುರ್ವೇದ ಕಾಲೇಜಿನ ದ್ರವ್ಯಗುಣ
ವಿಜ್ಞಾನ ಸ್ನಾತಕೋತ್ತರ ವಿಭಾಗದ ಆಶ್ರಯದಲ್ಲಿ ಪರಂಪರೆಯಂತೆ ತಯಾರಿಸಿ ಆಟಿ ಕಷಾಯವನ್ನು ತಯಾರಿಸಿ ಉಚಿತವಾಗಿ 
ವಿತರಿಸಲಾಯಿತು.


 ಬಿ.ಎಸ್.ಎನ್.ಎಲ್. ನ ನಿವೃತ್ತ ಅಧಿಕಾರಿ ಕೃಷ್ಣವೇಣಿ ಇವರು
ಆಟಿ ಕಷಾಯ ವಿತರಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿದರು.

 ದ್ರವ್ಯಗುಣ ವಿಜ್ಞಾನ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥ,
ಹಾಗೂ ಆತ್ಮ ರಿಸರ್ಚ್ ಸೆಂಟರಿನ ನಿರ್ದೇಶಕರೂ ಆಗಿರುವ ಪ್ರಾಧ್ಯಾಪಕ ಡಾ.ಸುಬ್ರಹ್ಮಣ್ಯ ಪದ್ಯಾಣ
ಆಟಿ ಕಷಾಯದ ಮಹತ್ವವನ್ನು ತಿಳಿಸಿ ಸ್ವಾಗತಿಸಿದರು. ಕಾಲೇಜಿನ ಪ್ರಾಂಶುಪಾಲರಾದ
ಡಾ. ಸುಶೀಲ್ ಶೆಟ್ಟಿ, ಆಯುರ್ವೇದ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ.ಸುರೇಖ ಪೈ
ಅವರು ಉಪಸ್ಥಿತರಿದ್ದರು. 

ಡಾ. ಸೌಜನ್ಯ ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಾನ್ನು ಆರಂಭಿಸಿ,
ಡಾ. ಲಕ್ಷ್ಮೀ ಪೈ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು. 

ಸಂಸ್ಥೆಯ ಅಧ್ಯಕ್ಷರಾದ
ಡಾ.ಮೋಹನ ಆಳ್ವ ಅವರ ನಿರ್ದೇಶನ ಹಾಗೂ ಮಾರ್ಗದರ್ಶನದೊಂದಿಗೆ ಈ ಕಾರ್ಯಕ್ರಮದಲ್ಲಿ
ವಿದ್ಯಾರ್ಥಿ ವೃಂದ, ಉಪಾನ್ಯಸಕ ವೃಂದ ಹಾಗೂ ಸಾರ್ವಜನಿಕರು ಸೇರಿ ಸುಮಾರು 3,000
ಕ್ಕಿಂತಲೂ ಅಧಿಕ ಮಂದಿಗೆ ಆಟಿ ಕಷಾಯವನ್ನು ವಿತರಿಸಲಾಯಿತು.

Post a Comment

0 Comments

Advertisement