ಸೆ. 13ರಂದು ವಾಲ್ಪಾಡಿಯಲ್ಲಿ ಸೋಣದ ಕೋಲ : ಪೂವ೯ಭಾವಿ ಸಭೆಯಲ್ಲಿ ನಿಧಾ೯ರ

ವಿನಯ್ ಕುಮಾರ್ ಅಧ್ಯಕ್ಷರು ಮತ್ತು ಸವ೯ ಸದಸ್ಯರು

ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಸರ್ವೋದಯ ಫ್ರೆಂಡ್ಸ್ ಬೆದ್ರ

ಸೆ. 13ರಂದು ವಾಲ್ಪಾಡಿಯಲ್ಲಿ ಸೋಣದ ಕೋಲ : ಪೂವ೯ಭಾವಿ ಸಭೆಯಲ್ಲಿ ನಿಧಾ೯ರ

 ಮೂಡುಬಿದಿರೆ : ವಾಲ್ಪಾಡಿ   ಗರಡಿಯಲ್ಲಿ *ಸೋಣದ ಕೋಲ" ನಡೆಸುವ ಬಗ್ಗೆ ಆದಿತ್ಯವಾರ ಪೂರ್ವ ಭಾವಿ ಸಭೆ ನಡೆಯಿತು. 
 
ಗರಡಿಯ ವಠಾರದಲ್ಲಿ ನಡೆದ  ಸಭೆಯಲ್ಲಿ ಗುತ್ತು ಬಕೆ೯ಯವರು ಮತ್ತು ಊರಿನ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಚಚೆ೯ ನಡೆಸಿ ಸೆ. 13ರಂದು ಸೋಣದ ಕೋಲ ನಡೆಸುವುದೆಂದು ತೀಮಾ೯ನಿಸಲಾಯಿತು.

ಗ್ರಾಮಸ್ಥರನ್ನು ಉದ್ದೇಶಿಸಿ  ಪ್ರದೀಪ್ ಕುಮಾರ್ ಅವರು ಮಾತನಾಡಿ ಗ್ರಾಮದ ಗರಡಿಗೆ ತಮ್ಮ ಹಿರಿಯರು ನೀಡಿರುವ ಅಪಾರ ಕೊಡುಗೆಗಳ ಬಗ್ಗೆ ಹಾಗು  ಗ್ರಾಮದ ಗರಡಿಯ ಮಹತ್ವಗಳ ಬಗ್ಗೆ ಮಾತನಾಡಿದರು. 

ಆಡಳಿತ ಕಮಿಟಿಯ ಕಾರ್ಯದರ್ಶಿ ಅನಿಲ್ ನೆಲ್ಕರ್ಜೆ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ತಮ್ಮ ಭರವಸೆಯಂತೆ ಎಲ್ಲರ ಸಹಕಾರದಿಂದ ಸಹಕಾರದಿಂದ  ಗರಡಿಯ ಕೆಲಸ ಕಾರ್ಯಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತೇವೆ ಎಂದು ಭರವಸೆ ನೀಡಿದರು. 

 ಆಡಳಿತ ಕಮಿಟಿಯ ಗೌರವ ಅಧ್ಯಕ್ಷರಾದ  ರತ್ನರಾಜ್ ಶೆಟ್ಟಿ ಪೆರಿಬೆಟ್ಟು, ಅಧ್ಯಕ್ಷರಾದ  ಗೋಪಾಲ ಪೂಜಾರಿ ಪಿತ್ತಿಲು, ಪ್ರಧಾನ ಕಾರ್ಯದರ್ಶಿ ಶ್ರೀ ಅಕ್ಷಯ್ ಶೆಟ್ಟಿ,  ಪ್ರಧಾನ ಕೋಶಾಧಿಕಾರಿ  ಸುಧಾಕರ್ ಪೂಜಾರಿ ಕುಂಚಿಲೆ ಹಾಗು ಕಮಿಟಿಯ ಸರ್ವ ಪಧಾದಿಕಾರಿಗಳು ಮತ್ತು ಸರ್ವ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

Post a Comment

0 Comments

Advertisement