ಈದ್ ಮಿಲಾದ್ ಪ್ರಯುಕ್ತ ರಸ್ತೆ ಬದಿ ಸ್ವಚ್ಛತಾ ಕಾಯ೯ವನ್ನು ಕೈಗೊಂಡ ವಾಲ್ಪಾಡಿ ಜಮಾತ್ ಬಾಂಧವರು

ವಿನಯ್ ಕುಮಾರ್ ಅಧ್ಯಕ್ಷರು ಮತ್ತು ಸವ೯ ಸದಸ್ಯರು

ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಸರ್ವೋದಯ ಫ್ರೆಂಡ್ಸ್ ಬೆದ್ರ

ಈದ್ ಮಿಲಾದ್ ಪ್ರಯುಕ್ತ ರಸ್ತೆ ಬದಿ ಸ್ವಚ್ಛತಾ ಕಾಯ೯ವನ್ನು ಕೈಗೊಂಡ ವಾಲ್ಪಾಡಿ ಜಮಾತ್ ಬಾಂಧವರು

ಮೂಡುಬಿದಿರೆ : ಮಂಗಳವಾರ ನಡೆಯಲಿರುವ ಪ್ರವಾದಿ ಮುಹಮ್ಮದ್ ಮುಸ್ತಫಾ (ಸ.ಅ) ಅವರ 1501 ನೇ ಜನ್ಮದಿನದ ಪ್ರಯುಕ್ತ ವಾಲ್ಪಾಡಿ ಮುಹಿಯುದ್ದೀನ್ ಜುಮ್ಮಾ ಮಸೀದಿ ಜಮಾತ್ ಬಾಂಧವರು ಶಿರ್ತಾಡಿ ಸರ್ಕಲ್‌ ನಿಂದ ವಾಲ್ಪಾಡಿ ಮಸೀದಿವರೆಗೆ ಸ್ವಚ್ಛತಾ ಕಾಯ೯ವನ್ನು ಕೈಗೊಂಡು ರಸ್ತೆಯ ಎರಡೂ ಬದಿಗಳಲ್ಲಿದ್ದ ಕಸ,ತ್ಯಾಜ್ಯ ವಸ್ತುಗಳನ್ನು  ಹೆಕ್ಕಿ ಸ್ವಚ್ಛಗೊಳಿಸಿದ್ದಾರೆ.ಶಿರ್ತಾಡಿ ಸಾಮ್ರಾಜ್ಯರ ಸರ್ಕಲನ್ನು ಶುಚಿಗೊಳಿಸಿದ್ದಾರೆ.

ಮಸೀದಿ ಕಮಿಟಿ ಅಧ್ಯಕ್ಷ ಎಂ.ಎಂ.ಶರೀಫ್,ಗೌರವಾಧ್ಯಕ್ಷರಾದ ಮುಹಮ್ಮದ್ ದೋಣಿಬಾಗಿಲು, ಶಿರ್ತಾಡಿ ಹಸನಬ್ಬ (ಬಾವುಞ್ಞಾಕ), ಮುಹಮ್ಮದ್ ಹನೀಫ್, ಜಮಾಲುದ್ದೀನ್,ರಮೀಝ್ ವಾಲ್ಪಾಡಿ, ಪತ್ರಕರ್ತ ಅಶ್ರಫ್ ವಾಲ್ಪಾಡಿ, ಹಮೀದ್ ಪುತ್ತ,ಖಾದರ್ ದೋಣಿಬಾಗಿಲು,ಲತೀಫ್, ಇಬ್ರಾಹಿಂ, ಹಸನಬ್ಬ ಕಜೆ, ಅಫ್ರಿದ್, ಅನ್ಸಾಫ್,ಸಲೀಮ್ ಎಣ್ಣೆಹೊಳೆ,ಅಬೂಬಕ್ಕರ್ ಮಾಂಟ್ರಾಡಿ, ಬದ್ರುದ್ದೀನ್,ಅಬ್ಬಾಸ್, ಅಶ್ಫಾಹ್ ವಾಲ್ಪಾಡಿ, ಶಹೀದ್,ಶಬೀಬ್ ಮತ್ತಿತರರು ಈ ಸ್ವಚ್ಚತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Post a Comment

0 Comments

Advertisement