ಬಿ. ಸಿ. ರೋಡ್ ನಲ್ಲಿ ಯುವತಿಯ ಭೀಕರ ಹತ್ಯೆ
ಮೂಡುಬಿದಿರೆ : ಬಿ. ಸಿ. ರೋಡ್ ನಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ಯುವತಿಯನ್ನು ನಡುರಸ್ತೆಯಲ್ಲೇ ಭೀಕರವಾಗಿ ಕಡಿದು ಹತ್ಯೆ ಮಾಡಿದ ಘಟನೆ ಗುರುವಾರ ಸಂಜೆ ನಡೆದಿದೆ.
ಬಂಟ್ವಾಳ ಕಕ್ಯಪದವು ನಿವಾಸಿ ಲಾವಣ್ಯ ( 21ವ) ಹತ್ಯೆಗೊಳಗಾದ ಯುವತಿ.
ಲಾವಣ್ಯ ಬಸ್ಸಿನಲ್ಲಿ ಬರುತ್ತಿದ್ದಾಗ ಹಿಂಬಾಲಿಸಿಕೊಂಡು ಬಂದು ಕೆ. ಎಸ್. ಆರ್. ಟಿ. ಸಿ ಬಸ್ ನಿಲ್ದಾಣದಲ್ಲಿ ಬಸ್ಸಿಗೆ ಕಾಯುತ್ತಿದ್ದ ಸಂದಭ೯ ಸಾವ೯ಜನಿಕರ ಎದುರೇ ಕಡಿದು ಪರಾರಿಯಾಗಿದ್ದಾನೆ.
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ತನಿಖೆ ಆರಂಭಿಸಿದ್ದಾರೆ. ಹತ್ಯೆಗೆ ಕಾರಣ ಇನ್ನಷ್ಟೇ ತಿಳಿದು ಬರಬೇಕಾಗಿದೆ.



0 Comments