ಮೂಡುಬಿದಿರೆ : ಜೀವನ ನಿರಂತರ ಕಲಿಕೆಯ ತಾಣ. ಸಕಾರಾತ್ಮಕ ಚಿಂತನೆಯೊಂದಿಗೆ ರೋಟರಿಯಂತಹ ಸಂಸ್ಥೆಗಳಲ್ಲಿ ತೊಡಗಿಸಿಕೊಂಡು ನಮ್ಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬಹುದು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ದ ಟ್ರಸ್ಟಿ ವಿವೇಕ್ ಆಳ್ವ ಅಭಿಪ್ರಾಯಪಟ್ಟರು.

ಜಾಹೀರಾತು/Advertisment
ಜಾಹೀರಾತು/Advertisment
ಮೂಡುಬಿದಿರೆ : ಜೀವನ ನಿರಂತರ ಕಲಿಕೆಯ ತಾಣ. ಸಕಾರಾತ್ಮಕ ಚಿಂತನೆಯೊಂದಿಗೆ ರೋಟರಿಯಂತಹ ಸಂಸ್ಥೆಗಳಲ್ಲಿ ತೊಡಗಿಸಿಕೊಂಡು ನಮ್ಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬಹುದು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ದ ಟ್ರಸ್ಟಿ ವಿವೇಕ್ ಆಳ್ವ ಅಭಿಪ್ರಾಯಪಟ್ಟರು.
ಅವರು ನಿಶ್ಮಿತ ಟವರ್ಸ್ ನ ಪ್ಯಾರಡೈಸ್ ಮಲ್ಟಿ ಪರ್ಪಸ್ ಹಾಲ್ ನಲ್ಲಿ ಶುಕ್ರವಾರ ಸಂಜೆ ನಡೆದ ರೋಟರಿ ಕ್ಲಬ್ ಆಫ್ ಮೂಡುಬಿದಿರೆ ಟೆಂಪಲ್ ಟೌನ್ ನ 2026-27ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. 
ರೋಟರಿ ಜಿಲ್ಲೆ 3181ರ ವಲಯ ನಾಲ್ಕರ ಅಸಿಸ್ಟೆಂಟ್ ಗವರ್ನರ್ ಬಿ. ಶ್ರೀಕಾಂತ್ ಕಾಮತ್ ಅವರು ನೂತನ ಅಧ್ಯಕ್ಷರಾದ ಡೆನ್ನಿಸ್ ಪಿರೇರ, ಕಾರ್ಯದರ್ಶಿ ಜಯಪ್ರಕಾಶ್ ಭಂಡಾರಿ ಹಾಗೂ ಪದಾಧಿಕಾರಿಗಳಿಗೆ ಪದಗ್ರಹಣ ನೆರವೇರಿಸಿ ಶುಭ ಹಾರೈಸಿ ಮಾತನಾಡಿದರು.
  ಭಾರತ್ ಸ್ಕೌಟ್ ಮತ್ತು ಗೈಡ್ಸ್‌ನ ಅಸಿಸ್ಟೆಂಟ್ ಕಮಿಷನರ್ (ಕಲ್ಚರಲ್ ಎಕ್ಸ್ಚೇಂಜ್ ವಿಭಾಗ) ಆಗಿ ಆಯ್ಕೆ ಆಗಿರುವ ಅವರನ್ನು ಶಾಲು ಫಲವಸ್ತು ಸನ್ಮಾನ ಪತ್ರ ದೊಂದಿಗೆ ಅಭಿನಂದಿಸಲಾಯಿತು.

ಸಭೆಯಲ್ಲಿ ಪ್ರಸಕ್ತ ಕ್ಲಬ್ ನಿಂದ ಅಸಿಸ್ಟೆಂಟ್ ಗವರ್ನರ್ ಆಗಿ ಸೇವೆ ಸಲ್ಲಿಸಿರುವ ಉಮೇಶ್ ರಾವ್ ಅವರಿಗೆ ಹಾಗೂ ನಿಕಟ ಪೂರ್ವ ಅಧ್ಯಕ್ಷ ಹರೀಶ್ ಎಂ. ಕೆ., ಕಾರ್ಯದರ್ಶಿ ಭರತ್ ಶೆಟ್ಟಿ, ಖಜಾಂಚಿ ಮಹಾವೀರ ಜೈನ ಅವರಿಗೆ ಸನ್ಮಾನಿಸಿ ಅಭಿನಂದಿಸಲಾಯಿತು. ವಲಯ ನಾಲ್ಕರ ಜೊನಲ್ ಲೆಫ್ಟಿನೆಂಟ್ ಪೂರ್ಣಚಂದ್ರ ಜೈನ್ ಹಾಗೂ ಟೆಂಪಲ್ ಟೌನ್ ಕ್ಲಬ್ ನ ಸ್ಪೂರ್ತಿ ಡಾಕ್ಟರ್ ಹರೀಶ್ ನಾಯಕ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ನಿಕಟಪೂರ್ವ ಅಧ್ಯಕ್ಷ ಹರೀಶ್ ಎಂ. ಕೆ. ಸ್ವಾಗತಿಸಿ, ಕಾರ್ಯದರ್ಶಿ ಭರತ್ ಶೆಟ್ಟಿ ವರದಿ ಮಂಡಿಸಿದರು. ನೂತನ ಕಾರ್ಯದರ್ಶಿ ಜಯಪ್ರಕಾಶ್ ಭಂಡಾರಿ ಧನ್ಯವಾದವಿತ್ತರು. ಶಾಲಾ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕಾಗಿ ಸಹಾಯ ಧನ, ಆರೋಗ್ಯ ಸಹಾಯ ಹಸ್ತಾಂತರಿಸಲಾಯಿತು. ಕ್ಲಬ್ ನ ಸದಸ್ಯರಾದ ಸಾರಿಕಾ ಬಂಗೇರ, ಪ್ರಿಯ ರೊಡ್ರಿಗಸ್, ಜೀವಿತ ಶಂಕರ್, ಆಗ್ನೆಸ್ ಡೇಸಾ, ಸರಿತಾ ಹರೀಶ್ ಅತಿಥಿಗಳನ್ನು ಪರಿಚಯಿಸಿದರು. ಪ್ರವೀಣ್ ಪಿರೇರಾ ನಿರೂಪಿಸಿದರು.

Post a Comment

0 Comments