ಮೂಡುಬಿದಿರೆ : ರಾ. ಹೆ 169 ರ ಮಿಜಾರಿನಲ್ಲಿ ಬೆಳ್ಳೆಚ್ಚಾರು ಪ್ರದೇಶದ ಜನರು ಸವೀ೯ಸ್ ಬಸ್ ಗೆ ಹೋಗಲು, ಶಾಲಾ ಮಕ್ಕಳು ಶಾಲೆಗೆ, ಮದರಸಕ್ಕೆ ಮತ್ತು ದೇವಸ್ಥಾನಕ್ಕೆ ಹೋಗಲು ಒಂದು ಕಿ. ಮೀ ದೂರ ಸುತ್ತು ಬಳಸಿ ಹೋಗಬೇಕಾಗುತ್ತದೆ ಆದ್ದರಿಂದ ಇಲ್ಲಿ ಅಂಡರ್ ಪಾಸ್ ನಿಮಿ೯ಸಬೇಕೆಂದು ಆಗ್ರಹಿಸಿ ಸ್ಥಳೀಯರು ಮಂಗಳವಾರ ಪ್ರತಿಭಟನೆ ನಡೆಸಿದರು.L
1O222 2wsaw 2edq ಈ ಬಗ್ಗೆ ಮಾತನಾಡಿದ ಸ್ಥಳೀಯರಾದ ಶಿವಪ್ರಸಾದ್ ಶೆಟ್ಟಿ ಅವರು ಮಾತನಾಡಿ ಬೆಳ್ಳೆಚ್ಚಾರು ಪ್ರದೇಶದಲ್ಲಿ ಈಗಾಗಲೆ ಕೆಲವು ಅಪಘಾತಗಳು ಆಗಿದ್ದು ಕೆಲವರು ಪ್ರಾಣ ಕಳೆದುಕೊಂಡದೆ ಕೆಲವು ಜನ ಭಾಗಶ: ಹಾನಿಗೊಳಗಾಗಿದ್ದಾರೆ. ರಾ. ಹೆದ್ದಾರಿ ಇಲಾಖೆಯ ಅಧಿಕಾರಿಗಳು ಮತ್ತು ಸಂಸದರು ಸಾವ೯ಜನಿಕರಿಗೆ ತೊಂದರೆಯಾಗದಂತೆ ಸೂಕ್ತ ರೀತಿಯಲ್ಲಿ ವ್ಯವಸ್ಥೆಯನ್ನು ಮಾಡಿಕೊಡಲಾಗುವುದು ಎಂದು ನಮ್ಮನ್ನು ಮೋಸ ಮಾಡುತ್ತಾ ಬಂದಿದ್ದಾರೆಂದು ಆರೋಪಿಸಿದ ಅವರು ಇಲ್ಲಿ ಸಣ್ಣ ಮಟ್ಟದ ಕೆಳಸೇತುವೆಯನ್ನು ನಿಮಿ೯ಸಿ ಸವೀ೯ಸ್ ರಸ್ತೆಗೆ ಸಂಪಕ೯ ಕಲ್ಪಿಸಿದರೆ ಅಪಘಾತಗಳು ಆಗುವುದನ್ನು ತಪ್ಪಿಸಬಹುದು ಎಂದು ಅಭಿಪ್ರಾಯಪಟ್ಟರು.
ಸ್ಥಳೀಯರಾದ ಶ್ರೀನಿವಾಸ್ ಅವರು ಮಾತನಾಡಿ ಬೆಳ್ಳೆಚ್ಚಾರಿನಲ್ಲಿ ಆಗುತ್ತಿರುವ ಸಾವು-ನೋವುಗಳಿಗೆ ಹೆದ್ದಾರಿ ಇಲಾಖೆಯೇ ಕಾರಣವಾಗಿದೆ. ಸಂಸದರು ಮತ್ತು ಶಾಸಕರು ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸದಿದ್ದರೆ ಮುಂದಿನ ದಿನಗಳಲ್ಲಿ ತೀವೃ ಹೋರಾಟದ ಮೂಲಕ ತಕ್ಕ ಉತ್ತರವನ್ನು ನೀಡಲಾಗುವುದು ಎಂದು ಎಚ್ಚರಿಸಿದರು.
ಆಟೋ ಚಾಲಕ ಮಾಲಕರ ಪರವಾಗಿ ಮಾತನಾಡಿದ ಚಂದ್ರಶೇಖರ ಅವರು ಇಲ್ಲಿ ರಸ್ತೆ ಅವಘಡಗಳು ಸಂಭವಿಸಿದಾಗ ಮೊದಲಿಗೆ ಸ್ಪಂದಿಸುವವರು ಆಟೋ ಚಾಲಕರು. ಮಹಿಳೆಯರು ಮತ್ತು ಶಾಲಾ ಮಕ್ಕಳು ತೊಂದರೆಯನ್ನು ಅನುಭವಿಸುತ್ತಿದ್ದು ಇಲ್ಲಿ ಸೂಕ್ತ ವ್ಯವಸ್ಥೆಯ ಅಗತ್ಯವಿದೆ ಎಂದರು.
ಪ್ರತಿಭಟನೆಯಲ್ಲಿ ಭಾಗವಹಿಸಿದವರು ಹೆದ್ದಾರಿ ಪ್ರಾಧಿಕಾರದ ವಿರುದ್ಧ ಘೋಷಣೆ ಕೂಗಿದರು.
ಜಿ. ಪಂ. ಮಾಜಿ ಸದಸ್ಯರುಗಳಾದ ಜನಾದ೯ನ ಗೌಡ, ಜಗದೀಶ್ ಅಧಿಕಾರಿ ಗ್ರಾ. ಪಂ. ಮಾಜಿ ಅಧ್ಯಕ್ಷರುಗಳಾದ ಹರೀಶ್ ಕೆ.ವಿ ಮೊಯಿದ್ದೀನ್ ಬಾವಾ, ರಾಮಣ್ಣ ಶೆಟ್ಟಿ, ಉಪಾಧ್ಯಕ್ಷರಾದ ಚಂದ್ರಹಾಸ ಉಕಿ೯, ತಾರನಾಥ ಸಾಲ್ಯಾನ್, ತಾರನಾಥ ಸಫಳಿಗ, ಪ್ರಸಾದ್ ಎಡಪದವು, ಅಶ್ಫಾಕ್, ತಾಹೀರ್, ರಿಜ್ವಾನ್, ಹೇಮಚಂದ್ರ ಶೆಟ್ಟಿ, ಸುದಶ೯ನ್ ಪೂಂಜಾ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
---------------------------
ರಾ. ಹೆ. ಇಲಾಖೆಯುಜಂಕ್ಷನ್ ಎದುರು ಶಾಲೆ ಇರುವುದರಿಂದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ರಸ್ತೆ ದಾಟಲು ತೊಂದರೆ ಅನುಭವಿಸುತ್ತಿದ್ದಾರೆ. ಶಾಲೆಗೆ ಹೋಗಲು ಒಂದೂವರೆ ಕಿಲೋಮೀಟರ್ ಸುತ್ತುವರೆದು ಹೋಗಬೇಕಾದ ಅನಿವಾರ್ಯತೆ ಇರುವುದರಿಂದ, ಇಲ್ಲಿ ತಕ್ಷಣವೇ ಫ್ಲೈಓವರ್ ಮಾದರಿಯ ಅಂಡರ್ ಪಾಸ್ ನಿರ್ಮಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಭರತ್ ಶೆಟ್ಟಿ ತಿಳಿಸಿದ್ದಾರೆ.
ಈ ಕುರಿತು ರಾಷ್ಟ್ರೀಯ ಹೆದ್ದಾರಿ ಯೋಜನಾ ನಿರ್ದೇಶಕ ಅಬ್ದುಲ್ ಜಾವೇದ್ ಅವರೊಂದಿಗೆ ಮಾತುಕತೆ ನಡೆಸಲಾಗಿದ್ದು, ಕಾನೂನುಬದ್ಧವಾಗಿ ಮೀಡಿಯನ್ ಓಪನಿಂಗ್ ಮಾಡಲು ಅಧಿಕಾರಿಗಳೊಂದಿಗೆ ಪರಿಶೀಲಿಸಲಾಗುವುದು.
ಸದ್ಯ ಎಂ.ಡಿ.ಆರ್ ಮತ್ತು ಸರ್ವಿಸ್ ರಸ್ತೆ ನಡುವಿನ ಅಂತರದಿಂದಾಗಿ ಮಳೆ ನೀರು ನಿಲ್ಲುವ ಸಮಸ್ಯೆ ಇದ್ದು, ಜಂಕ್ಷನ್‌ನಲ್ಲಿ ಹೈಮಾಸ್ಟ್ ದೀಪ ಅಳವಡಿಸಲು ಹಾಗೂ ಲೋಪಗಳನ್ನು ಸರಿಪಡಿಸಲು ಹೆದ್ದಾರಿ ಗುತ್ತಿಗೆದಾರರಿಗೆ ಸೂಚಿಸಿರುವುದಾಗಿ ಸ್ಪಷ್ಟಪಡಿಸಿದರು.
ಟ್ರಾಫಿಕ್ ಪೊಲೀಸ್ ಮತ್ತು ಹೆದ್ದಾರಿ ಅಧಿಕಾರಿಗಳು ಜಂಟಿ ಸಭೆ ನಡೆಸಿ, ಸಂಚಾರ ನಿಯಂತ್ರಣಕ್ಕಾಗಿ ಬ್ಯಾರಿಕೇಡ್‌ಗಳನ್ನು ಅಳವಡಿಸಲು ತಿಳಿಸಲಾಗುವುದು ಎಂದು ಭರತ್ ಶೆಟ್ಟಿ ತಿಳಿಸಿದರು.
----==========


0 Comments