ಮೂಡುಬಿದಿರೆ : ಸಂತ ತೆರೆಜಮ್ಮನವರ ದೇವಾಲಯ ನಿಡ್ಡೋಡಿಯಲ್ಲಿ ರವಿವಾರ ಬೆಳಗ್ಗಿನ ಬಲಿಪೂಜೆಯ ನಂತರ ಕಥೊಲಿಕ್ ಸಭಾ ಮಂಗಳೂರು ಪ್ರದೇಶ (ರಿ) ನಿಡ್ಡೋಡಿ ಘಟಕದ ನೇತೃತ್ವದಲ್ಲಿ 9 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರಧಾನ ಮಾಡಲಾಯಿತು.
ಚರ್ಚಿನ ಧರ್ಮಗುರುಗಳಾದ ವಂ/ಲಿಯೋ ವಿಲಿಯಂ ಲೋಬೊ ಅವರು ಎಸ್.ಎಸ್ ಎಲ್. ಸಿ, ದ್ವಿತೀಯ ಪಿಯುಸಿ, ಮತ್ತು ಇಂಜಿನಿಯರಿಂಗ್ ನಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಾದ ರಿಯೋಲಿನ್ ಸಲೋಮಿ ಡಿಸೋಜಾ, ರಿಶಾ ಡಿಸೋಜಾ, ಮರಿಶಾ ಸೆರಾವೊ,ಜೇನ್ ಕಾರ್ಡೊಜಾ,ಜೆನಿಟಾ ತಾವ್ರೊ,ಲಿಯೋನಾ ಡಿಸೋಜಾ, ಆಶೆಲ್ ಲವಿಟಾ ಡಿಸಿಲ್ವ,ಆನ್ಯಾ ಡಿಸೋಜಾ, ಜೋಶ್ವಾ ಡಿಸೋಜಾ ಅವರನ್ನು ಸನ್ಮಾನಿಸಿದರು.
ಚರ್ಚಿನ ಪಾಲನಾ ಸಮಿತಿಯ ಉಪಾಧ್ಯಕ್ಷ ಶರ್ಮಿಳಾ ಸೆರಾವೊ, ಕಾರ್ಯದರ್ಶಿ ಪ್ರಿಮಾ, ಕೊರೆಯಾ ಕಥೊಲಿಕ್ ಸಭಾ ನಿಡ್ಡೋಡಿ ಘಟಕದ ಅಧ್ಯಕ್ಷೆ ಸರಿತ ತಾವ್ರೊ, ನಿಕಟ ಪೂರ್ವ ಅಧ್ಯಕ್ಷ ಕಿಶೋರ್ ಡಿಸೋಜಾ ಉಪಸ್ಥಿತರಿದ್ದರು. ಕಾರ್ಯದರ್ಶಿ ಜೀವನ್ ಕ್ರಾಸ್ತಾ ಕಾರ್ಯಕ್ರಮ ನಿರೂಪಿಸಿದರು.


0 Comments