ಒಂದು ವರ್ಷ ಆಗದ್ದನ್ನು ಒಂದೇ ದಿನದಲ್ಲಿ ಮಾಡಿ ತೋರಿಸಿದ ನಳಿನ್ ಕುಮಾರ್ ಕಟೀಲು: ಕಾಲು ಕಳೆದುಕೊಂಡ ಮಹಿಳೆಯ ಖಾತೆಗೆ ಬಂತು 23 ಲಕ್ಷ ರೂಪಾಯಿ

ಜಾಹೀರಾತು/Advertisment
ಜಾಹೀರಾತು/Advertisment
ಒಂದು ವರ್ಷ ಆಗದ್ದನ್ನು ಒಂದೇ ದಿನದಲ್ಲಿ ಮಾಡಿ ತೋರಿಸಿದ ನಳಿನ್ ಕುಮಾರ್ ಕಟೀಲು: ಕಾಲು ಕಳೆದುಕೊಂಡ ಮಹಿಳೆಯ ಖಾತೆಗೆ ಬಂತು 23 ಲಕ್ಷ ರೂಪಾಯಿ
ಉಳ್ಳಾಲ ತಾಲೂಕಿನ ಮಂಜನಾಡಿ ಗ್ರಾಮದ ಮೋಂಟೆಪದವು ಎಂಬಲ್ಲಿ ಕಳೆದ ವರ್ಷ ಸುರಿದ ಭಾರಿ ಮಳೆಗೆ ಒಂದು ಕುಟುಂಬವೇ ಕಣ್ಣೀರಿಡುವ ಪರಿಸ್ಥಿತಿಗೆ ಬಂದಿದೆ. ಅವೈಜ್ಞಾನಿಕ ರಸ್ತೆ ನಿರ್ಮಾಣ ಕಾರಣ ಗೋಡೆ ಕುಸಿತದಿಂದ ಒಂದು ಕುಟುಂಬ ಇಂದಿಗೂ ಕಣ್ಣೀರಿನಲ್ಲಿ ದಿನ ಕಳೆಯುತ್ತಿದೆ. 
ತನ್ನ ಇಬ್ಬರು ಮಕ್ಕಳು ಅತ್ತೆ ಸಹಿತ ಕುಟುಂಬವನ್ನೇ ಕಳೆದುಕೊಂಡ ಅಶ್ವಿನಿ ಎಂಬ ಮಹಿಳೆಯ ಪರಿಸ್ಥಿತಿಯು ಅತ್ಯಂತ ಸಂಕಷ್ಟದಲ್ಲಿದ್ದು ತನ್ನ ಎರಡೂ ಕಾಲುಗಳನ್ನು ಕಳೆದುಕೊಂಡು ಕ್ಲಿಷ್ಟಕರ ಜೀವನವನ್ನು ಸಾಗಿಸುತ್ತಿದ್ದಾರೆ. ಸರ್ಕಾರದಿಂದ ಬಂದ ಸಣ್ಣಪುಟ್ಟ ಸಹಾಯಧನ ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ. ಅಶ್ವಿನಿ ಸರಿಯಾಗಿ ನಡೆಯಬೇಕಾದರೆ ಎರಡು ಕಾಲುಗಳನ್ನು ಜೋಡಿಸಿ ಎಂದಿನಂತೆ ಚಟುವಟಿಕೆ ಮಾಡಬೇಕಾದರೆ 23 ಲಕ್ಷ ರೂಪಾಯಿ ಹಣದ ಅವಶ್ಯಕತೆ ಇತ್ತು. ಎರಡೂ ಕಾಲು ಕಳೆದುಕೊಂಡರೂ ಸರ್ಕಾರದ ಸಹಕಾರಕ್ಕೆ ಕೈಚಾಚುತ್ತಲೇ ಇದ್ದರು. ಆದರೆ ಆಳುವ ವರ್ಗಕ್ಕೆ ಅಶ್ವಿನಿ ಕಣ್ಣೀರು ಕಾಣಲೇ ಇಲ್ಲ. ಅಧಿಕಾರಿಗಳದ್ದು ದಿವ್ಯ ಮೌನ.
ಕುಟುಂಬವನ್ನು ಕಳೆದುಕೊಂಡು ದಿಕ್ಕು ತೋಚದ ಅಶ್ವಿನಿಗೆ ನೆರವಾಗಿದ್ದು ಭಾರತೀಯ ಜನತಾ ಪಾರ್ಟಿಯ ಮಾಜಿ ರಾಜ್ಯಾಧ್ಯಕ್ಷರು ದಕ್ಷಿಣ ಕನ್ನಡ ಜಿಲ್ಲೆಯ ಮಾಜಿ ಸಂಸದರಾದ ನಳಿನ್ ಕುಮಾರ್ ಕಟೀಲು ರವರು. ಅಶ್ವಿನಿಯವರ ಈ ಚಿಂತಾಜನಕ ಪರಿಸ್ಥಿತಿಯನ್ನು ಕಂಡು ರಾಜ್ಯ ಸರ್ಕಾರದ ಯಾವುದೇ ಸಹಕಾರ ಸಿಗದೇ ಇದ್ದಾಗ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಸತೀಶ್ ಕುಂಪಲ ಹಾಗೂ ಮಂಗಳೂರು ವಿಧಾನಸಭಾ ಕ್ಷೇತ್ರದ ಮಂಡಲ ಅಧ್ಯಕ್ಷರಾದ ಜಗದೀಶ್ ಆಳ್ವರವರು ಈ ವಿಚಾರವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖರಲ್ಲಿ ತಿಳಿಸುತ್ತಾರೆ. ಸಂಘದ ಹಿರಿಯರು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ರವರ ಗಮನಕ್ಕೆ ತಂದಾಗ ಸಂತೋಷ್ ಜಿ ಅವರು ನಳಿನ್ ಕುಮಾರ್ ಕಟೀಲು ರವರಿಗೆ ದೂರವಾಣಿ ಸಂಪರ್ಕದ ಮೂಲಕ ಮಾಹಿತಿಯನ್ನು ವಿವರಿಸುತ್ತಾರೆ. ಮತ್ತು ಈ ಬಗ್ಗೆ ಒಂದಷ್ಟು ಸಲಹೆಗಳನ್ನು ನೀಡುತ್ತಾರೆ. ಕೂಡಲೇ ಕಾರ್ಯಪ್ರವೃತ್ತರಾದ ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ರವರು ಮಹಾರಾಷ್ಟ್ರದ ಸಚಿವ ಮಂಗಳ್ ಪ್ರಭಾತ್ ಲೋಧಾ ಅವರನ್ನು ಸಂಪರ್ಕಿಸಿ ಈ ರೀತಿಯಾದ ಸಹಕಾರವನ್ನು ಕೋರುತ್ತಾರೆ. ನಳಿನ್ ಕುಮಾರ್ ಕಟೀಲುರವರ ಮನವಿಯನ್ನು ತುರ್ತು ಸ್ವೀಕರಿಸಿದ ಮಹಾರಾಷ್ಟ್ರದ ಸಚಿವರಾದ ಮಂಗಳ್ ಪ್ರಭಾತ್ ಲೋಧಾ ರವರು ತಡಮಾಡದೆ ತನ್ನ ಲೋಧಾ ಚಾರಿಟೇಬಲ್ ಟ್ರಸ್ಟ್ ಮೂಲಕ ಕೂಡಲೇ 23 ಲಕ್ಷ ರೂಪಾಯಿ ಹಣವನ್ನು ಸಂಬಂಧಿಸಿದ ಕೃತಕ ಕಾಲು ಜೋಡಣೆ ಮಾಡುವ ಎಂಡೋಲೈಟ್ ಎಂಬ ಕಂಪನಿಗೆ ಹಸ್ತಾಂತರಿಸುತ್ತಾರೆ. ಈ ವಿಚಾರವನ್ನು ಸ್ವತಃ ನಳಿನ್ ಕುಮಾರ್ ಕಟೀಲು ರವರು ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ ಹಾಗೂ ಮಂಡಲದ ಪದಾಧಿಕಾರಿಗಳ ಜೊತೆಗೆ ಅಶ್ವಿನಿಯವರ ಮನೆಗೆ ಆಗಮಿಸಿ ಕಟೀಲು ಶ್ರೀ ದುರ್ಗಾಂಬಿಕೆಯ ಮೂರ್ತಿಯನ್ನು ಹಸ್ತಾಂತರಿಸುವ ಮೂಲಕ ದೃಢೀಕರಣ ಪಡಿಸಿದ್ದಾರೆ. 
ನಳೀನ್ ಕುಮಾರ್ ಕಟೀಲು ರವರ ಈ ಮಾನವೀಯ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಅವರ ಈ ತುರ್ತು ಸಹಕಾರ ಆ ಕುಟುಂಬಕ್ಕೆ ಹೊಸ ಜೀವನವನ್ನು ನೀಡಿದೆ ಎಂದು ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ ರವರು ಶ್ಲಾಘಿಸಿದ್ದಾರೆ. ಒಂದಷ್ಟು ದಿನ ಅಶ್ವಿನಿ ಅವರಿಗೆ ಕಂಪನಿ ಮೂಲಕ ನಡೆಯುವ ತರಬೇತಿಯನ್ನು ನೀಡಲಿದ್ದು ನಂತರ ಆಕೆ ಸಂಪೂರ್ಣವಾಗಿ ಹಿಂದಿನಂತೆಯೇ ನಡೆಯಬಹುದು ಎಂದು ಕಂಪನಿಯ ಮೂಲಗಳು ತಿಳಿಸಿವೆ.

Post a Comment

0 Comments