ಮಿಜಾರು ಕೆಪಿಎಸ್ ಶಾಲಾ ಆವರಣದಲ್ಲಿ ನೂತನ ಕೊಠಡಿಗಳ ನಿಮಾ೯ಣ ಕಾಮಗಾರಿ ಆರಂಭ : ಸ್ಥಳೀಯರ ವಿರೋಧ
ಮೂಡುಬಿದಿರೆ : ತಾಲೂಕಿನ ತೆಂಕಮಿಜಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ತೋಡಾರಿನಲ್ಲಿರುವ ಮಿಜಾರು ಕೆಪಿಎಸ್ ಶಾಲಾ ಆವರಣದಲ್ಲಿ ನಿಮಾ೯ಣಗೊಳ್ಳುತ್ತಿರುವ ಪ್ರಾಥಮಿಕ ಶಾಲೆಯ ಕೊಠಡಿಗಳಿಗೆ ಸ್ಥಳೀಯರು ಶನಿವಾರ ವಿರೋಧ ವ್ಯಕ್ತಪಡಿಸಿದ್ದಾರೆ. 
 ಮಿಜಾರು ಶಾಲೆ( ಬಂಗಬೆಟ್ಟು ಶಾಲೆ)ಯ ಹೆಸರಿನಲ್ಲಿ 2.95 ಎಕರೆ ಜಾಗವಿದ್ದು ಅದರಲ್ಲಿ 95 ಸೆನ್ಸ್ ಜಾಗವನ್ನು ಮಿಜಾರಿನ ಸರಕಾರಿ ಹೈಸ್ಕೂಲ್, ಪದವಿಪೂರ್ವ ಕಾಲೇಜು ಆಗುವಾಗ ಬಿಟ್ಟುಕೊಡಲಾಗಿತ್ತು. ಉಳಿದ ಎರಡು ಎಕರೆ ಜಾಗವನ್ನು ಆಟದ ಬಯಲಾಗಿ ಶಾಲಾ ಮಕ್ಕಳು ಮತ್ತು ಊರವರು ವಿನಿಯೋಗಿಸುತ್ತಿದ್ದರು. 
   ಮಿಜಾರು ಬಂಗಬೆಟ್ಟು ಶಾಲೆಯು ಇದೀಗ ಮಿಜಾರು ಕೆ.ಪಿ.ಎಸ್.ಶಾಲೆಯೆಂದು ಬದಲಾಗಿರುವುದರಿಂದ ಬಂಗಬೆಟ್ಟು ಪ್ರಾಥಮಿಕ ಶಾಲೆಯು, ಪ್ರೌಢ ಶಾಲೆ ಹಾಗೂ ಪ. ಪೂ. ಕಾಲೇಜು ಒಂದೇ ಆವರಣದಲ್ಲಿ ಇರಬೇಕೆಂಬುದು ಶಿಕ್ಷಣ ಇಲಾಖೆಯ ನಿಯಮ. 
 ಪ್ರಾಥಮಿಕ ಶಾಲೆಗೆ ನಾಲ್ಕು ಕೊಠಡಿಗಳು ಮಂಜೂರಾಗಿದ್ದು ಅದನ್ನು ಪ್ರೌಢಶಾಲೆ ಮತ್ತು ಕಾಲೇಜಿನ ಸಮೀಪವಿರುವ ಆಟದ ಬಯಲಿನ ಒಂದು ಭಾಗದಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ ಕಾಮಗಾರಿ ಪ್ರಾರಂಭವಾಗಿದ್ದು ಈ ಸಂದಭ೯ ಸ್ಥಳೀಯರು ಸ್ಥಳದಲ್ಲಿ ಜಮಾಯಿಸಿದ್ದು ಈ ಆಟದ ಮೈದಾನದಲ್ಲಿ ಹೊಸ ಕೊಠಡಿಗಳ ನಿರ್ಮಾಣಕ್ಕೆ ಅವಕಾಶ ನೀಡಬಾರದೆಂದು ಆಗ್ರಹಿಸಿದ್ದಾರೆ.

ಹಿಂದೊಮ್ಮೆ ಈ ಹೊಸಕೊಠಡಿಗಳ ಗುದ್ದಲಿಪೂಜೆ ಆದ ವಿಷಯ ತಿಳಿದು ಗ್ರಾಮಸ್ಥರು ಪ್ರತಿಭಟಿಸಿ ಪತ್ರಿಕಾಗೋಷ್ಠಿ ಮಾಡಿ ಶಾಲೆಯ ಇತಿಹಾಸ ಮತ್ತು ತಮ್ಮ ಬೇಡಿಕೆಗಳನ್ನು ತಿಳಿಸಿದ್ದರು.
ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ತಮ್ಮ ಮನವಿ ಸಲ್ಲಿಸಿದ್ದ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದರು. 
 
ಇದೀಗ ಶಿಕ್ಷಣ ಇಲಾಖೆಯ ಮೇಲಾಧಿಕಾರಿಗಳು ತಾಲೂಕು ಶಿಕ್ಷಣಾಧಿಕಾರಿ ಮತ್ತು ಪ್ರಾಂಶುಪಾಲರನ್ನು ತಮ್ಮ ಕಛೇರಿಗೆ ಕರೆಸಿ ಕೊಠಡಿಗಳ ನಿಮಾ೯ಣ ವಿಳಂಬದ ಬಗ್ಗೆ ಪ್ರಶ್ನಿಸಿ ತಕ್ಷಣ ಕಾಮಗಾರಿಯನ್ನು ಆರಂಭಿಸುವಂತೆ, ಈ ಬಗ್ಗೆ ಯಾವುದಾದರೂ ಆಕ್ಷೇಪಣೆ ಇದ್ದಲ್ಲಿ ಸ್ಥಳೀಯ ಪೊಲೀಸರ ಸಹಕಾರ ಪಡೆದು ನಿಯಮಾನುಸಾರ ತುತಾ೯ಗಿ ಕ್ರಮಕೈಗೊಳ್ಳುವಂತೆ ಆದೇಶಿಸಿದ ಹಿನ್ನೆಲೆಯಲ್ಲಿ ಕಾಮಗಾರಿ ಪ್ರಾರಂಭಿಸಿದ್ದಾರೆ.  

ತಾ.ಪಂ.ಮಾಜಿ ಸದಸ್ಯರಾದ ಎಂ.ಜಿ.ಮುಹಮ್ಮದ್, ಗ್ರಾ.ಪಂ.ಮಾಜಿ ಸದಸ್ಯರಾದ ಹರಿಪ್ರಸಾದ್ ಶೆಟ್ಟಿ, ಎಂ.ಎ.ಅಶ್ರಫ್, ಪ್ರಮುಖರಾದ ಹಫೀಝ್ ತೋಡಾರ್, ಇಸ್ಮಾಯಿಲ್, ರಿಝ್ವಾನ್ ಮತ್ತಿತರರು ಇದ್ದರು.

---------------------
ಶಾಲೆ ಹಾಗೂ ಮೈದಾನ ನಿಮಾ೯ಣಕ್ಕೆ ಊರಿನವರ ಕೊಡುಗೆ ಅಪಾರ. ಶಾಲೆಯ ಅಭಿವೃದ್ಧಿಗೆ ಹಿಂದೆ ದಾನಿಗಳು ತಮ್ಮ ಜಮೀನನ್ನು ಬಿಟ್ಟುಕೊಟ್ಟಿದ್ದರು. ಈ ಭಾಗದಲ್ಲಿ ಇದೊಂದೇ ಮೈದಾನವಿದ್ದು ಒಂದು ವೇಳೆ ಈ ಜಾಗದಲ್ಲಿ ಕಟ್ಟಡ ನಿಮಾ೯ಣವಾದರೆ ಸುಮಾರು 700 ವಿದ್ಯಾಥಿ೯ಗಳ ಕ್ರೀಡಾ ಚಟುವಟಿಕೆಗಳಿಗೆ ಅಡಚಣೆಯಾಗುತ್ತದೆ. ಅಲ್ಲದೆ ಊರಿನ ಇತರ ಕ್ರೀಡಾ ಚಟುವಟಿಕೆಗಳಿಗೆ ಅಡ್ಡಿಯಾಗುತ್ತದೆ. ಶಾಲೆಯ ಅಭಿವೃದ್ಧಿಗೆ ತಮ್ಮ ವಿರೋಧವಿಲ್ಲ. ಪ್ರೌಢಶಾಲೆಯ ಹಳೆ ಕಟ್ಟಡದಲ್ಲಿ ಬಹುಮಹಡಿ ಕಟ್ಟಡದಲ್ಲಿ ಕೊಠಡಿ ನಿಮಿ೯ಸಲಿ : ದಿವಾಕರ ಶೆಟ್ಟಿ ತೋಡಾರು (ಪಂಚಾಯತ್ ಮಾಜಿ ಸದಸ್ಯ)
________________________