ಸುವಣ೯ ಮಹೋತ್ಸವದ ಸಂಭ್ರಮದಲ್ಲಿ ಮೂಡುಬಿದಿರೆ ಲಯನ್ಸ್ ಕ್ಲಬ್ : ಜೂನ್ 25ರಂದು "ಹರಿಭವ" ಸಂಭಾಗಣ ಲೋಕಾಪ೯ಣೆ

ಜಾಹೀರಾತು/Advertisment
ಜಾಹೀರಾತು/Advertisment
ಸುವಣ೯ ಮಹೋತ್ಸವದ ಸಂಭ್ರಮದಲ್ಲಿ ಮೂಡುಬಿದಿರೆ ಲಯನ್ಸ್ ಕ್ಲಬ್ : ಜೂನ್ 25ರಂದು "ಹರಿಭವ" ಸಂಭಾಗಣ ಲೋಕಾಪ೯ಣೆ
 ಮೂಡುಬಿದಿರೆ: ಇಲ್ಲಿನ ಲಯನ್ಸ್ ಕ್ಲಬ್ ೫೦ ವರ್ಷಗಳನ್ನು ಪೂರ್ಣಗೊಳಿಸಿದ್ದು, ಜೂನ್ ೨೫ರಂದು ಸುವರ್ಣ ಮಹೋತ್ಸವ ಆಚರಿಸಲಿದ್ದು ಈ ಸಂದರ್ಭ ಸುಮಾರು ೪೫ಲಕ್ಷ ವೆಚ್ಚದಲ್ಲಿ ನಿರ್ಮಿಸಿದ 'ಹರಿಭವ' ಸಭಾಂಗಣವನ್ನು ಲೋಕಾರ್ಪಣೆಗೊಳಿಸಲಾಗುವುದು ಕ್ಲಬ್ ನ ಅಧ್ಯಕ್ಷ ಶಿವಪ್ರಸಾದ್ ಹೆಗ್ಡೆ ತಿಳಿಸಿದ್ದಾರೆ. 

ಅವರು ಶನಿವಾರ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾ ಗೋಪ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮವನ್ನು ಲಯನ್ಸ್ ಜಿಲ್ಲೆ, ೩೧೭ ಡಿ ಇದರ ಜಿಲ್ಲಾ ರಾಜ್ಯಪಾಲ ಕುಡ್ಪಿ ಅರವಿಂದ ಶೆಣೈ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಉಮಾನಾಥ ಎ. ಕೋಟ್ಯಾನ್, ಮಾಜಿ ಸಚಿವ ಕೆ ಅಭಯಚಂದ್ರ ಜೈನ್, ಲಯನ್ಸ್ ಜಿಲ್ಲೆಯ ನಿಯೋಜಿತ ರಾಜ್ಯಪಾಲ ಎಚ್. ಎಂ. ತಾರನಾಥ್, ಪ್ರಥಮ ಜಿಲ್ಲಾ ಉಪ ರಾಜ್ಯಪಾಲ ಗೋವರ್ಧನ್ ಕೆ ಶೆಟ್ಟಿ, ದ್ವಿತೀಯ ಜಿಲ್ಲಾ ಉಪರಾಜ್ಯಪಾಲ ವೆಂಕಟೇಶ್ ಹೆಬ್ಬಾರ್, ಪ್ರಾಂತೀಯ ಅಧ್ಯಕ್ಷ ಡಿ ಕೆ ಜಗದೀಶ್ ಚಂದ್ರ, ವಲಯಾಧ್ಯಕ್ಷ ಜೋಸ್ಸಿ ಮೆನೇಜಸ್ ಭಾಗವಹಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ನ ಅಧ್ಯಕ್ಷ ಶಿವಪ್ರಸಾದ್ ಹೆಗ್ಡೆ ಕಣಂಜಾರು ವಹಿಸಿಕೊಳ್ಳಲಿದ್ದಾರೆ ಎಂದರು.
ಪತ್ರಿಕಾಗೋಪ್ಠಿಯಲ್ಲಿ ಜೋಸ್ಸಿ ಮೆನೇಜಸ್ ಕಾರ್ಯದರ್ಶಿ ಓಸ್ವಾಲ್ಡ್ ಡಿಕೋಸ್ತ, ರಿಚರ್ಡ್ ಕರ್ಡೋಜ ಉಪಸ್ಥಿದರಿದ್ದರು.

Post a Comment

0 Comments