ಮಿಜಾರು ಹರಿಮಿನಾಕ್ಷಿ ದೋಟ ಹರಿಯಪ್ಪ ಶೆಟ್ಟಿ, ಆಲಂಗಾರು ಈಶ್ವರ ಭಟ್ ದಂಪತಿಗಳಿಗೆ ಗೌರವ
ಮೂಡುಬಿದಿರೆ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದ 12 ವರ್ಷಗಳ ‘ವಿಶ್ವಾಸ, ವಿಕಾಸ ಮತ್ತು ಜನ ಕಲ್ಯಾಣ’ದ ಪ್ರಯುಕ್ತ ಸಂಸದ ದ. ಕ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರ ಉಪಸ್ಥಿತಿಯಲ್ಲಿ ನಡೆಯುತ್ತಿರುವ “ವಿಶೇಷ ಸಂಪರ್ಕ ಅಭಿಯಾನ” ದ ಅಂಗವಾಗಿ ತೆಂಕಮಿಜಾರು ಗ್ರಾಮದ ಹಿರಿಯರು, ಪ್ರಗತಿಪರ ಕೃಷಿಕರೂ ಆಗಿರುವ ಹರಿಯಪ್ಪ ಶೆಟ್ಟಿ ಹರಿಮೀನಾಕ್ಷಿದೋಟ ಹಾಗೂ ಆಲಂಗಾರು ಬಡಗು ಮಹಾಲಿಂಗೇಶ್ವರ ದೇವಸ್ಥಾನ ಪ್ರಧಾನ ಅಚ೯ಕ ಅವರ ಈಶ್ವರ ಭಟ್ ಅವರನ್ನು ಸೋಮವಾರ ಭೇಟಿ ಮಾಡಿ ಗೌರವಿಸಿದರು.
ಈ ಸಂದಭ೯ದಲ್ಲಿ ಶಾಸಕ ಉಮಾನಾಥ ಎ. ಕೋಟ್ಯಾನ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷರುಗಳಾದ ಸುನೀಲ್ ಆಳ್ವ, ಶಾಂತಿಪ್ರಸಾದ್ ಹೆಗ್ಡೆ, ಮುಲ್ಕಿ ಮೂಡುಬಿದಿರೆ ಮಂಡಲಾಧ್ಯಕ್ಷ ದಿನೇಶ್ ಪುತ್ರನ್ ಪ್ರಧಾನ ಕಾಯ೯ದಶಿ೯ಗಳಾದ ರಂಜಿತ್ ಪೂಜಾರಿ, ಹರಿಪ್ರಸಾದ್, ಮೂಡುಬಿದಿರೆ ನಗರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಲಕ್ಷ್ಮಣ್ ಪೂಜಾರಿ, ಪುತ್ತಿಗೆ ಶಕ್ತಿ ಕೇಂದ್ರದ ಅಧ್ಯಕ್ಷ ನಾಗೇಶ್ ಇರುವೈಲ್, ಪುರಸಭೆಯ ಮಾಜಿ ಉಪಾಧ್ಯಕ್ಷ ನಾಗರಾಜ ಪೂಜಾರಿ, ಪ್ರಮುಖರಾದ ಸುಕೇಶ್ ಶೆಟ್ಟಿ ಎದಮಾರು, ದೀಕ್ಷಿತ್ ಪಣಪಿಲ, ಸಚಿನ್ ಪಣಪಿಲ, ಮುಖಂಡರುಗಳಾದ ಕೆ. ಆರ್. ಪಂಡಿತ್, ಎಂ. ಎಸ್. ಕೋಟ್ಯಾನ್, ಕೆ. ಕೃಷ್ಣರಾಜ ಹೆಗ್ಡೆ, ಮೇಘನಾಥ ಶೆಟ್ಟಿ, ಅಶ್ವತ್ಥ್ ಪಣಪಿಲ ಜೋಯ್ಲಸ್ ಡಿ"ಸೋಜಾ ತಾಕೊಡೆ ಮತ್ತಿತರರು ಈ ಸಂದಭ೯ದಲ್ಲಿದ್ದರು.


0 Comments