ಅನಾರೋಗ್ಯ ಪೀಡಿತರ ಚಿಕಿತ್ಸೆಗೆ ಸಾಯಿ ಮಾನಾ೯ಡ್ ನೆರವು

ಜಾಹೀರಾತು/Advertisment
ಜಾಹೀರಾತು/Advertisment
ಅನಾರೋಗ್ಯ ಪೀಡಿತರ ಚಿಕಿತ್ಸೆಗೆ ಸಾಯಿ ಮಾನಾ೯ಡ್ ನೆರವು
ಮೂಡುಬಿದಿರೆ : ಸಾಯಿ ಮಾರ್ನಾಡ್ ಸೇವಾ ಸಂಘ ಟ್ರಸ್ಟ್ (ರಿ.)ಅಮನಬೆಟ್ಟು, ಪಡುಮಾರ್ನಾಡ್ ಇದರ ಸೇವಾ ಯೋಜನೆ 94
ಏಪ್ರಿಲ್ ತಿಂಗಳ 2ನೇ ಯೋಜನೆಯನ್ನು ಅನಾರೋಗ್ಯ ಹೊಂದಿರುವ 
ಬ್ರಹ್ಮಾವರ ತಾಲೂಕಿನ ಕೋಟತಟ್ಟು ಗ್ರಾಮದ ಹಂದ ಟು ಪರಿಸರದ ಯೋಗೀಶ್ ಎಂಬವರ ಚಿಕಿತ್ಸೆಗೆ ರೂ. 10000ವನ್ನು ನೀಡಲಾಯಿತು.

ಯೋಗೀಶ್ ಅವರಿಗೆ ಫೆ.19ರಂದು ಬೈಕ್ ಆಕ್ಸಿಡೆಂಟ್ ಆಗಿ ಕಾಲು ಮುರಿತವಾಗಿದ್ದು ಇವರು ಕೋಟೇಶ್ವರ ದ ಎನ್. ಆರ್. ಆಚಾರ್ಯ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಯನ್ನು ಪಡೆದಿದ್ದಾರೆ. ಈ ವರೆಗೆ ರೂ 2ಲಕ್ಷ ಖರ್ಚಾಗಿದ್ದು ಈಗ ಪ್ರತಿದಿನ ಫಿಸಿಯೋಥೆರಪಿ ಮಾಡಬೇಕಾಗಿದೆ.
 ಇವರಿಗೆ ಎರಡು ಜನ ಹೆಣ್ಣು ಮಕ್ಕಳಿದ್ದು ಒಬ್ಬಳು ದ್ವಿತೀಯ ಪಿ. ಯು. ಸಿ. ಇನ್ನೊಬ್ಬಳು ಒಂಬತ್ತನೇ ತರಗತಿ ಯಲ್ಲಿ ಕಲಿಯುತ್ತಿದ್ದಾರೆ. ಇವರ ಮನೆಯ ಆಧಾರ ವಾಗಿದ್ದ ಯೋಗೀಶ್ ಅವರು ಹಾಸಿಗೆ ಯಲ್ಲಿ ಇದ್ದು ಇವರ ಮನೆಯ ಹಾಗೂ ಆಸ್ಪತ್ರೆಯ ಖರ್ಚು ನಿಭಾಯಿಸಲು ಕಷ್ಟ ಆಗಿರುವುದರಿಂದ ಸೇವಾ ಸಂಘದಿಂದ ರೂ. 10000 ಚೆಕ್ಕ್ ಅನ್ನು ಮೂಡುಬಿದಿರೆ ಮಾರಿಗುಡಿ ದೇವಸ್ಥಾನ ಎದುರು ನೀಡಲಾಯಿತು.

Post a Comment

0 Comments