ಅಮನಬೆಟ್ಟುವಿನ ಸಾಯಿ ಮಾರ್ನಾಡ್ ಸೇವಾ ಸಂಘದಿಂದ ಚಿಕಿತ್ಸೆಗೆ ಧನ ಸಹಾಯ

ವಿನಯ್ ಕುಮಾರ್ ಅಧ್ಯಕ್ಷರು ಮತ್ತು ಸವ೯ ಸದಸ್ಯರು

ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಸರ್ವೋದಯ ಫ್ರೆಂಡ್ಸ್ ಬೆದ್ರ

ಅಮನಬೆಟ್ಟುವಿನ ಸಾಯಿ ಮಾರ್ನಾಡ್ ಸೇವಾ ಸಂಘದಿಂದ ಚಿಕಿತ್ಸೆಗೆ ಧನ ಸಹಾಯ 
ಮೂಡುಬಿದಿರೆ : ತಾಲೂಕಿನ ಮೂಡುಮಾರ್ನಾಡ್ ಗ್ರಾಮದ  ದೈವಸ್ಥಾನ  ಪರಿಸರದ ಹೊಸಮನೆ ಪಲ್ಲಮನೆಯ ಅನಾರೋಗ್ಯ ಹೊಂದಿರುವ ಭೋಜ ಅವರ ಚಿಕಿತ್ಸೆಗೆ ಸಾಯಿ ಮಾನಾ೯ಡ್ ಸೇವಾ ಸಂಘದಿಂದ ರೂ. 10,000 ಧನ ಸಹಾಯ ನೀಡಲಾಯಿತು.
 ಭೋಜ ಎಂಬವರು ಏಪ್ರಿಲ್ ತಿಂಗಳಿನಲ್ಲಿ ಹೈ ಬಿಪಿ ಯಿಂದ ಮೂರ್ಛೆ ತಪ್ಪಿ ಬಿದ್ದಿದ್ದು ಈವರೆಗೆ ಅವರು ಕಂಕನಾಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೆ ಇದುವರೆಗೆ 3ಲಕ್ಷ ಖರ್ಚಾಗಿದೆ. ಇವರಿಗೆ ಇಬ್ಬರು ಮಕ್ಕಳಿದ್ದು ಅದರಲ್ಲಿ ಓವ೯ ವಿಶೇಷ ಚೇತನನಾಗಿದ್ದು, ಮಗಳು ಮೂಡುಬಿದಿರೆ ಅಂಗಡಿಯಲ್ಲಿ ದುಡಿಯುತ್ತಿದ್ದಾಳೆ. ಅವರ ಮನೆಯ ಆಧಾರವಾಗಿದ್ದ ಭೋಜ ಅವರು ಹಾಸಿಗೆ ಯಲ್ಲಿದ್ದು ಮನೆಯ ಹಾಗೂ ಆಸ್ಪತ್ರೆಯ ಖರ್ಚು ನಿಭಾಯಿಸಲು ಕಷ್ಟ ಸಾಧ್ಯವಾಗಿರುವುದರಿಂದ ಸೇವಾ ಸಂಘದಿಂದ 95ನೇ ಸೇವಾ ಯೋಜನೆ ಮೇ. ತಿಂಗಳ 1ನೇ ಯೋಜನೆಯ ರೂ.10000ರೂಪಾಯಿ ಯ ಚೆಕ್ಕನ್ನು ಮೇ. 24ರಂದು ಹಸ್ತಾಂತರಿಸಲಾಯಿತು.

Post a Comment

0 Comments

Advertisement