ಮೂಡುಬಿದಿರೆಯಲ್ಲಿ ಹಲಸು ಮೇಳಕ್ಕೆ ತೆರೆ
*ಎಂಜಿನಿಯರಗಳಿಗಿಂತ ಹೆಚ್ಚಿನ ಆದಾಯ ಹಲಸು ಕೃಷಿಯಿಂದ ಸಾಧ್ಯ : ಕೃಷಿಕ ಅಶೋಕ್
ಮೂಡುಬಿದಿರೆ : ಕೃಷಿ ಎಂದಿಗೂ ಲಾಭದಾಯಕ. ನಾನು ಮತ್ತು ನನ್ನ ಹೆಂಡತಿ ಉನ್ನತ ಶಿಕ್ಷಣವನ್ನು ಪಡೆದಿದ್ದರೂ ನಾವು ಹಲಸಿನ ಕೃಷಿಯಲ್ಲಿ ನಮ್ಮನ್ನು ತೊಡಗಿಸಿಕೊಂಡು ಅಮೇರಿಕಾದಲ್ಲಿ ದುಡಿಯುವ ಎಂಜಿನಿಯರ್ ಗಳ ಆದಾಯಕ್ಕಿಂತಲೂ ಹೆಚ್ಚಿನ ಆದಾಯವನ್ನು ನಾವು ಪಡೆದುಕೊಂಡು ನೆಮ್ಮದಿಯ ಜೀವನವನ್ನು ನಡೆಸುತ್ತಿದ್ದೇವೆ ಎಂದು ದೊಡ್ಡಬಳ್ಳಾಪುರದ ಹಲಸು ಕೃಷಿ ಸಾಧಕ ಅಶೋಕ್ ಕೆ. ಎಸ್. ಅಭಿಪ್ರಾಯಪಟ್ಟರು.
ಅವರು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಪವರ್ ಫ್ರೆಂಡ್ಸ್ ಬೆದ್ರ, ವಂಶಿ ಇವೆಂಟ್ಸ್, ಬೆನಕ ಇವೆಂಟ್ಸ್ ಹಾಗೂ ಜೆಸಿಐ ಮೂಡುಬಿದಿರೆ ತ್ರಿಭುವನ್ ಸಂಯುಕ್ತ ಆಶ್ರಯದಲ್ಲಿ ವಿದ್ಯಾಗಿರಿಯ ಮುಂಡ್ರುದೆಗುತ್ತು ಕೆ. ಅಮರನಾಥ ಶೆಟ್ಟಿ ಸಭಾಂಗಣದಲ್ಲಿ ಮೂರು ದಿನಗಳ ಕಾಲ ಆಯೋಜಿಸಲಾಗಿದ್ದ ಬೃಹತ್ ಹಲಸು ಮೇಳದ ಸಮಾರೋಪ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಸುದಶ೯ನ್ ಎಂ. ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಪವರ್ ಫ್ರಂಡ್ಸ್ ಮತ್ತು ವಿವಿಧ ಸಂಘಟನೆಗಳು ಒಟ್ಟಾಗಿ ಸೇರಿ ವಿಶೇಷ ರೀತಿಯಲ್ಲಿ ಹಲಸು ಮೇಳವನ್ನು ಆಯೋಜಿಸಿ ಯಶಸ್ವಿಗೊಳಿಸಿದ್ದಾರೆಂದರು.
ಉದ್ಯಮಿಗಳಾದ ಅಜೇಯ್ ಪುರುಷೋತ್ತಮ್, ರಕ್ಷಿತ್ ಕಕೇ೯ರಾ, ಕುಮಾರ್ ಪೂಜಾರಿ, ಸವೋ೯ದಯ ಫ್ರೆಂಡ್ಸ್ ನ ಅಧ್ಯಕ್ಷ ಗುರು, ಫ್ರೆಂಡ್ಸ್ ಇಲೆವೆನ್ ನ ರಘುನಾಥ ದೇವಾಡಿಗ, ಪವರ್ ಫ್ರೆಂಡ್ಸ್ ನ ಅಧ್ಯಕ್ಷ ವಿನಯ್ ಕುಮಾರ್, ಆಟೋ ಚಾಲಕ ಮಾಲಕರ ಸಂಘದ ಅಧ್ಯಕ್ಷ ದಿಲೀಪ್, ಜೇಸಿಐ ಅಧ್ಯಕ್ಷ ಸುಧಾಕರ ಶೆಟ್ಟಿ, ಲಾಡಿ ಫ್ರೆಂಡ್ಸ್ ನ ಅಧ್ಯಕ್ಷ ರಕ್ಷಿತ್ ಕಕೇ೯ರಾ, ಯುವವಾಹಿನಿಯ ಮೂಡುಬಿದಿರೆ ಅಧ್ಯಕ್ಷ ಗಿರೀಶ್, ಮೊಬೈಲ್ ಅಸೋಸಿಯೇಷನ್ ನ ಕಾಯ೯ದಶಿ೯ ಅವಿನಾಶ್, ಬೆನಕ ಇವೆಂಟ್ಸ್ ನ ಭಾಸ್ಕರ್ ಪೂಜಾರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ವಂಶಿ ಇವೆಂಟ್ಸ್ ನ ರಮಿತಾ ಸೂಯ೯ವಂಶಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಪವರ್ ಫ್ರೆಂಡ್ಸ್ ನ ಸದಸ್ಯ ಶಂಕರ್ ಕೋಟ್ಯಾನ್ ಕಾಯ೯ಕ್ರಮ ನಿರೂಪಿಸಿ ಸನ್ಮಾನ ಪತ್ರ ವಾಚಿಸಿದರು.
-------------------
ಹಲಸಿನ ಹಣ್ಣಿನ ವೈವಿಧ್ಯಮಯ ಖಾದ್ಯಗಳು, ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿರುವ ನುರಿತ ಮಾರಾಟಗಾರರು ವಿಶೇಷ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ನಡೆಸಿ ಮೇಳವನ್ನು ಯಶಸ್ವಿಗೊಳಿಸಿದ್ದಾರೆ.
--------------------
,





0 Comments