ಭಾಗವತ ಮಾಧವ ಆಚಾರ್‌ಗೆ ಸಾರ್ವಜನಿಕ ಶ್ರದ್ಧಾಂಜಲಿ

ಜಾಹೀರಾತು/Advertisment
ಜಾಹೀರಾತು/Advertisment
ಭಾಗವತ ಮಾಧವ ಆಚಾರ್‌ಗೆ ಸಾರ್ವಜನಿಕ ಶ್ರದ್ಧಾಂಜಲಿ

ಮೂಡುಬಿದಿರೆ : ಸಂಪಿಗೆ ಮಾಧವ ಕುಮಾರ್ ಆಚಾರ್ ತೆರೆಮರೆಯ ಶ್ರೇಷ್ಠ ಭಾಗವತರಾಗಿದ್ದರು. ಯಕ್ಷಗಾನದಲ್ಲಿ ಶಿಸ್ತಿಗೆ ಆದ್ಯತೆ ನೀಡುತ್ತಿದ್ದ ಅವರು ಯಕ್ಷಗಾನ ಸಾಹಿತ್ಯದ ಬಗ್ಗೆ ವಿಶೇಷ ಒಲವು ಹೊಂದಿದ್ದರು. ಕಲಾವಿದರ ಮಾತಿಗೆ ದನಿಗೂಡಿಸಿ ಅರ್ಥಗಾರಿಕೆ ಮತ್ತಷ್ಟು ಉತ್ತಮವಾಗಲು ಅವರ ಕೊಡುಗೆ ಅಪಾರವಾಗಿದೆ ಎಂದು ಯಕ್ಷಗಾನ ವಿಮರ್ಷಕ, ಅರ್ಥಧಾರಿ ಶಾಂತಾರಾಮ ಕುಡ್ವ ಹೇಳಿದರು. 
 ಮೂಡುಬಿದಿರೆ ಪರಿಸರದ ವಿವಿಧ ಯಕ್ಷಗಾನ ಸಂಘಟನೆಗಳಿಗೆ ಬೇಡಿಕೆಯ ಭಾಗವತರಾಗಿ ಇತ್ತೀಚೆಗೆ ನಿಧನರಾದ ಸಂಪಿಗೆ ಮಾಧವ ಕುಮಾರ್ ಆಚಾರ್ ಅವರಿಗೆ ಇಲ್ಲಿನ ಪೊನ್ನೆಚಾರಿ ವೆಂಕಟರಮಣ ದೇವಸ್ಥಾನದಲ್ಲಿ ಗುರುವಾರ ನಡೆದ ಸಾರ್ವಜನಿಕ ಶ್ರದ್ಧಾಂಜಲಿ ಸಭೆಯಲ್ಲಿ ನುಡಿನಮನ ಸಲ್ಲಿಸಿ ಅವರು ಮಾತನಾಡಿದರು. ಪಾವಂಜೆ ಮೇಳದ ಯಕ್ಷಗಾನ ಕಲಾವಿದ ದಿನೇಶ್ ಕಾವಳಕಟ್ಟೆ ನುಡಿನಮನ ಸಲ್ಲಿಸಿ ಮಾಧವ ಆಚಾರ್ ಕೇವಲ ಭಾಗವತರಾಗಿರದೇ ಸರ್ವಶ್ರೇಷ್ಠ ಪ್ರೇಕ್ಷಕರೂ ಆಗಿದ್ದರು. ಉತ್ತಮ ಕಲಾಪೋಷಕರಾಗಿದ್ದು ಯಕ್ಷಗಾನ ಸಂಘಟನೆಗಳಿಗೆ ಬೆನ್ನೆಲುಬಾಗಿದ್ದರು ಎಂದರು. ನಿವೃತ್ತ ಪೊಲೀಸ್ ಅಧಿಕಾರಿ ರಾಜಾರಾಮ್ ನಾಗರಕಟ್ಟೆ, ಹರಿಕಥಾ ಪ್ರವೀಣ ಚಂದ್ರಕಾAತ್ ಭಟ್, ಜಿಂದಾಲ್ ಕಂಪೆನಿಯ ಉದ್ಯೋಗಿ ಈಶ್ವರ ಗೌಡ, ಕಲಾಪೋಷಕರಾದ ಕೃಷ್ಣಮೂರ್ತಿ ಮಾಯಣ, ಉದಯಕುಮಾರ್ ಮಾಳಿಗೆಮನೆ, ನಿವೃತ್ತ ಶಿಕ್ಷಕ ಶ್ಯಾಮ್‌ಸುಂದರ್ ನುಡಿನಮನ ಸಲ್ಲಿಸಿ ಅವರ ಕಲಾಸೇವೆಯನ್ನು ಸ್ಮರಿಸಿದರು.
ಪತ್ನಿ ಸುಧಾ ಎಂ.ಕೆ., ಪುತ್ರರಾದ ಕಿರಣ್ ಕುಮಾರ್, ಪವನ್ ಕುಮಾರ್ ಉಪಸ್ಥಿತರಿದ್ದರು. ಯಕ್ಷ ಮೇನಕಾದ ಸದಾಶಿವರಾವ್ ನೆಲ್ಲಿಮಾರ್ ಕಾರ್ಯಕ್ರಮ ನಿರ್ವಹಿಸಿದರು. ನಾಗರಾಜ್ ಶರ್ಮ ವಂದಿಸಿದರು.

Post a Comment

0 Comments