ಮೂಡುಬಿದಿರೆ : ಹಲವಾರು ರಸ್ತೆ ಅಪಘಾತಗಳಾಗಿ ಜೀವ ಕಳೆದುಕೊಂಡಿರುವ ಕಾರ್ಕಳ-ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿಯ ಬನ್ನಡ್ಕ-ಬೆಳುವಾಯಿ ಮಾರ್ಗದಲ್ಲಿ ಭೂಪನೋವ೯ ಯದ್ವಾ ತದ್ವಾ ಬೈಕ್ ಓಡಿಸಿ ಸ್ಥಳೀಯರ ಕೆಂಗಣ್ಣಿಗೆ ಗುರಿಯಾಗಿದ್ದಾನೆ.
ಅಪಘಾತ ವಲಯದಲ್ಲಿ ತನ್ನೆರಡು ಕೈಗಳನ್ನು ಬಿಟ್ಟು, ಡಾನ್ಸ್ ಹಾಗೂ ವಿವಿಧ ಸನ್ನೆಗಳನ್ನು ಮಾಡುತ್ತಾ ವಾಹನ ಚಲಾಯಿಸಿ ಹುಚ್ಚಾಟ ತೋರಿಸುತ್ತಿದ್ದ ಅವನನ್ನು ಸ್ಥಳೀಯ ಯುವಕರು ಕಾರಿನಲ್ಲಿ ಬೆನ್ನತ್ತಿ ವಿಡಿಯೋ ಚಿತ್ರೀಕರಿಸಿದ್ದಾರೆ. ಬಳಿಕ ಬೈಕ್ ನಿಲ್ಲಿಸಿ ಆತನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ರಸ್ತೆಯಲ್ಲಿ ಇಂತಹ ಹುಚ್ಚಾಟಗಳು ಹೆಚ್ಚಾಗುತ್ತಿದ್ದು, ಇದು ಸವಾರನ ಅಥವಾ ಇತರ ವಾಹನ ಸವಾರರ ಜೀವಕ್ಕೆ ಹಾನಿ ತರಬಹುದು ಎಂದು ಸ್ಥಳೀಯರು ಕಳವಳ ವ್ಯಕ್ತಪಡಿಸಿದ್ದಾರೆ. ರಸ್ತೆ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.


0 Comments