ಉಚಿತ ವಾಹನ ಚಾಲನಾ ತರಬೇತಿ ಯೋಜನೆ ಆದೇಶ ಪತ್ರ ಹಸ್ತಾಂತರ

ವಿನಯ್ ಕುಮಾರ್ ಅಧ್ಯಕ್ಷರು ಮತ್ತು ಸವ೯ ಸದಸ್ಯರು

ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಸರ್ವೋದಯ ಫ್ರೆಂಡ್ಸ್ ಬೆದ್ರ

ಉಚಿತ ವಾಹನ ಚಾಲನಾ ತರಬೇತಿ ಯೋಜನೆ ಆದೇಶ ಪತ್ರ ಹಸ್ತಾಂತರ
ಮೂಡುಬಿದಿರೆ: ಲಯನ್ಸ್ ಕ್ಲಬ್ ಮೂಡುಬಿದಿರೆ ಮತ್ತು ಮಂಜುಶ್ರೀ ಡ್ರೈವಿಂಗ್ ಸ್ಕೂಲ್ ಜಂಟಿಯಾಗಿ ವರ್ಷಂಪ್ರತಿ ಆಯ್ದ ಯುವಕರಿಗೆ ಉಚಿತ ವಾಹನ ಚಾಲನಾ ತರಬೇತಿ ಯೋಜನೆಯನ್ನು ಹಮ್ಮಿಕೊಳ್ಳುತ್ತಿದ್ದು ಈ ವರ್ಷ ಈ ಯೊಜನೆಯನ್ವಯ
50 ಮಂದಿ ಯುವಕರಿಗೆ ಉಚಿತ ವಾಹನ ಚಾಲನಾ ತರಬೇತಿ ನೀಡಲು ಮುಂದಾಗಿದೆ. ಯೋಜನೆಯ ಪ್ರಥಮ ಹಂತವಾಗಿ 15 ಮಂದಿ ಯುವಕರನ್ನು ತರಬೇತಿಗೆ ಆಯ್ಕೆ ಮಾಡಲಾಗಿದ್ದು ಲಯನ್ಸ್ ಜಿಲ್ಲೆ 317ಡಿಯ ಜಿಲ್ಲಾ ರಾಜ್ಯಪಾಲ ಲ. ಕುಡ್ಪಿ ಅರವಿಂದ ಶೆಣೈಯವರು ಶುಕ್ರವಾರ ಕ್ಲಬ್‌ಗೆ ಅಧಿಕೃತ ಭೇಟಿ ನೀಡಿದ ಸಂದರ್ಭ ಆಯ್ಕೆಯಾದ ಅಭ್ಯರ್ಥಿಗಳಿಗೆ ತರಬೇತಿಯ ಆದೇಶ ಪತ್ರವನ್ನು ವಿತರಿಸಲಾಯಿತು. 

ಕ್ಲಬ್ ಅಧ್ಯಕ್ಷ ಶಿವಪ್ರಸಾದ್ ಹೆಗ್ಡೆ, ಜಿಲ್ಲಾ ಸಂಪುಟದ ಹೆಚ್ಚುವರಿ ಕಾರ್ಯದರ್ಶಿ ಚಂದ್ರಹಾಸ ರೈ, ಜಿಲ್ಲಾ ಸಂಪುಟದ ಕೋಶಾಧಿಕಾರಿ ಬಾಲಕೃಷ್ಣ ಹೆಗ್ಡೆ, ಪ್ರಾಂತೀಯ ಅಧ್ಯಕ್ಷ ಜಗದೀಶ್ಚಂದ್ರ ಡಿ.ಕೆ., ವಲಯಾಧ್ಯಕ್ಷ ಜೊಸ್ಸಿ ಮಿನೇಜಸ್, ಕ್ಲಬ್‌ನ ನಿಕಟಪೂರ್ವ ಅಧ್ಯಕ್ಷ ಬೊನವೆಂಚರ್ ಮಿನೇಜಸ್, ಕ್ಲಬ್ ಕಾರ್ಯದರ್ಶಿ ಓಸ್ವಾಲ್ಡ್ ಡಿಕೋಸ್ತ, ಖಜಾಂಚಿ ಹರೀಶ್ ತಂತ್ರಿ ಹಾಗೂ ಕ್ಲಬ್‌ನ ಸದಸ್ಯರು ಉಪಸ್ಥಿತರಿದ್ದರು. 

ಮಂಜುಶ್ರೀ ಡ್ರೈವಿಂಗ್ ಸ್ಕೂಲ್ 2000ನೇ ಇಸವಿಯಲ್ಲಿ ಈ ಯೋಜನೆಯನ್ನು ಪ್ರಾರಂಭಿಸಿದ್ದು ಇದುವರೆಗೆ 986 ಯುವಕರಿಗೆ ವಾಹನ ಚಾಲನಾ ತರಬೇತಿ ನೀಡಲಾಗಿದೆಯೆಂದು ಮಂಜುಶ್ರೀ ಡ್ರೈವಿಂಗ್ ಸ್ಕೂಲ್ ನ ಪ್ರಾಂಶುಪಾಲೆ ಶೋಭಾ ಎಸ್. ಹೆಗ್ಡೆ ತಿಳಿಸಿದರು.

Post a Comment

0 Comments

Advertisement