ಎಸ್ ಎಸ್ ಎಲ್ಸಿ ಪರೀಕ್ಷೆ : ರೋಟರಿ ಶಾಲೆಯ 68 ವಿದ್ಯಾಥಿ೯ಗಳಿಗೆ ಅತ್ಯುನ್ನತ ಶ್ರೇಣಿ

ಜಾಹೀರಾತು/Advertisment
ಜಾಹೀರಾತು/Advertisment
ಎಸ್ ಎಸ್ ಎಲ್ಸಿ ಪರೀಕ್ಷೆ : ರೋಟರಿ ಶಾಲೆಯ 68 ವಿದ್ಯಾಥಿ೯ಗಳಿಗೆ ಅತ್ಯುನ್ನತ ಶ್ರೇಣಿ
ಮೂಡುಬಿದಿರೆ : ಇಲ್ಲಿನ ರೋಟರಿ ಆಂಗ್ಲ ಮಾಧ್ಯಮ ಶಾಲೆಯು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ. 100 ಫಲಿತಾಂಶ ದಾಖಲಿಸಿದ್ದು, ಪರೀಕ್ಷೆಗೆ ಹಾಜರಾದ 135 ವಿದ್ಯಾರ್ಥಿಗಳಲ್ಲಿ ಓರ್ವರು ರಾಜ್ಯಮಟ್ಟದ ರ್‍ಯಾಂಕ್ ಪಡೆದುಕೊಂಡರೆ 68 ಅತ್ಯುನ್ನತ ಶ್ರೇಣಿ, 65 ಮಂದಿ ಪ್ರಥಮ ದರ್ಜೆ ಪಡೆದುಕೊಂಡಿದ್ದಾರೆ.

ಆರ್ತಿಕ್ಷಾ ರಾವ್ ರಾವ್ 619 ಅಂಕದೊಂದಿಗೆ ರ್‍ಯಾಂಕ್ ಪಡೆದುಕೊಂಡರೆ, ಸಮನ್ವಿ ಎಸ್ 612, ಪ್ರೇಕ್ಷಾ ಹೆಚ್. ಪೂಜಾರಿ 609, ಸಾನಿಧ್ಯ ಸಾಲಿಯಾನ್ 607, ಉಸ್ಮಾನ್ ಹುಲ್ ಅಫಾನ್ 607, ಅಭಿಷೇಕ ಆರ್ ಕೆ. 606, ಧನನ್ಯ 605, ಜೈನಾಬ ಶಾಹಾಮ 605, ಅಶಿಯತ್ ಸುಹಾ 605, ತನ್ವಿ 604, ಅನುಷಾ ಲೋಬೋ 603, ರಶ್ಮಿ ಪ್ರಭು 603, ಪ್ರಜ್ವಲ್ ರಾಮ 603, ಮೇಘಶ್ರೀ 603, ಪ್ರಜ್ವಲ್ ಹೆಗ್ಡೆ 601, ಸನಿಯಾ ಫಾತಿಮಾ 598, ಆರಲ್ ನೊರೊನ್ಹಾ 597, ಎಲ್ನೋರಾ ಹೆಲೆನ್ 597, ಫಾತಿಮಾ ಶಲೂಲಾ 596 ಅಂಕ ಪಡೆದುಕೊಂಡಿದ್ದಾರೆ.

ಉತ್ತಮ ಫಲಿತಾಂಶವನ್ನು ತರುವಲ್ಲಿ ಶ್ರಮಿಸಿದ ವಿದ್ಯಾರ್ಥಿಗಳನ್ನು, ಮುಖ್ಯೋಪಾಧ್ಯಾಯಿನಿಯವರನ್ನು ಮತ್ತು ಅಧ್ಯಾಪಕ ವೃಂದದವರನ್ನು ಶಾಲಾ ಆಡಳಿತ ಮಂಡಳಿಯ ಪರವಾಗಿ ಅಧ್ಯಕ್ಷರಾದ ನಾರಾಯಣ ಪಿ.ಎಮ್., ಕಾರ್ಯದರ್ಶಿಯವರಾದ ಅನಂತಕೃಷ್ಣ ರಾವ್ ಹಾಗೂ ಸಂಚಾಲಕರಾದ ಪ್ರವೀಣ್‌ಚಂದ್ರ ಜೈನ್ ಅವರು ಅಭಿನಂದಿಸಿರುತ್ತಾರೆ.

Post a Comment

0 Comments