3ನೇ ವಷ೯ದ ಮೂಳೂರು - ಅಡ್ಡೂರು ಜೋಡುಕೆರೆ ಕಂಬಳಕ್ಕೆ ಚಾಲನೆ

ಜಾಹೀರಾತು/Advertisment
ಜಾಹೀರಾತು/Advertisment
3ನೇ ವಷ೯ದ ಮೂಳೂರು - ಅಡ್ಡೂರು ಜೋಡುಕೆರೆ ಕಂಬಳಕ್ಕೆ ಚಾಲನೆ 
ಮೂಡುಬಿದಿರೆ : ಮೂಳೂರು - ಅಡ್ಡೂರು ಜೋಡುಕೆರೆ ಕಂಬಳ ಸಮಿತಿ ಅಧ್ಯಕ್ಷ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರ ಅಧ್ಯಕ್ಷತೆಯಲ್ಲಿ ಗುರುಪುರದ ಮಾಣಿಬೆಟ್ಟು ಗುತ್ತುವಿನಲ್ಲಿ ನಡೆಯುವ 3ನೇ ವರ್ಷದ ಮೂಳೂರು - ಅಡ್ಡೂರು ಜೋಡುಕೆರೆ ಕಂಬಳವು ಶನಿವಾರ ಆರಂಭಗೊಂಡಿತು.

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಅರ್ಚಕರಾದ ಅನಂತ ಪದ್ಮನಾಭ ಅಸ್ರಣ್ಣ ಅವರು ಕಂಬಳಕ್ಕೆ ಚಾಲನೆ ನೀಡಿ ಮಾತನಾಡಿ ಕಂಬಳದಲ್ಲಿ ಕೋಣಗಳಿಗೆ ಮಹತ್ವ ಇರುವಂತೆಯೇ ಪ್ರೇಕ್ಷಕರಿಗೂ ಇದೆ.‌ ಹಾಗಾಗಿ ಎಲ್ಲರೂ ಒಂದುಗೂಡಿ ತುಳುನಾಡಿನ ಅಸ್ಮಿತೆಯಾಗಿರುವ ಕಂಬಳವನ್ನು ಪ್ರೋತ್ಸಾಹಿಸಬೇಕೆಂದು ನುಡಿದರು.

ಇನಾಯತ್ ಅಲಿ ಅವರ ನಗುವೇ ಸಮಾಜಕ್ಕೆ ಆಸ್ತಿ. ಅವರು ಗುಣವಂತ ಎಲ್ಲಾ ಸಮಾಜಗಳನ್ನು ಪ್ರೀಯಿಯಿಂದ ನಡೆಸಿಕೊಳ್ಳುವ ಹೃದಯ ಶ್ರೀಮಂತ. ಅವರು ಕಂಬಳದ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯ ಸಂಸ್ಕೃತಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳಗಿಸುತ್ತಿದ್ದಾರೆ‌ ಎಂದು ಶುಭಹಾರೈಸಿದರು.

 ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ರೈ ಮಾಲಾಡಿ ಅವರು ಸಭಾ ಕಾಯ೯ಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಇನಾಯತ್ ಅಲಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ 3ನೇ ವರ್ಷದ ಕಂಬಳವು ಎಲ್ಲಾ ಕಂಬಳಗಳಿಗಿಂತಲೂ ವಿಭಿನ್ನವಾಗಿ ವಿಶಿಷ್ಟವಾಗಿ ನಡೆಯುತ್ತಿದೆ. ಕಂಬಳ ತುಳುವರ ಕೂಡುಕಟ್ಟುವ ಸಂಸ್ಕೃತಿ. ಇದರಲ್ಲಿ ಹಿರಿಯ ಕಿರಿಯ ಬಡವ ಸಿರಿವಂತ ಜಾತಿ ಧರ್ಮಗಳ ಬೇಧವಿಲ್ಲದೆ ಎಲ್ಲರನ್ನೂ ಒಗ್ಗೂಡಿಸಿಕೊಂಡು ಮುನ್ನಡೆಯುವುದೇ ಕಂಬಳ. ಒಂದು ಸಮಯದಲ್ಲಿ ತುಳುನಾಡಿದ ಆಟ ಕೋಲ, ಕಂಬಳ ಎಲ್ಲವೂ ನಿಂತು ಹೋಗುತ್ತಿದೆ ಎಂದು ಕೊಳ್ಳುತ್ತಿದ್ದಂತೆಯೇ ಬಳಿಕ ಇನ್ನಷ್ಟು ಹುರುಪಿನೊಂದಿಗೆ ಬದಲಾವಣೆಗಳೊಂದಿಗೆ ಮುನ್ನಡೆಯುತ್ತಿರುವುದು ಶ್ಲಾಘನೀಯ.

 ಮೂಳೂರು - ಅಡ್ಡೂರು ಜೋಡುಕೆರೆ ಕಂಬಳ ಸಮಿತಿ ಅಧ್ಯಕ್ಷ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅಧ್ಯಕ್ಷತೆಯನ್ನು ವಹಿಸಿದ್ದರು.

ಇದೇ ವೇಳೆ ಅಶಕ್ತ ಕುಟುಂಬಗಳಿಗೆ, ವಿವಾಹ, ಮನೆ ನಿಮಾ೯ಣ ಸೇರಿದಂತೆ ಸಮಾಜಮುಖಿ ಕೆಲಸಗಳಿಗಾಗಿ 25ಲಕ್ಷ ರೂ. ಮೊತ್ತದ ಸಹಾಯಧನವನ್ನು ಹಸ್ತಾಂತರಿಸಲಾಯಿತು.

ಈ ಸಂದರ್ಭ ಮೂಳೂರು ಮುಂಡಿತ್ತಾಯ ದೈವಸ್ಥಾನದ ತಂತ್ರಿಗಳಾದ ಜಿ.ಟಿ.‌ವಾಸುದೇವ ಭಟ್, ಜಿಲ್ಲಾ ಕಂಬಳ ಸಮಿತಿಯ ಕಾರ್ಯಾಧ್ಯಕ್ಷ ಗುಣಪಾಲ ಕಡಂಬ, ಮಾಣೂರು ಸುಬ್ರಾಯ ದೇವಸ್ಥಾನದ ಅಧ್ಯಕ್ಷ ಶಶಿಧರ್ ಭಟ್ ಬೊಳ್ಮಾರುಗುತ್ತು. ಗೋಳಿದಡಿ ಗುತ್ತು ಗಡಿಕಾರರಾದ ವರ್ಧಮಾನ್ ಶೆಟ್ಟಿ, ಕೊಡೆತ್ತೂರು ಗುತ್ತಿನ ಗುತ್ತಿನಾರ್ ನಿತಿನ್ ಶೆಟ್ಟಿ, ಪದ್ಮರಾಜ್ ಆರ್. ಪೂಜಾರಿ, ರವೀಶ್ ಶೆಟ್ಟಿ ನಿಟ್ಟೆಗುತ್ತು, ಗುರುಪುರ ವೆಂಕಟರಮಣ ದೇವಳದ ಆಡಳಿಯ ಮೊಕ್ತೇಸರರಾದ ಪಾಂಡುರಂಗ ಕಾಮತ್, ಅದ್ಯಪಾಡಿ ದೈವಲಂಗಲಗುಡ್ಡೆ ನೀಲಕಂಠ ಉಮಾಮಹೇಶ್ವರಿ ದೇವಸ್ಥಾನದ ಆಡಳಿಯ ಮೊಕ್ತೇಸರರಾದ ಮಂಜುನಾಥ ಭಂಡಾರಿ, ದೋಣಿಂಜೆ ಗುತ್ತು ಗಡಿಪ್ರಧಾನರಾದ ಪ್ರಮೋದ್ ಕುಮಾರ್ ರೈ, ಚಂದ್ರಹಾಸ ಪೂಜಾರಿ, ತನಿಯಪ್ ಪ‌ಪೂಜಾರಿ, ಜತ್ತಿ ಪೂಜಾರಿ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆವಮಲ್ಲಿಕಾ ಪಕ್ಕಳ, ಪುರುಷೋತ್ತಮ ಚಿತ್ರಾಪುರ, ಎಂ.ಜೆ. ಹೆಗಡೆ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಲಕ್ಷ್ಮೀಶ ಗಬಲಡ್ಕ, ಶಿವರಾಮ‌ಮಲ್ಲಿ, ಶಾಲೆಟ್ ಪಿಂಟೊ, ಕಂಬಳ ಸಮಿತಿಯ ಗೌರವಾಧ್ಯಕ್ಷ ಪದ್ಮನಾಭ ಕೋಟ್ಯಾನ್ , ಕಾರ್ಯಾಧ್ಯಕ್ಷರಾದ ಜಗದೀಶ ಶೆಟ್ಟಿ ಮಾಣಿಬೆಟ್ಟುಗುತ್ತು, ಪ್ರಧಾನಾ ಕಾರ್ಯದರ್ಶಿ ಯಶವಂತ ಕುಮಾರ್ ಶೆಟ್ಟಿ ಬೆಳ್ಳೂರುಗುತ್ತು ಮೊದಲಾದವರು ಉಪಸ್ಥಿತರಿದ್ದರು.

ಗುರುಪುರ ಕಂಬಳದ ಸಮಿತಿಯ ಸ್ಥಾಪಕಾಧ್ಯಕ್ಷ ರಾಜ್ ಕುಮಾರ್ ಶೆಟ್ಟಿ ತಿರುವೈಲುಗುತ್ತು ಸ್ವಾಗತಿಸಿದರು. ವಿಜೇತ್ ಶೆಟ್ಟಿ ಮಂಜನಾಡಿ, ಮನೋಜ್ ವಾಮಂಜೂರು ಕಾರ್ಯಕ್ರಮ ನಿರೂಪಿಸಿದರು.

Post a Comment

0 Comments