ಮೂಡುಬಿದಿರೆ : ಮುಂಡ್ಕೂರು - ಕಡಂದಲೆ ಲಯನ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯು ಈ ವರ್ಷದ ಎಸ್ ಎಸ್ ಎಲ್ ಸಿ ಯಲ್ಲಿ ಶೇಕಡ 100 ಫಲಿತಾಂಶವನ್ನು ಗಳಿಸಿರುತ್ತದೆ.
ಸಾತ್ವಿಕ್ ಶ್ರೀನಿವಾಸ ಆಚಾರ್ಯ 625 ರಲ್ಲಿ 615 ಅಂಕಗಳನ್ನು ಗಳಿಸಿ ಶಾಲೆಗೆ ಟಾಪರ್ ವಿದ್ಯಾರ್ಥಿ ಆಗಿ ಮೂಡಿ ಬಂದಿರುತ್ತಾನೆ.
ಎಂ. ಯಾಹ್ನ 625 ರಲ್ಲಿ 606 ಅಂಕಗಳನ್ನು ಗಳಿಸಿ ಸಂಸ್ಥೆಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾಳೆ.
ಒಟ್ಟು 32 ವಿದ್ಯಾರ್ಥಿಗಳಲ್ಲಿ 16 ಡಿಸ್ಟಿಂಕ್ಷನ್ ಮತ್ತು 16 ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರುತ್ತಾರೆ. ವಿದ್ಯಾರ್ಥಿಗಳ ಸಾಧನೆಗೆ ಶಾಲಾ ಆಡಳಿತ ಮಂಡಳಿಯವರು ಹರ್ಷವನ್ನು ವ್ಯಕ್ತಪಡಿಸಿರುತ್ತಾರೆ.


0 Comments