ಬಂಟರ ಸಂಘ ಮಹಿಳಾ ಘಟಕದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ಜಾಹೀರಾತು/Advertisment
ಜಾಹೀರಾತು/Advertisment
ಬಂಟರ ಸಂಘ ಮಹಿಳಾ ಘಟಕದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ಮೂಡುಬಿದಿರೆ: ಶಿಸ್ತುಬದ್ಧ ಜೀವನ ಪದ್ಧತಿ ಮತ್ತು ಸಮುದಾಯಕ್ಕೆ ವಿಶಿಷ್ಟ ಶಕ್ತಿಯನ್ನು ನಮ್ಮ ಪೂರ್ವಜರು ನಮಗೆ ನೀಡಿದ್ದು, ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಇಂದಿನ ಪೀಳಿಗೆಯದಾಗಿದೆ. ಸಾಮರಸ್ಯ ದಿಂದ ಒಟ್ಟುಗೂಡಿ ಕೆಲಸ ಮಾಡಿದಾಗ ಸಂಘಟನೆಗೆ ಬಲ ಬರುತ್ತದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ನುಡಿದರು.

ಅವರು ಹೋಟೆಲ್ ಪಂಚರತ್ನ ಇಂಟರ್‌ನ್ಯಾಷನಲ್ ಸಭಾಂಗಣ ದಲ್ಲಿ ನಡೆದ ಬಂಟರ ಸಂಘ ಮೂಡುಬಿದಿರೆ ಇದರ ಮಹಿಳಾ ಘಟಕದ ಅಧ್ಯಕ್ಷೆ ಶೋಭಾ ಎಸ್. ಹೆಗ್ಡೆ ಮತ್ತು ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಸಮುದಾಯದ ಇತಿಹಾಸವನ್ನು ಅರಿತುಕೊಳ್ಳುವುದರ ಜೊತೆಗೆ ಸಾಮೂಹಿಕ ಜವಾಬ್ದಾರಿಯನ್ನು ಮೈಗೂಡಿಸಿಕೊಳ್ಳುವುದು ಇಂದಿನ ಅವಶ್ಯಕತೆಯಾಗಿದೆ. ಬಂಟ ಸಮುದಾಯಕ್ಕೆ ಸುದೀರ್ಘ, ಭವ್ಯ ಪರಂಪರೆ ಇದೆ. ಒಬ್ಬ ವ್ಯಕ್ತಿಯಾಗಿ ನಮ್ಮ ಆಲೋಚನೆಗಳು ಹಾಗೂ ಜೀವನ ಪದ್ಧತಿಗಳು ವಿಭಿನ್ನವಾಗಿರಬಹುದು. ಆದರೆ ಒಂದು ಸಂಘಟನೆಯ ಭಾಗವಾದಾಗ ಅದರ ಕಾರ್ಯಪದ್ಧತಿ ಮತ್ತು ಜವಾಬ್ದಾರಿಯ ಗಾಂಭೀರ್ಯ ಹೆಚ್ಚುತ್ತದೆ. ಮೇಲು-ಕೀಳು ಎಂಬ ಭೇದಭಾವವಿಲ್ಲದೆ ಎಲ್ಲರನ್ನು ಪ್ರೀತಿ ಹಾಗೂ ಬಂಟ ಸಮಾಜದಲ್ಲಿ ಮಹಿಳೆಯರಿಗೆ ವಿಶೇಷ ಗೌರವ ಹಾಗೂ ಸ್ಥಾನಮಾನವಿರುವುದರಿಂದ ಹೆಚ್ಚಿನ ಹೊಣೆಗಾರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದ ಅವರು ಮಹಿಳಾ ಘಟಕದ ಅಧ್ಯಕ್ಷೆ ಶೋಭಾ ಎಸ್. ಹೆಗ್ಡೆ ಹಾಗೂ ಇತರ ಪದಾಧಿಕಾರಿಗಳ ಕಾರ್ಯವೈಖರಿ ಹೇಳಿದರು. ಪಾರದರ್ಶಕತೆ, ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ಸಮಾಜ ಸೇವೆಯ ಬದ್ಧತೆಯೊಂದಿಗೆ ಸಂಘಟನೆ ಮುಂದಿನ ಪೀಳಿಗೆಗೆ ಮಾದರಿಯಾಗಬೇಕು ಎಂದು
ಹೇಳಿದರು. 
 
ಬೆಂಗಳೂರು ಬಂಟರ ಸಂಘದ ಉಪಾಧ್ಯಕ್ಷೆ ಕಾಂತಿ ಶೆಟ್ಟಿ ಅವರು ಪದಗ್ರಹಣ ನೆರವೇರಿಸಿ ಮಾತನಾಡಿ ಅವರು ಶೋಭಾ ಹೆಗ್ಡೆ ಮತ್ತು ಅವರ ತಂಡ ಇಷ್ಟು ಜನರನ್ನು ಒಗ್ಗೂಡಿಸಿ ಸಂಘಟಿತವಾಗಿ ಆರಂಭಿಸಿರುವುದು ಪ್ರಶಂಸನೀಯ ವಾಗಿದೆ.
 ಸಮಾಜ ಸೇವೆಗೆ ಹೆಚ್ಚಿನ ಒತ್ತು ನೀಡಬೇಕು. ವಿದ್ಯಾರ್ಥಿಗಳಿಗೆ ಕೆಲಸ, ವಿದ್ಯಾರ್ಥಿವೇತನ, ಸಂಕಷ್ಟ ದಲ್ಲಿರುವವರಿಗೆ ಸಹಾಯ, ವಿಧವೆಯರು ಹಾಗೂ ಒಂಟಿ ಪೋಷಕರಿಗೆ ನೆರವು ನೀಡುವಂತಹ ಕಾರ್ಯಗಳನ್ನು ಕೈಗೊಳ್ಳಬೇಕು. ಕೇಂದ್ರ ಸರಕಾರದ ಮುದ್ರಾ ಯೋಜನೆ. ಆಶ್ರಯ ಯೋಜನೆಗಳಂತಹ ಸೌಲಭ್ಯಗಳನ್ನು ಸಮಾಜದ ಕಟ್ಟಕಡೆಯವರಿಗೆ ತಲುಪಿಸುವ ಕಾರ್ಯವೂ ನಡೆಯಬೇಕು ಎಂದು ಸಲಹೆ ನೀಡಿದರು.

ಬಂಟರ ಸಂಘ ಮೂಡುಬಿದಿರೆ ಅಧ್ಯಕ್ಷ ತಿಮ್ಮಯ್ಯ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಮಹಿಳಾ ಘಟಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶೋಭಾ ಎಸ್. ಹೆಗ್ಡೆ, ಕಾರ್ಯದರ್ಶಿಯಾಗಿ ಸಂಗೀತಾ ಶೆಟ್ಟಿ, ಕೋಶಾಧಿಕಾರಿ ಯಾಗಿ ಗೀತಾ ಪಿ. ಶೆಟ್ಟಿ ಹಾಗೂ ಇತರ ಪದಾಧಿಕಾರಿಗಳು ತಮ್ಮ ಜವಾಬ್ದಾರಿ ಸ್ವೀಕರಿಸಿದರು.

ಬಂಟರ ಮಾತೃಸಂಘದ ಪ್ರತಿನಿಧಿ ವಸಂತ್ ಶೆಟ್ಟಿ, ಮಹಿಳಾ ಘಟಕದ ಗೌರವಾಧ್ಯಕ್ಷೆ ಜಯಶ್ರೀ ಅಮರನಾಥ ಶೆಟ್ಟಿ ಗೌರವ ಸಲಹೆಗಾರ್ತಿ ಕಾಂತಿಲತಾ ಟಿ. ಶೆಟ್ಟಿ, ದ. ಕ. ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ನಿದೇ೯ಶಕ ಕೆ. ಪಿ. ಸುಚರಿತ ಶೆಟ್ಟಿ, ಯುವ ಬಂಟರ ಸಂಘದ ಅಧ್ಯಕ್ಷ ಜಯಕುಮಾರ್ ಶೆಟ್ಟಿ, ಬಂಟರ ಸಂಘದ ಕೋಶಾಧಿಕಾರಿ ಪುರುಷೋತ್ತಮ ಶೆಟ್ಟಿ ಉಪ ಉಪಸ್ಥಿತರಿದ್ದರು

ರಾಷ್ಟ್ರಮಟ್ಟದ ಬಂಟರ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಮೂಡುಬಿದಿರೆ ಬಂಟರ ಸಂಘ ಪ್ರಥಮ ಸ್ಥಾನ ಪಡೆದಿದ್ದು, ನಿರ್ದೇಶನ ಮತ್ತು ಮಾರ್ಗದರ್ಶನ ನೀಡಿದ ಆನೀಶ್ ಪೂಜಾರಿ ಹಾಗೂ ಸ್ಥಿತೇಶ್ ಬಾರ್ಯ. ನಾಟಿ ವೈದ್ಯೆ. ಘಟಕದ ಹಿರಿಯ ಸದಸ್ಯೆ ನೀರಜಾಕ್ಷಿ ಎಸ್. ಶೆಟ್ಟಿ ಕಡಂದಲೆ. ಕ್ರೀಡಾ ಸಾಧಕಿ ವಿಸ್ಮಿತಾ ವಿ. ಶೆಟ್ಟಿ ಪಡುಮಾರ್ನಾಡು ಅವರನ್ನು ಸನ್ಮಾನಿಸಲಾಯಿತು. ಆನಾರೋಗ್ಯ ದಿಂದ ಬಳಲುತ್ತಿರುವ ಅಲಂಗಾರಿನ ಶಾರದಾ ಶೆಟ್ಟಿ ಅವರಿಗೆ ಘಟಕದಿಂದ 15 ಸಾವಿರ ರೂ. ಧನ ಸಹಾಂತು ನೀಡಲಾಯಿತು.

ಘಟಕದ ಉಪಾಧ್ಯಕ್ಷೆ ಪ್ರಫುಲ್ಲ ಶೆಟ್ಟಿ ಸ್ವಾಗತಿಸಿದರು. ರೋಹಿಣಿ ಶೆಟ್ಟಿ ಪದಗ್ರಹಣಾಧಿಕಾರಿಯನ್ನು ಹೆಗ್ಡೆ ಸುರೇಖಾ ಶೆಟ್ಟಿ, ನಿಶಾ ಶೆಟ್ಟಿ ಪರಿಚಯಿಸಿದರು. ಅಮೃತಾ ಪಿ. ಹಾಗೂ ವೀಣಾ ಶೆಟ್ಟಿ ಸನ್ಮಾನ ಪತ್ರ ವಾಚಿಸಿದರು. ರಂಜಿತಾ ಶೆಟ್ಟಿ, ಮಂಜೂಷಾ ಶೆಟ್ಟಿ ಮತ್ತು ಶಿವಪ್ರಸಾದ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ಸಂಗೀತಾ ಶೆಟ್ಟಿ ವಂದಿಸಿದರು.

Post a Comment

0 Comments