ಕಳೆದ ಮೂರು ದಿನಗಳ ಹಿಂದೆ ಮೂಡುಬಿದಿರೆ ತಾಲೂಕಿನ ಶಿರ್ತಾಡಿ ಅರ್ಜುನಾಪುರ ದೇವಸ್ಥಾನದ ಸಮೀಪದ ಮನೆಯಿಂದ ನಾಪತ್ತೆಯಾಗಿದ್ದ ಸತೀಶ್ ಆಚಾರ್ಯ (43) ಅವರು ಸೋಮವಾರ ಸಂಜೆ ಹೊಸ್ಮಾರಿನಲ್ಲಿ ಪತ್ತೆಯಾಗಿದ್ದಾರೆ.
ಸತೀಶ್ ಅವರು ನಾಪತ್ತೆಯಾಗಿರುವ ಬಗ್ಗೆ ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದೀಗ ಸಾಯಂಕಾಲ ಅವರನ್ನು ಹೊಸ್ಮಾರು ಬಳಿ ಪತ್ತೆ ಹಚ್ಚಲಾಗಿದ್ದು, ಬಸ್ಸಿನಲ್ಲಿ ಮೂಡುಬಿದಿರೆ ಕಡೆಗೆ ಹೋಗುತ್ತಿದ್ದಾಗ ಶಿರ್ತಾಡಿಯಲ್ಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.


0 Comments