ಚಿನ್ನದ ಕೆಲಸಗಾರ ಹೃದಯಾಘಾತದಿಂದ ಸಾವು

ಚಿನ್ನದ ಕೆಲಸಗಾರ ಹೃದಯಾಘಾತದಿಂದ ಸಾವು
ಮೂಡುಬಿದಿರೆ: ಬೆಳ್ತಂಗಡಿ ತಾಲೂಕಿನ ಅಡಿಂಜೆ ನಿವಾಸಿ ಪ್ರಶಾಂತ್ ಆಚಾರ್ಯ (43) ಸೋಮವಾರ ಮೂಡುಬಿದಿರೆಯಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. 
ಅವರು ಕಳೆದ 22 ವರ್ಷಗಳಿಂದ ಮೂಡುಬಿದಿರೆಯ ಎಂ.ಕೆ. ಜ್ಯುವೆಲ್ಲರಿಯಲ್ಲಿ ಚಿನ್ನದ ಕೆಲಸಗಾರರಾಗಿ ಸೇವೆ ಸಲ್ಲಿಸುತ್ತಿದ್ದರು. ಸೋಮವಾರ ಎಂದಿನಂತೆ ಕೆಲಸಕ್ಕೆ ಆಗಮಿಸಿದ್ದ ವೇಳೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದರು.ಬಳಿಕ ತಾವು ಕೆಲಸ ಮಾಡುತ್ತಿದ್ದ ವರ್ಕ್‌ಶಾಪ್ ಸಮೀಪದಲ್ಲಿರುವ ಮತ್ತೊಂದು ಚಿನ್ನದ ಅಂಗಡಿಗೆ ತೆರಳಿದ್ದಾಗ ಅಲ್ಲಿ ಎದೆನೋವು ಕಾಣಿಸಿಕೊಂಡಿದ್ಸು, ಕುಸಿದು ಬಿದ್ದ ಅವರು 
 ಮೃತಪಟ್ಟಿದ್ದಾರೆ 
ಮೃತರು ತಾಯಿ ಹಾಗೂ ಪತ್ನಿಯನ್ನು ಅಗಲಿದ್ದಾರೆ. ಇವರು ಚಿನ್ನದ ಕೆಲಸಗಾರರ ಹಿತರಕ್ಷಣಾ ವೇದಿಕೆಯ ಸಕ್ರಿಯ ಸದಸ್ಯರಾಗಿದ್ದರು.

Post a Comment

0 Comments

Advertisement