ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ತಾಲೂಕಿನ ಹೋಲಿ ರೋಸರಿ ಪ್ರೌಢಶಾಲೆಯ ಕನ್ನಡ ಅಧ್ಯಾಪಕ ಡಾ.ರಾಮಕೃಷ್ಣ ಶಿರೂರು ಅವರನ್ನು ಮಹಾಕವಿ ಹರಿಹರ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ರಾಣಿಬೆನ್ನೂರಿನ ಜನಪರವಾಣಿ ಸಾಹಿತ್ಯ ಸೌರಭ ಬಳಗದ ಸಂಸ್ಥಾಪಕರಾದ ಶ್ರೀ ಬಸವರಾಜ ಎಸ್. ಬಾಗೇವಾಡಿ ಮಠ ಅವರು ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.
ಹಾವೇರಿ ಜಿಲ್ಲೆಯ ರಾಣಿಬೆನ್ನೂರಿನಲ್ಲಿ ನಡೆಯುವ ಜನಪರವಾಣಿ ಸಾಹಿತ್ಯ ಸೌರಭದ ಸಾಹಿತ್ಯ ಸಂಭ್ರಮ-2026 ಸಮಾರಂಭದಲ್ಲಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು ಎಂದು ಅವರು ತಿಳಿಸಿರುತ್ತಾರೆ.


0 Comments