ಮೂಡುಬಿದಿರೆ: ಇಲ್ಲಿನ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಯಿತು.
ಈ ವರ್ಷದ ದಿನಾಚರಣೆಯನ್ನು "ಆಶಾ ಕಿ ಕಿರಣ್" ಎಂಬ ಶೀರ್ಷಿಕೆಯಡಿ ಆಚರಿಸಲಾಗಿದ್ದು, ಸಮಾಜದ ಮುಂಚೂಣಿಯಲ್ಲಿರುವ ಆರೋಗ್ಯ ಹೋರಾಟಗಾರರಾದ ಆಶಾ ಕಾರ್ಯಕರ್ತೆಯರನ್ನು ವಿಶೇಷವಾಗಿ ಅಭಿನಂದಿಸಿ ಸನ್ಮಾನಿಸಲಾಯಿತು.
ವೈದ್ಯರಿಗೆ ಸನ್ಮಾನ: ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಹಿರಿಯ ನೇತ್ರ ತಜ್ಞೆ ಡಾ! ಮಾಲಿನಿ ಬಂಗೇರ ಮತ್ತು ಡಾ.ಸ್ಮೃತಿ ಅವರಿಗೆ ವಿಶೇಷವಾಗಿ ಅಭಿನಂದಿಸಿ ಸನ್ಮಾನಿಸಲಾಯಿತು.
ಕಾರ್ಕಳ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಕಣ್ಣಿನ ವೈದ್ಯರಾದ ಡಾ. ಮಾಲಿನಿ ಬಂಗೇರ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಮೂಡುಬಿದಿರೆಯ ಮಾವೇದಾಸ್ ಫುಡ್ಸ್ ಅಂಡ್ ಸೀರಿಯಲ್ಸ್ ಪ್ರೈವೇಟ್ ಲಿಮಿಟೆಡ್‌ನ ಸಂಸ್ಥಾಪಕ ನಿರ್ದೇಶಕಿ ಅನುಷಾ ಪ್ರಜ್ವಲ್ ಅವರು ಅತಿಥಿಗಳಾಗಿ ಆಗಮಿಸಿದ್ದರು.
ಪ್ರಸಾದ್ ನೇತ್ರಾಲಯ ಸಮೂಹ ಸಂಸ್ಥೆಗಳ ವೈದ್ಯಕೀಯ ನಿರ್ದೇಶಕ ಡಾ. ಕೃಷ್ಣ ಪ್ರಸಾದ್ ಕುಡ್ಲು ಅಧ್ಯಕ್ಷತೆ ವಹಿಸಿದ್ದರು. ವ್ಯವಸ್ಥಾಪಕ ನಿರ್ದೇಶಕಿ ರಶ್ಮಿ ಕೃಷ್ಣ ಪ್ರಸಾದ್ ಉಪಸ್ಥಿತರಿದ್ದರು.
ಭಿತ್ತಿಪತ್ರ ಸ್ಪರ್ಧೆ ಮತ್ತು ಬಹುಮಾನ ವಿತರಣೆ:
ಮಹಿಳಾ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಗಾಗಿ "ಮಹಿಳೆಯರ ಆರೋಗ್ಯ" ಎಂಬ ವಿಷಯದ ಮೇಲೆ ಭಿತ್ತಿಪತ್ರ ರಚನಾ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಇದರಲ್ಲಿ ಸುಮಾರು 13 ಕಾಲೇಜುಗಳಿಂದ 50 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.ಸ್ಪರ್ಧೆಯಲ್ಲಿ ಬಹುಮಾನಗಳನ್ನು ವಿತರಿಸಲಾಯಿತು.
ನಿರ್ದೇಶಕರಾದ ಡಾ. ವಿಕ್ರಮ್ ಜೈನ್ ಮತ್ತು ಡಾ. ಹರೀಶ್ ಶೆಟ್ಟಿ ಉಪಸ್ಥಿತರಿದ್ದರು, ಹಿರಿಯ ನೇತ್ರತಜ್ಞ ಡಾ.ಸಿಬಿನ ಗಿರೀಶ್, ಆಡಳಿತಾಧಿಕಾರಿ ಮಾಧವ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ದೀಕ್ಷಾ ವಂದಿಸಿದರು.l


0 Comments