ದರೆಗುಡ್ಡೆ : ಗ್ರಾಮಾಭಿವೃದ್ಧಿ ಯೋಜನೆಯಿಂದ ವಾತ್ಸಲ್ಯ ಮನೆ ಹಸ್ತಾಂತರ

ಜಾಹೀರಾತು/Advertisment
ಜಾಹೀರಾತು/Advertisment

 ದರೆಗುಡ್ಡೆ : ಗ್ರಾಮಾಭಿವೃದ್ಧಿ ಯೋಜನೆಯಿಂದ ವಾತ್ಸಲ್ಯ ಮನೆ ಹಸ್ತಾಂತರ 


ಮೂಡುಬಿದಿರೆ : ಶ್ರೀ ಕ್ಷೇತ್ರ ಧಮ೯ಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ವಾತ್ಸಲ್ಯ ಕಾಯ೯ಕ್ರಮದಡಿಯಲ್ಲಿ ನಿಮಾ೯ಣಗೊಂಡಿರುವ ವಾತ್ಸಲ್ಯ ಮನೆಯನ್ನು ಮೂಡುಬಿದಿರೆ ತಾಲೂಕಿನ ದರೆಗುಡ್ಡೆ ಗ್ರಾಮದ ಗುರುಬೆಟ್ಟು ಮನೆಯ ಚಂದ್ರಾವತಿ ಅವರಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಬುಧವಾರ ಹಸ್ತಾಂತರಿಸಿದರು. 


 ನಂತರ ಮಾತನಾಡಿದ ಆಳ್ವರು ಈ ದೇಶದಲ್ಲಿ ಜೀವನ ಮಾಡುವ ಅತೀ ದೊಡ್ಡ ಐಶ್ವಯ೯ವಂತರಿದ್ದಾರೆ ಅದೇ ರೀತಿ ಕಡು ಬಡವರು ಕೂಡಾ ಇದ್ದಾರೆ. ಅಕ್ಷರಸ್ಥರು ಇದ್ದಾರೆ ಅನಕ್ಷರಸ್ಥರೂ ಇದ್ದು ಬಹಳಷ್ಟು ಅಂತರ ಸ್ವಾತಂತ್ರ್ಯ ಪೂವ೯ದಿಂದಲೂ ಇದ್ದು ಇದನ್ನು ಕಡಿಮೆಗೊಳಿಸಿದವರು  ಧಮ೯ಸ್ಥಳದ ಹೆಗ್ಗಡೆಯವರು. ಹೇಮಾವತಿ ಹೆಗ್ಗಡೆ ಅವರು ಕೊರೋನಾ ಸಂದಭ೯ದಲ್ಲಿ ವಾತ್ಸಲ್ಯ ಕಾಯ೯ಕ್ರಮವನ್ನು ಆರಂಭಿಸಿ ವಾಸಿಸಲು ಮನೆಯೇ ಇಲ್ಲದ ನಿಗ೯ತಿಕ ಕುಟುಂಬಗಳು ದಿನನಿತ್ಯದ ಆಹಾರ ಸೇವನೆಗೆ ಸಮಸ್ಯೆ ಇರುವ ಕುಟುಂಬಗಳು ದಿನನಿತ್ಯದ ಆಹಾರ ತಯಾರಿ ಮಾಡಲು ಪಾತ್ರೆ, ಬಟ್ಟೆ ಬರೆಯ ಸಮಸ್ಯೆ, ಶೌಚಾಲಯ, ಸ್ನಾನಗೃಹ ಸಮಸ್ಯೆಯಿರುವ ಕುಟುಂಬಗಳು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಮನೆ ಇಲ್ಲದ ನಿಗ೯ತಿಕ ಕುಟುಂಬಗಳಿಗೆ ಮನೆ ರಚನೆ, ವಾತ್ಸಲ್ಯ ಕಿಟ್ ವಿತರಣೆ, ವಾತ್ಸಲ್ಯ ಮಿಕ್ಸ್ ವಿತರಣೆ, ಶೌಚಾಲಯ ಸ್ನಾನಗೃಹ ರಿಪೇರಿಯನ್ನು ಮಾಡುವ ಕಾಯ೯ಕ್ರಮವನ್ನು ಅನುಷ್ಠಾನಕ್ಕೆ ತರಲಾಗಿದ್ದು ಇದರ ಪ್ರಯೋಜನವನ್ನು ಜನರು ಪಡೆದುಕೊಳ್ಳುತ್ತಿದ್ದಾರೆ ಎಂದ ಅವರು ರೂ. ಹತ್ತು ಸಾವಿರವನ್ನು ಚಂದ್ರಾವತಿ ಅವರ ಕುಟುಂಬಕ್ಕೆ ನೀಡಿದರು.

 

ಮೂಡುಬಿದಿರೆ ಚೌಟರ ಅರಮನೆಯ ಕುಲದೀಪ್ ಎಂ., ದರೆಗುಡ್ಡೆ ಗ್ರಾ. ಪಂ. ನ ಮಾಜಿ ಅಧ್ಯಕ್ಷ ಅಶೋಕ್ ಶೆಟ್ಟಿ ಬೇಲೊಟ್ಟು, ಮಾಜಿ ಸದಸ್ಯ ಪ್ರಸಾದ್, ಜನಜಾಗೃತಿ ವೇದಿಕೆಯ ತಾಲೂಕು ಅಧ್ಯಕ್ಷ ಸುಭಾಶ್ಚಂದ್ರ ಚೌಟ, ವಲಯ ಸದಸ್ಯ ಜಗತ್ಪಾಲ ಹೆಗ್ಡೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಜಯಾನಂದ ಕೋಟ್ಯಾನ್, ದಿಲೀಪ್ ಮೇಲ್ವಿಚಾರಕಿ  ಯಶೋದಾ, ವಾಲ್ಪಾಡಿ ಒಕ್ಕೂಟದ ಅಧ್ಯಕ್ಷೆ  ವಿದ್ಯಾ, ಬೆಳುವಾಯಿ ವಲಯದ ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು. 

 ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಧನಂಜಯ ಅವರು ಸ್ವಾಗತಿಸಿ,  ಪ್ರಾಸ್ತಾವಿಕವಾಗಿ ಮಾತನಾಡಿ  ತಾಲೂಕಿನ 117 ಕುಟುಂಬಗಳಿಗೆ ಮಾಶಾಸನ ನೀಡಲಾಗುತ್ತಿದೆ. 88 ಕುಟುಂಬಗಳಿಗೆ  ವಾತ್ಸಲ್ಯ ಕಿಟ್ ಗಳನ್ನು ನೀಡಲಾಗಿದೆ. 12 ಕುಟುಂಬಗಳಿಗೆ ವಾತ್ಸಲ್ಯ ಮಿಕ್ಸ್, 6 ಮಂದಿಗೆ ವಾತ್ಸಲ್ಯ ವಿದ್ಯಾನಿಧಿ, 3 ವಾತ್ಸಲ್ಯ ಹಳೆ ಮನೆ ರಿಪೇರಿ, ಒಂದು ಸೋಲಾರ್, ನಳ್ಳಿ ನೀರಿನ ಅಳವಡಿಕೆ,  ಹಾಗೂ ಈಗಾಗಲೇ 6 ವಾತ್ಸಲ್ಯ ಮನೆಗಳನ್ನು ರಚಿಸಲಾಗಿದೆ ಎಂದರು.


ಜ್ಞಾನ ವಿಕಾಸ ಸಮನ್ವಯಾಧಿಕಾರಿ ವಿದ್ಯಾ ವಂದಿಸಿದರು.

Post a Comment

0 Comments