ಮೂಡುಬಿದಿರೆ ಎಕ್ಸಲೆಂಟ್ ಸಿಬಿಎಸ್‌ಇ ಶಾಲೆಯಲ್ಲಿ ಪುಟಾಣಿಗಳ ಗ್ರಾಜುಯೇಷನ್ ದಿನ

ಜಾಹೀರಾತು/Advertisment
ಜಾಹೀರಾತು/Advertisment
ಮೂಡುಬಿದಿರೆ ಎಕ್ಸಲೆಂಟ್ ಸಿಬಿಎಸ್‌ಇ ಶಾಲೆಯಲ್ಲಿ ಪುಟಾಣಿಗಳ ಗ್ರಾಜುಯೇಷನ್ ದಿನ
ಮೂಡುಬಿದಿರೆ: ಇಲ್ಲಿನ ಕಲ್ಲಬೆಟ್ಟುವಿನ ಎಕ್ಸಲೆಂಟ್ ಸಿಬಿಎಸ್‌ಇ ಶಾಲೆಯಲ್ಲಿ 2025-26ನೇ ಸಾಲಿನ ಕಿಂಡರ್‌ಗಾರ್ಟನ್ ವಿದ್ಯಾರ್ಥಿಗಳ ಗ್ರಾಜುಯೇಷನ್ ದಿನವನ್ನು ಶಾಲಾ ಸಭಾಂಗಣದಲ್ಲಿ ಆಚರಿಸಲಾಯಿತು.
ಸೋಲಿನಲ್ಲಿಯೂ ಮಗುವಿಗೆ ಪೋಷಕರ ಪ್ರೋತ್ಸಾಹ ಅಗತ್ಯ:
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಉಜಿರೆಯ ಡೆಂಟಲ್ ಸರ್ಜನ್ ಹಾಗೂ ಬೆಳ್ತಂಗಡಿಯ ಗಣೇಶ್ ಮೆಡಿಕಲ್ ಮತ್ತು ಟ್ರಾಮಾ ಕೇರ್ ಸೆಂಟರ್‌ನ ಸಿಇಒ ಡಾ. ದೀಪಾಲಿ ಡೋಂಗ್ರೆ ಮಾತನಾಡಿ, "ಮಗುವಿನ ಬೆಳವಣಿಗೆಗೆ ತಂದೆ-ತಾಯಿಯರಿಬ್ಬರೂ ಜವಾಬ್ದಾರರಾಗಿರುತ್ತಾರೆ. ಪೋಷಕತ್ವ ಎನ್ನುವುದು ಜೀವನದುದ್ದಕ್ಕೂ ಸಾಗುವ ಪಯಣವಾಗಿದ್ದು, ಮಗುವಿನ ಗೆಲುವಿನಷ್ಟೇ ಅಲ್ಲದೆ ಸೋಲಿನಲ್ಲಿಯೂ ಪೋಷಕರ ಪ್ರೋತ್ಸಾಹದ ನುಡಿಗಳು ಅತ್ಯಗತ್ಯ," ಎಂದು ಅಭಿಪ್ರಾಯಪಟ್ಟರು.

ಮಕ್ಕಳಲ್ಲಿ ಓದುವ ಕೌಶಲ್ಯ ವೃದ್ಧಿಸಿ:
ಎಕ್ಸಲೆಂಟ್ ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಮಾತನಾಡಿ, ಪ್ರತಿ ಮಗು ತನ್ನದೇ ಆದ ಸಾಮರ್ಥ್ಯ, ಶಕ್ತಿ ಮತ್ತು ವೈಶಿಷ್ಟ್ಯವನ್ನು ಹೊಂದಿದೆ. ಹೆತ್ತವರು ತಮ್ಮ ಜೀವನದ ಅನುಭವಗಳನ್ನು ಮಕ್ಕಳಿಗೆ ತಿಳಿಸಿ, ಅವರ ಜೀವನ ರೂಪಿಸುವಲ್ಲಿ ಸರಿಯಾದ ಮಾರ್ಗದರ್ಶನ ನೀಡಬೇಕು. ಮಕ್ಕಳಲ್ಲಿ ಓದುವ ಕೌಶಲ್ಯವನ್ನು ವೃದ್ಧಿಸುವ ಮೂಲಕ ಅವರ ಭವಿಷ್ಯವನ್ನು ಉತ್ತಮ ದಾರಿಗೆ ನಡೆಸುವುದು ಪೋಷಕರ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಮುಖ್ಯ ಅತಿಥಿ ಹಾಗೂ ಸಂಸ್ಥೆಯ ಕಾರ್ಯದರ್ಶಿಯವರು ಕೆಜಿ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರ ನೀಡಿ ಅಭಿನಂದಿಸಿದರು. ಎಲ್ ಕೆ ಜಿ ಮತ್ತು ಯುಕೆಜಿ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಪುಟಾಣಿ ಮಕ್ಕಳಿಗಾಗಿ ಸಂಸ್ಥೆಯ ವತಿಯಿಂದ ಕುದುರೆ ಸವಾರಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಶೈಕ್ಷಣಿಕ ನಿರ್ದೇಶಕ ಪುಷ್ಪರಾಜ್, ಶಾಲಾ ಪ್ರಾಂಶುಪಾಲ ಶ್ರೀಪ್ರಸಾದ್ ಮತ್ತು ಸಿಬಿಎಸ್‌ಇ ಸಂಯೋಜಕಿ ವಿಮಲ ಶೆಟ್ಟಿ ಉಪಸ್ಥಿತರಿದ್ದರು. ಪೋಷಕರ ಆಗಮನ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿತು.
ಎಲ್ ಕೆ ಜಿ ವಿದ್ಯಾರ್ಥಿನಿ ಅಮೂಲ್ಯ ಸ್ವಾಗತಿಸಿ, ರಿಷಿಕಾ ಆರ್. ಪೂಜಾರಿ ವಂದಿಸಿದರು. ವಿದ್ಯಾರ್ಥಿನಿಯರಾದ ದಿಯಾ ದೀಕ್ಷಿತ್ ಮತ್ತು ನಿಯತಿ ಕಾರ್ಯಕ್ರಮ ನಿರೂಪಿಸಿದರು.

Post a Comment

0 Comments