ಮೂಡುಬಿದಿರೆ ಸಾಹಿತ್ಯ ಸಮ್ಮೇಳನ ಸಮಾರೋಪ*ಸಾಧಕರಿಗೆ ಸನ್ಮಾನ, ಪುರಸ್ಕಾರ, ಗೌರವ

ಜಾಹೀರಾತು/Advertisment
ಜಾಹೀರಾತು/Advertisment
ಮೂಡುಬಿದಿರೆ ಸಾಹಿತ್ಯ ಸಮ್ಮೇಳನ ಸಮಾರೋಪ
*ಸಾಧಕರಿಗೆ ಸನ್ಮಾನ, ಪುರಸ್ಕಾರ, ಗೌರವ
ಮೂಡುಬಿದಿರೆ : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ ಮೂಡುಬಿದಿರೆ ತಾಲೂಕು ಘಟಕದ ವತಿಯಂದ ಪಾಲಡ್ಕ ಬ್ರಹ್ಮಶ್ರೀ ಗುರುನಾರಾಯಣ ಸೇವಾ ಸಂಘದ ಸಭಾಭವನದಲ್ಲಿ ನಡೆದ ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಶಾಲು ಫಲವಸ್ತು ಸನ್ಮಾನಪತ್ರದೊಂದಿಗೆ ಸನ್ಮಾನಿಸಿ ಗೌರವಿಸಲಾಯಿತು. 
ಸುದರ್ಶನ ಶೆಟ್ಟಿ ಕಡಂದಲೆ(ಕನ್ನಡಸೇವೆ), ಪ್ರಸನ್ನ ಹೆಗ್ಡೆ (ಪತ್ರಿಕೋದ್ಯಮ), ದಾಮೋದರ ಸಫಲಿಗ (ಯಕ್ಷಗಾನ), ವೆಂಕಟೇಶ ಬಂಗೇರ, (ಕಲೆ), ಡಾ ಕಿರಣ್ ಭಟ್ ಕಡಂದಲೆ (ವೈದ್ಯಕೀಯ), ಎಡ್ವರ್ಡ್ ರೆಬೆಲ್ಲೊ ತಾಕೋಡೆ (ಕೃಷಿ)ಯವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು ಹಾಗೂ ಎಸ್. ಎಸ್. ಎಲ್. ಸಿ. ಯಲ್ಲಿ ಮೂಡುಬಿದಿರೆ ತಾಲೂಕಿಗೆ ಗರಿಷ್ಟ ಅಂಕಗಳನ್ನು ಪಡೆದಿರುವ 12 ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. 
ಸಮ್ಮೇಳನಾಧ್ಯಕ್ಷತೆಯನ್ನು ವಹಿಸಿದ್ದ ಅಬ್ದುಲ್ ಹಮೀದ್ ಪಕ್ಕಲಡ್ಕ ಮಾತನಾಡಿ ಸಾಹಿತ್ಯವು ಸಮಾಜದ ಕನ್ನಡಿ. ಅನುಭವ, ಸದ್ವೀಚಾರಗಳು ಮತ್ತು ದಪ೯ಣಗಳು ಕೃತಿಯಾಗಿ ಮೂಡಿ ಬಂದಾಗ ಕನ್ನಡ ಸಾಹಿತ್ಯ ಶ್ರೀಮಂತಗೊಳ್ಳುತ್ತದೆ. 
ಈ ಸಮ್ಮೇಳನವು ಮುಂದಿನ ನನ್ನ ಬರಹವು ಇನ್ನಷ್ಟು ಸ್ಪೂತಿ೯ದಾಯಕವಾಗಿ ಹೊರ ಬರಲು ಸಹಕಾರಿಯಾಗಿದೆ ಮತ್ತು ಬದುಕಲ್ಲಿ ಬೆಲೆ ಕಟ್ಟಲಾಗದಂತ ನೆನಪಾಗಿ ಉಳಿಯುತ್ತದೆ ಎಂದರು. 

ಸಮ್ಮೇಳನವು ಅಚ್ಚುಕಟ್ಟಾಗಿ ಮೂಡಿಬರಲು ಕಾರಣೀಕತ೯ರಾಗಿರುವ ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ ಕೆ ಪಿ ಸುಚರಿತ ಶೆಟ್ಟಿ ಅವರನ್ನು ತಾಲೂಕು ಸಮಿತಿಯ ವತಿಯಿಂದ ಗೌರವಿಸಲಾಯಿತು.

ಜಿ ಸಚಿವ ಕೆ. ಅಭಯಚಂದ್ರ, ದ.ಕ ಜಿಲ್ಲಾ ಕಸಾಪ ಅಧ್ಯಕ್ಷ ಡಾ ಎಂ ಪಿ ಶ್ರೀನಾಥ, ಮಾಜಿ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಪ್ರಗತಿ ಪರ ಕೃಷಿಕ ರಾಜವರ್ಮ ಬೈಲಂಗಡಿ, ವೈಬ್ರಂಟ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ವೆಂಕಟೇಶ್ ನಾಯಕ್, ಉದ್ಯಮಿ ಜಗಜ್ಜೀವನ್ ಶೆಟ್ಟಿ, ನಿವೃತ ದೈಹಿಕ ಶಿಕ್ಷಣ ಶಿಕ್ಷಕ ಸದಾಶಿವ ವೇದಿಕೆಯಲ್ಲಿದ್ದರು. 
ಕಸಾಪ ಕೋಶಾಧಿಕಾರಿ ಅಂಡಾರು ಗುಣಪಾಲ ಹೆಗ್ಡೆ ಸ್ವಾಗತಿಸಿದರು. ಹೋಬಳಿ ಘಟಕದ ಅಧ್ಯಕ್ಷ ರಾಮಕೃಷ್ಣ ಶಿರೂರು ಕಾಯ೯ಕ್ರಮ ನಿರೂಪಿಸಿದರು. ಕಾರ್ಯದರ್ಶಿ ಸದಾನಂದ ನಾರಾವಿ ವಂದಿಸಿದರು.

Post a Comment

0 Comments