ಕಲ್ಲಬೆಟ್ಟು ಶಾಲೆಯಲ್ಲಿ ಭಾಷಾ ಉತ್ಪತ್ತಿ, ಬಳಕೆ, ವಿವಿಧತೆ ಕುರಿತು ಉಪನ್ಯಾಸ

ವಿನಯ್ ಕುಮಾರ್ ಅಧ್ಯಕ್ಷರು ಮತ್ತು ಸವ೯ ಸದಸ್ಯರು

ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಸರ್ವೋದಯ ಫ್ರೆಂಡ್ಸ್ ಬೆದ್ರ

ಕಲ್ಲಬೆಟ್ಟು ಶಾಲೆಯಲ್ಲಿ ಭಾಷಾ ಉತ್ಪತ್ತಿ, ಬಳಕೆ, ವಿವಿಧತೆ ಕುರಿತು ಉಪನ್ಯಾಸ 

ಮೂಡುಬಿದಿರೆ : ತಾಲೂಕಿನ ಪಿಎಂಶ್ರೀ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕಲ್ಲಬೆಟ್ಟುವಿನಲ್ಲಿ ಬುಧವಾರ ಭಾಷಾ ಉತ್ಪತ್ತಿ, ಬಳಕೆ, ವಿವಿಧತೆ ಕುರಿತು ಉಪನ್ಯಾಸ ಕಾಯ೯ಕ್ರಮ ನಡೆಯಿತು. 

   ಸಂಪನ್ಮೂಲ ವ್ಯಕ್ತಿ , ಬೆಂಗಳೂರು ಸ್ಪಾರ್ಕ್ ಅಕಾಡೆಮಿಯ ತರಬೇತುದಾರ ರಾಯಿ ರಾಜಕುಮಾರ ಅವರು ಭಾಷೆಯ ವೈವಿಧ್ಯತೆಗಳ ಬಗ್ಗೆ ಸಮಗ್ರವಾದ ವಿವರಣೆಯನ್ನು ನೀಡಿ ಪ್ರಾಯೋಗಿಕ ಉಪಯೋಗಗಳ ಬಗ್ಗೆ ಮಾಹಿತಿಯನ್ನು ನೀಡಿದರು.

ಸಾಂದರ್ಬಿಕವಾದ ಹಲವಾರು ವಿಚಾರಗಳನ್ನು ಪ್ರಸ್ತುತಪಡಿಸಿ ಭಾಷೆಗೆ ನಿರ್ದಿಷ್ಟ ಚೌಕಟ್ಟನ್ನು ಒದಗಿಸಿಕೊಟ್ಟ ವ್ಯಾಕರಣದ ವಿಷಯಗಳನ್ನು ಕೂಡ ಮಕ್ಕಳಿಗೆ ಮನದಟ್ಟು ಮಾಡಿಸಿ ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಮುಖ್ಯ ಶಿಕ್ಷಕಿ ನಿಶಾ ಅಧ್ಯಕ್ಷತೆ ವಹಿಸಿದ್ದರು. 

 ಶಿಕ್ಷಕರು, ವಿದ್ಯಾರ್ಥಿಗಳು ಕಾರ್ಯಕ್ರಮದ ಪ್ರಯೋಜನವನ್ನು ಪಡೆದುಕೊಂಡರು. 

ಹಿರಿಯ ಶಿಕ್ಷಕಿ ಅನಿತಾ ಸಿಕ್ವೇರಾ ಕಾಯ೯ಕ್ರಮ ನಿರೂಪಿಸಿದರು. ಡಯಾನ ಡೇಸಾ ವಂದಿಸಿದರು.

Post a Comment

0 Comments

Advertisement