ಜೆಇಇ ಪರೀಕ್ಷೆಯಲ್ಲಿ ವೈಬ್ರೆಂಟ್ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ

ಜಾಹೀರಾತು/Advertisment
ಜಾಹೀರಾತು/Advertisment
ಜೆಇಇ ಪರೀಕ್ಷೆಯಲ್ಲಿ ವೈಬ್ರೆಂಟ್ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ
*ಆದಿತ್ಯನಿಗೆ ಅತ್ಯುತ್ತಮ ಪರ್ಸೆಂಟೈಲ್
ಮೂಡುಬಿದಿರೆ : ರಾಷ್ಟ್ರಮಟ್ಟದ ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ಮೂಡುಬಿದಿರೆಯ ಕಲ್ಲಬೆಟ್ಟುವಿನಲ್ಲಿರುವ ನ್ಯೂ ವೈಬ್ರೆಂಟ್ ಪಿಯು ಕಾಲೇಜಿನ ಆದಿತ್ಯ ಅನಿಲ್ ಕೆಂಚಣ್ಣನವರ್ 99.8044641 (ಭೌತಶಾಸ್ತ್ರ 99.8091013, ರಸಾಯನಶಾಸ್ತ್ರ 98.7046712, ಗಣಿತಶಾಸ್ತ್ರ 99.8438804) ಪರ್ಸೆಂಟೈಲ್ ಪಡೆಯುವ ಮೂಲಕ ಅತ್ಯುತ್ತಮ ಪರ್ಸೆಂಟೈಲ್ ಪಡೆದ ವಿದ್ಯಾರ್ಥಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುತ್ತಾರೆ.

ಹತ್ತನೇ ತರಗತಿಯಲ್ಲಿ ಸಾಧಾರಣ ಅಂಕ ಪಡೆದು ಸಂಸ್ಥೆಯಲ್ಲಿ ದಾಖಲಾಗುವ ವಿದ್ಯಾರ್ಥಿಗಳು ಇಲ್ಲಿ ನೀಡುತ್ತಿರುವ ಅತ್ಯುನ್ನತ ಗುಣಮಟ್ಟದ ಪೂರಕ ತರಬೇತಿಯನ್ನು ಪಡೆದು ರಾಷ್ಟ್ರಮಟ್ಟದ ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಸಾಧನೆ ಮಾಡಿರುವುದು ಸಂಸ್ಥೆಯಿಂದ ನೀಡುತ್ತಿರುವ ತರಬೇತಿಯ ಗುಣಮಟ್ಟ ಮತ್ತು ಇಲ್ಲಿನ ಉಪನ್ಯಾಸಕರ ನಿರಂತರ ಪರಿಶ್ರಮಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಧನುಷ್ ಗುತ್ತಿ 98.7416995 ಪರ್ಸೆಂಟೈಲ್, ಮನ್ವಿತ್ ಎಸ್. ಪದ್ಮಶಾಲಿ 98.648776 ಪರ್ಸೆಂಟೈಲ್, ಸಮ್ಮಿತ್ ಎಚ್.ಎಸ್. 98.6168114 ಪರ್ಸೆಂಟೈಲ್, ಮಹೇಂದ್ರ ಎಂ. 98.3153881 ಪರ್ಸೆಂಟೈಲ್, ಅಕ್ಷಯ್ ಡಿ. 98.1064181 ಪರ್ಸೆಂಟೈಲ್, ರಿತಿಕ್ ಶೆಟ್ಟಿ 97.7817193 ಪರ್ಸೆಂಟೈಲ್, ಶಮಿತ್ ಪಿ. ಗೌಡ 97.5986939 ಪರ್ಸೆಂಟೈಲ್, ಆದಿತ್ಯ ಸಿ. ಪಟೇಲ್ 97.5840109 ಪರ್ಸೆಂಟೈಲ್, ಕಿಶನ್ ಶಿವಮೂರ್ತಯ್ಯ 97.4283709 ಪರ್ಸೆಂಟೈಲ್, ನಯನ್ ಕಾಮತ್ 97.3077071 ಪರ್ಸೆಂಟೈಲ್, ಬಿ. ವಿನಯ್ 97.0650703 ಪರ್ಸೆಂಟೈಲ್, ಶ್ರೇಯಸ್ ಯು ಶಾನುಭೋಗ್ 96.8829127 ಪರ್ಸೆಂಟೈಲ್, ರವಿತೇಜ್ ಎಸ್. 96.6113405 ಪರ್ಸೆಂಟೈಲ್, ಝೆಂಕರ್ ಎಂ.96.5628501 ಪರ್ಸೆಂಟೈಲ್, ಹರ್ಷಿತಾ ಸಿ. 96.4362546 ಪರ್ಸೆಂಟೈಲ್, ಪ್ರೀತಮ್ ಎಚ್. ಎಮ್. 95.8776445 ಪರ್ಸೆಂಟೈಲ್, ಗೌರವ್ ವೈ 95.0938413 ಪರ್ಸೆಂಟೈಲ್ ಪಡೆದು ಅಭೂತಪೂರ್ವ ಸಾಧನೆಯನ್ನು ಮಾಡಿರುತ್ತಾರೆ. ಕಾಲೇಜಿನಿಂದ ಪರೀಕ್ಷೆ ಬರೆದ ವಿದ್ಯಾರ್ಥಿಗಳಲ್ಲಿ 6 ವಿದ್ಯಾರ್ಥಿಗಳು 98ಕ್ಕಿಂತ ಅಧಿಕ, 18 ವಿದ್ಯಾರ್ಥಿಗಳು 95ಕ್ಕಿಂತ ಅಧಿಕ , 32 ವಿದ್ಯಾರ್ಥಿಗಳು 93ಕ್ಕಿಂತ ಅಧಿಕ ಪರ್ಸೆಂಟೈಲ್ ಪಡೆದು ಸಾಮಾನ್ಯ ವರ್ಗದಲ್ಲಿ ಜೆಇಇ ಅಡ್ವಾನ್ಸ್ ಗೆ ಅರ್ಹತೆಯನ್ನು ಪಡೆದುಕೊಂಡಿದ್ದಾರೆ. ಅಲ್ಲದೇ 46 ವಿದ್ಯಾರ್ಥಿಗಳು 90ಕ್ಕಿಂತ ಅಧಿಕ ಪರ್ಸೆಂಟೈಲ್ ಪಡೆದಿರುತ್ತಾರೆ. 
ವಿದ್ಯಾರ್ಥಿಗಳ ಸಾಧನೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಸಿಬ್ಬಂದಿಗಳು ಅಭಿನಂದನೆ ಸಲ್ಲಿಸಿದ್ದಾರೆ.

Post a Comment

0 Comments