ನೆಲ್ಲಿಕಾರ್ ಪಂಚಾಯತ್ ನಲ್ಲಿ ಬ್ಯಾಂಕಿಂಗ್ ಹಾಗೂ ಸೌರ ಶಕ್ತಿ ಜೀವನೋಪಾಯ ಬಗ್ಗೆ ಮಾಹಿತಿ ಶಿಬಿರ*

ಜಾಹೀರಾತು/Advertisment
ಜಾಹೀರಾತು/Advertisment
*ನೆಲ್ಲಿಕಾರ್ ಪಂಚಾಯತ್ ನಲ್ಲಿ ಬ್ಯಾಂಕಿಂಗ್ ಹಾಗೂ ಸೌರ ಶಕ್ತಿ ಜೀವನೋಪಾಯ ಬಗ್ಗೆ ಮಾಹಿತಿ ಶಿಬಿರ* 
ದಿನಾಂಕ 16.02.2026 ರಂದು T M G ಸುನಿಧಿ ಫೌಂಡೇಶನ್ ಟ್ರಸ್ಟ್ ಮಣಿಪಾಲ ಹಾಗೂ ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ್ ವತಿಯಿಂದ , ಬ್ರಾಹ್ಮರಿ ಮಹಿಳಾ ಸಂಜೀವಿನಿ ಒಕ್ಕೂಟ ಸದಸ್ಯರು ನೆಲ್ಲಿಕಾರು ಪಂಚಾಯತ್ ಇವರಿಗೆ ಆರ್ಥಿಕ ಸಾಕ್ಷರತೆ, ಬ್ಯಾಂಕಿಂಗ್ ಸೌಲಭ್ಯ ಹಾಗೂ ಸೌರ ಶಕ್ತಿ ಜೀವನೋಪಾಯ ಯಂತ್ರಗಳ ಬಗ್ಗೆ ಮಾಹಿತಿ ಕಾರ್ಯಕ್ರಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಭಾರತೀಯ ವಿಕಾಸ ಟ್ರಸ್ಟ್ ನ ಕಾರ್ಯಕ್ರಮ ವ್ಯವಸ್ತಾಪಕಾರದ ಜೀವನ್ ಕೊಲ್ಯ ಮಾತಾಡುತ ಪ್ರತಿ ನಾಗರೀಕರಿಗೂ ಹಣಕಾಸು ಸಾಕ್ಷರತೆ, ಬ್ಯಾಂಕಿಂಗ್ ಸೌಲಭ್ಯ, ಕೌಶಲ್ಯ ತರಬೇತಿ ಹಾಗೂ ಸೌರ ಶಕ್ತಿ ಜೀವನೋಪಾಯ ಗಳ ಬಗ್ಗೆ ಮಾಹಿತಿ ಇರಬೇಕು ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.ಮಂಗಳೂರು ಕೆನರಾ ಬ್ಯಾಂಕಿನ ಅಮೂಲ್ಯ ಆರ್ಥಿಕ ಸಾಕ್ಷರತ ಸಮಾಲೋಚಕಾರದ ಶ್ರೀಮತಿ ಲತೇಶ್ . B ಬ್ಯಾಂಕ್ ಸಾಲ ಸೌಲಭ್ಯ, ಬ್ಯಾಂಕ್ ವಿಮಾ ಯೋಜನೆ, ಸರ್ಕಾರದ ಸಾಮಾಜಿಕ ಭದ್ರತೆ ಯೋಜನೆಗಳು, ಡಿಜಿಟಲ್ ವಂಚನೆಯ ಜಾಗೃತಿ ಹಾಗೂ ಸ್ವ ಉದ್ಯೋಗದ ಸಾಲ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಸೆಲ್ಕೊ ಸಂಸ್ಥೆ ಅಧಿಕಾರಿಯಾದ ಶ್ರೀ ರವೀನಾ ಬಂಗೇರ ಇವರು ಸೂರ್ಯ ಘರ್ ಯೋಜನೆ ಹಾಗೂ ಸೌರಶಕ್ತಿ ಜೀವನೋಪಾಯ ಯಂತ್ರಗಳ ಬಗ್ಗೆ ಮಾಹಿತಿ ನೀಡಿದರು.ಸಂಜೀವಿನಿ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಸರೋಜ. ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ಶ್ರೀರಾಜು. ಹಾಗೂ ಮೂಡಬಿದರೆ ತಾಲೂಕು ಅಭಿಯಾನ ನಿರ್ವಹಣಾ ಘಟಕದ ವಲಯ ಮೇಲ್ವಿಚಾರಕರಾದ (ಕೃಷಿಯೇತರ ಚಟುವಟಿಕೆ) ಶ್ರೀಮತಿ ಪ್ರಜ್ವಿತ ವೇದಿಕೆಯಲ್ಲಿದ್ದರು. ಒಕ್ಕೂಟದ ಮುಖ್ಯ ಪುಸ್ತಕ ಬರಹ ಗಾರ ಶ್ರೀಮತಿ ಗೀತಾ ಜೈನ್ ನಿರೂಪಣೆ ಮಾಡಿದರು ,ಶ್ರೀಮತಿ.ಲತಾ. ಸ್ವಾಗತಿಸಿದರು. ಶ್ರೀಮತಿ.ರಾಜಶ್ರೀ. ವಂದನಾರ್ಪಣೆ ಸಲ್ಲಿಸಿದರು.ಒಕ್ಕೂಟದ ಸುಮಾರು 55 ಸದಸ್ಯರು ಮಾಹಿತಿ ಶಿಬಿರದ ಪ್ರಯೋಜನ ಪಡೆದರು.

Post a Comment

0 Comments