ಗಂಭೀರ ಆರೋಗ್ಯ ಸಮಸ್ಯೆಯಲ್ಲಿ ಮೂಡುಬಿದಿರೆಯ ಯುವತಿ : ಸಹಾಯಹಸ್ತದ ನಿರೀಕ್ಷೆಯಲ್ಲಿ ಕುಟುಂಬ

ಜಾಹೀರಾತು/Advertisment
ಜಾಹೀರಾತು/Advertisment
ಗಂಭೀರ ಆರೋಗ್ಯ ಸಮಸ್ಯೆಯಲ್ಲಿ ಮೂಡುಬಿದಿರೆಯ ಯುವತಿ : ಸಹಾಯಹಸ್ತದ ನಿರೀಕ್ಷೆಯಲ್ಲಿ ಕುಟುಂಬ


ಮೂಡುಬಿದಿರೆ: ಪುತ್ತಿಗೆ ಗ್ರಾಮದ ಬೀರಬೆಟ್ಟು ಸಂಪಿಗೆ ನಿವಾಸಿ ಜಯಕರ ಅವರ ಪುತ್ರಿ ಅಕ್ಷತಾ ಕುಮಾರಿ ಅವರು ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಪ್ರಸ್ತುತ ಕೊಯಮುತ್ತೂರಿನ ಕೋವೈ ಮೆಡಿಕಲ್ ಸೆಂಟರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಕ್ಷತಾ ಕುಮಾರಿ ಅವರು ಕಿಡ್ನಿ ವೈಫಲ್ಯ ಹಾಗೂ‌ ಸರ್ಪಸುತ್ತು ಸೇರಿದಂತೆ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆಗೆ ಅಪಾರ ವೆಚ್ಚವಾಗುತ್ತಿದೆ. ಈಗಾಗಲೇ ಸುಮಾರು 300 ದಿನಗಳಿಗೂ ಅಧಿಕ ಕಾಲ ಆಸ್ಪತ್ರೆಯಲ್ಲಿ ದಾಖಲಾಗಿರುವುದರಿಂದ ವಯಸ್ಸಾದ ತಂದೆ-ತಾಯಿಗಳಿಗೆ ಚಿಕಿತ್ಸೆ ವೆಚ್ಚವನ್ನು ಭರಿಸುವುದು ಅಸಾಧ್ಯವಾಗುತ್ತಿದೆ.

ಅಕ್ಷತಾ ಕುಮಾರಿ ಅವರ ತಂದೆ ದೀರ್ಘಕಾಲದ ಸಕ್ಕರೆ ಖಾಯಿಲೆಯಿಂದ ಹಾಸಿಗೆ ಹಿಡಿದ ಸ್ಥಿತಿಯಲ್ಲಿದ್ದು, ಕುಟುಂಬವು ಆರ್ಥಿಕವಾಗಿ ತೀವ್ರ ಸಂಕಷ್ಟದಲ್ಲಿದೆ. ಬಡ ಕುಟುಂಬದ ಹಿನ್ನೆಲೆಯಿರುವುದರಿಂದ ಮುಂದಿನ ಚಿಕಿತ್ಸೆಗೆ ಅಗತ್ಯವಿರುವ ಹಣವನ್ನು ಹೊಂದಿಸುವುದು ಅಸಾಧ್ಯವಾಗಿದ್ದು, ಸಹೃದಯ ಜನರಿಂದ ನೆರವು ನಿರೀಕ್ಷಿಸಲಾಗಿದೆ.

ಮೂಡುಬಿದಿರೆ ಪುರಸಭೆಯಲ್ಲಿ ತಾತ್ಕಾಲಿಕ ನೆಲೆಯಲ್ಲಿ ಸಿಬ್ಬಂದಿಯಾಗಿರುವ ಅಕ್ಷತಾ ಕುಮಾರಿಯ ಚಿಕಿತ್ಸೆಗೆ ತಮ್ಮಿಂದಾಗುವ ಧನಸಹಾಯವನ್ನು ನೀಡುವಂತೆ ಕುಟುಂಬವು ಸಾರ್ವಜನಿಕರಲ್ಲಿ ಕಳಕಳಿಯ ಮನವಿ ಮಾಡಿಕೊಂಡಿದೆ.




ಖಾತೆ ವಿವರ:

ಹೆಸರು : Akshatha Kumari B
ಖಾತೆ ಸಂಖ್ಯೆ : 50100342289599
ಬ್ಯಾಂಕ್ : HDFC ಬ್ಯಾಂಕ್
ಶಾಖೆ : ಮೂಡುಬಿದಿರೆ
IFSC ಕೋಡ್ : HDFC0002324

Post a Comment

0 Comments