ನಾಗವರ್ಮ ಜೈನ್
ಮೂಡುಬಿದಿರೆ: ಪುರಸಭೆ ವ್ಯಾಪ್ತಿಯ ಅಲಂಗಾರು ನಿವಾಸಿ ನಾಗವರ್ಮ ಜೈನ್ (85) ಅನಾರೋಗ್ಯದಿಂದ ಶುಕ್ರವಾರ ಸಾಯಂಕಾಲ ನಿಧನರಾಗಿದ್ದಾರೆ. ಪತ್ನಿ, ಪುತ್ರಿಯನ್ನು ಅಗಲಿದ್ದಾರೆ.
ಅವರು ಅಲಂಗಾರಿನಲ್ಲಿ ಕಳೆದ 50 ವರ್ಷಕ್ಕೂ ಅಧಿಕ ಕಾಲದಿಂದ ವರ್ಮಾ ಸ್ಟೋರ್ ಮುನ್ನಡೆಸಿದ್ದು, ಪರಿಸರದಲ್ಲಿ ಜನಾನುರಾಗಿಯಾಗಿದ್ದರು. ಕೇಂದ್ರದ ಮಾಜಿ ಸಚಿವ ವೀರಪ್ಪ ಮೊಯಿಲಿ,ಮಾಜಿ ಸಚಿವ ದಿ. ಕೆ.ಅಮರನಾಥ ಶೆಟ್ಟ ಸಹಪಾಠಿಯಾಗಿದ್ದ ಅವರು, ಆಂಧ್ರಪ್ರದೇಶದ ರಾಜ್ಯಪಾಲ ಅಬ್ದುಲ್ ನಝೀರ್, ಪುರಸಭೆ ಹಿರಿಯ ಸದಸ್ಯ ಪಿ.ಕೆ ಥೋಮಸ್ ಅವರ ಬಾಲ್ಯದ ಒಡನಾಡಿಯಾಗಿದ್ದರು.


0 Comments