ಬೃಹತ್ ಹಿಂದೂ ಸಂಗಮ : ಕಲ್ಲಬೆಟ್ಟು ಮಂಡಲದಿಂದ ಹೊನಲು ಬೆಳಕಿನ ಪಂದ್ಯಾಟ

ಜಾಹೀರಾತು/Advertisment
ಜಾಹೀರಾತು/Advertisment
ಬೃಹತ್ ಹಿಂದೂ ಸಂಗಮ : ಕಲ್ಲಬೆಟ್ಟು ಮಂಡಲದಿಂದ ಹೊನಲು ಬೆಳಕಿನ ಪಂದ್ಯಾಟ

ಮೂಡುಬಿದಿರೆ : ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ನೂರು ವರುಷಗಳು ತುಂಬಿದ ಹಿನ್ನೆಲೆಯಲ್ಲಿ ಕಲ್ಲಬೆಟ್ಟು ಮಂಡಲದ ವತಿಯಿಂದ ಜ. 25ರಂದು ನಡೆಯಲಿರುವ ಬೃಹತ್ ಹಿಂದೂ ಸಂಗಮದ ಪ್ರಯುಕ್ತ ಕಲ್ಲಬೆಟ್ಟು, ಕರಿಂಜೆ ಹಾಗೂ ಮಾರೂರು ಗ್ರಾಮದ ಹಿಂದೂ ಸಮಾಜ ಬಾಂಧವರಿಗೆ ಹೊನಲು ಬೆಳಕಿನ ಪಂದ್ಯಾಟವು ಕಲ್ಲಬೆಟ್ಟು ತೆಂಕಬೆಟ್ಟುಗುತ್ತು ರಸ್ತೆಯ ಸತ್ಯನಾರಾಯಣ ಕಟ್ಟೆ ಬಳಿ ಶನಿವಾರ ಸಂಜೆ ನಡೆಯಿತು.
  ಪಂದ್ಯಾಟಗಳು : ಯುವಕರ ವಿಭಾಗಕ್ಕೆ ವಾಲಿಬಾಲ್, ಹಗ್ಗಜಗ್ಗಾಟ, ಮಹಿಳೆಯರ ವಿಭಾಗಕ್ಕೆ ಸಂಗೀತ ಕುಚಿ೯, ಹಗ್ಗಜಗ್ಗಾಟ ಮತ್ತು ತ್ರೋಬಾಲ್ ಹಾಗೂ 16 ವಷ೯ದ ಒಳಗಿನ ಮಕ್ಕಳಿಗೆ ಲಗೋರಿ ಮತ್ತು ಹಗ್ಗಜಗ್ಗಾಟ ಪಂದ್ಯಾಟಗಳು ನಡೆಯಿತು. 
  ಉದ್ಘಾಟನೆ :
ಕಲ್ಲಬೆಟ್ಟು ಸಾವ೯ಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿಯ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್ ಅವರು ಭಾರತ ಮಾತೆಗೆ ದೀಪ ಬೆಳಗಿಸುವ ಮೂಲಕ ಪಂದ್ಯಾಟಕ್ಕೆ ಚಾಲನೆ ನೀಡಿದರು.
 ಕಲ್ಲಬೆಟ್ಟು ಹಿಂದೂ ಸಂಗಮ ಸಮಿತಿಯ ಸಂಚಾಲಕ ನವೀನ್ ಕುಮಾರ್, ಸಹ ಸಂಚಾಲಕ ಪ್ರವೀಣ್ ಶೆಟ್ಟಿ, ವ್ಯವಸ್ಥಾ ಪ್ರಮುಖ್ ಕಿರಣ್ ನೆತ್ತೋಡಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಕಲ್ಲಬೆಟ್ಟು ಮಹಮ್ಮಾಯಿ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯ ಗೋಪಾಲ್ ಕೋಟ್ಯಾನ್, ಪುರಸಭೆಯ ಮಾಜಿ ಉಪಾಧ್ಯಕ್ಷೆ ಸುಜಾತ ಶಶಿಕಿರಣ್, ಹರೀಶ್ ಶೆಟ್ಟಿ ಮಜಲೋಡಿ, ಪ್ರದೀಪ್ ರೈ, ಮತ್ತಿತರರು ಈ ಸಂದಭ೯ದಲ್ಲಿದ್ದರು.
 ತೀಪು೯ಗಾರರಾಗಿ ಕಮಲಾಕ್ಷ ರಾವ್, ಶಿಕ್ಷಕರಾದ ಧ್ಯಾನ್, ಸಂತೋಷ್ , ಸುರೇಂದ್ರ ಸಹಕರಿಸಿದರು. ರೋಹನ್ ಅತಿಕಾರಬೆಟ್ಟು ಮತ್ತು ಪ್ರಶಾಂತ್ ಶೆಟ್ಟಿ,ಕಾಯ೯ಕ್ರಮ ನಿರೂಪಿಸಿದರು.

Post a Comment

0 Comments