ಶ್ರೀ ಕ್ಷೇತ್ರ ಅಂಬಾಡಬೆಟ್ಟುವಿನ ಬ್ರಹ್ಮಕುಂಭಾಭಿಷೇಕ ಹಾಗೂ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ
ಮೂಡುಬಿದಿರೆ: ಹೊಸಬೆಟ್ಟು ಗ್ರಾಮದ ಶ್ರೀ ಕ್ಷೇತ್ರ ಅಂಬಾಡಬೆಟ್ಟುವಿನಲ್ಲಿ ನಡೆಯಲಿರುವ ಬ್ರಹ್ಮಕುಂಭಾಭಿಷೇಕ ಹಾಗೂ ಜಾತ್ರೋತ್ಸವದ ಆಮಂತ್ರಣ ಪತ್ರಿಕೆಯನ್ನು ಮಕರ ಸಂಕ್ರಾಂತಿಯ ಶುಭ ದಿನದಂದು ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ರಮೇಶ್ ಶೆಟ್ಟಿ, ಆನುವಂಶಿಕ ಆಡಳಿತ ಮೊಕ್ತೇಸರರಾದ ಅಶೋಕ ಕಡಂಬ, ಪ್ರಮುಖರಾದ ಯೋಗೀಂದ್ರ ಆಚಾರ್ಯ, ಕಿಶೋರ್ ಮೊಗೇರಾಯ, ಸ್ವಯಂಪ್ರಭ ಜೈನ್, ರವೀಂದ್ರ ಪೂಜಾರಿ, ಸದಾಶಿವ ಪೂಜಾರಿ, ಅಶೋಕ್ ಕುಮಾರ್, ಸುಜಾತ ಶ್ಯಾಮ್ ಕುಂದರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.



0 Comments