ಮರಾಟಿ ಸಮಾಜ ಸೇವಾ ಸಂಘದ ವಾಷಿ೯ಕ ಕ್ರೀಡಾಕೂಟ
ಮೂಡುಬಿದಿರೆ: ಪುತ್ತಿಗೆ ಮಹಾಮ್ಮಾಯಿ ಮರಾಟಿ ಸಮಾಜ ಸೇವಾ ಸಂಘದ ವಾರ್ಷಿಕ ಕ್ರೀಡಾಕೂಟವು ಗುಡ್ಡೆಯಂಗಡಿಯ ಸಭಾಭವನದ ವಠಾರದಲ್ಲಿ ನಡೆಯಿತು.
ಮಂಗಳೂರು ಕರ್ನಾಟಕ ಬ್ಯಾಂಕ್‌ನ ಅಧಿಕಾರಿಗಳಾದ ಪ್ರವೀಣ್ ನಾಯ್ಕ್ ಕ್ರೀಡಾಕೂಟಕ್ಕೆ ಚಾಲನೆ ನೀಡಿ, ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.
ನರಸಿಂಹ ನಾಯ್ಕ ಅಧ್ಯಕ್ಷತೆವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪುತ್ತಿಗೆ ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷರಾದ ಶ ಶಶಿಧರ ಪಿ. ನಾಯಕ್ ಭಾಗವಹಿಸಿದ್ದರು. ಸಂಘದ ಗೌರವಾಧ್ಯಕ್ಷ ವಿಶ್ವನಾಥ ನಾಯ್ಕ, ಕ್ರೀಡಾ ಕಾರ್ಯದರ್ಶಿ ಭುವನೇಂದ್ರ ಉಪಸ್ಥಿತರಿದ್ದರು.



0 Comments