20 ಅಡಿ ಆಳದ ಸುರಂಗದೊಳಗೆ ಬಿದ್ದ ವ್ಯಕ್ತಿಯನ್ನು ರಕ್ಷಿಸಿದ ಕಾಕ೯ಳ ಅಗ್ನಿಶಾಮಕದ ಸಿಬಂದಿಗಳು

ಜಾಹೀರಾತು/Advertisment
ಜಾಹೀರಾತು/Advertisment

 20 ಅಡಿ ಆಳದ ಸುರಂಗದೊಳಗೆ ಬಿದ್ದ ವ್ಯಕ್ತಿಯನ್ನು ರಕ್ಷಿಸಿದ ಕಾಕ೯ಳ ಅಗ್ನಿಶಾಮಕದ ಸಿಬಂದಿಗಳು


ಮೂಡುಬಿದಿರೆ : ಪುತ್ತಿಗೆ ಗ್ರಾ. ಪಂಚಾಯತ್ ವ್ಯಾಪ್ತಿಯ ಬಂಗ್ಲೆ ಎಂಬಲ್ಲಿರುವ 30 ಅಡಿ ಆಳದ ಬಾವಿಯಲ್ಲಿರುವ ಸುಮಾರು 20 ಅಡಿ ಆಳದ ಸುರಂಗದೊಳಗೆ ಆಕಸ್ಮಿಕವಾಗಿ ಬಿದ್ದು ಸಿಲುಕಿಕೊಂಡ ವ್ಯಕ್ತಿಯನ್ನು ಕಾಕ೯ಳದ ಅಗ್ನಿಶಾಮಕ ಇಲಾಖೆಯ ಸಿಬಂಧಿಗಳು ಮೇಲಕ್ಕೆತ್ತಿ ರಕ್ಷಿಸಿದ ಘಟನೆ ಗುರುವಾರ ಅಪರಾಹ್ನ ನಡೆದಿದೆ. 


ಸುಮಾರು 38 ವರ್ಷ ಪ್ರಾಯದ ರಾಧಾಕೃಷ್ಣ (ಜಾಣಪ್ಪ ಗೌಡರ ಮಗ)ಬಾವಿಯ ಸುರಂಗದೊಳಗೆ ಬಿದ್ದ ವ್ಯಕ್ತಿ. 


 ಕಾರ್ಕಳದ ಅಗ್ನಿಶಾಮಕ ದಳದ ಮುಖ್ಯ ಅಧಿಕಾರಿ ಚಂದ್ರಶೇಖರ್ ಇವರ ನೇತೃತ್ವದಲ್ಲಿ ಗುರುವಾರ ಅಪರಾಹ್ನ ಆಗಮಿಸಿದ ಸಿಬ್ಬಂದಿಗಳಾದ ಜಯ ಮೂಲ್ಯ ಹಾಗೂ ರೂಪೇಶ್ ಇವರೊಂದಿಗೆ ನಿತ್ಯಾನಂದ ಮತ್ತು ಬಸವರಾಜ ಇವರ ಸಹಕಾರದೊಂದಿಗೆ ಗುರುವಾರ ಸುಮಾರು 2 ಗಂಟೆಗಳ ಕಾಲ ಸಾಹಸಮಯ ಕಾರ್ಯಚರಣೆ ನಡೆಸಿ ರಕ್ಷಣೆ ಮಾಡಿದ್ದಾರೆ.

 ಪುತ್ತಿಗೆ ಪಂಚಾಯತ್ ನ ಮಾಜಿ ಅಧ್ಯಕ್ಷ ಪ್ರವೀಣ್ ಶೆಟ್ಟಿ ಸಹಕರಿಸಿದ್ದರು.

Post a Comment

0 Comments